ETV Bharat / state

ವಿದ್ಯಾದೇವಿ ಸರಸ್ವತಿಯೋ? ಶಾಂತಿಪ್ರಿಯ ಬುದ್ದನೋ? ಬೆಂಗಳೂರು ವಿವಿಯಲ್ಲಿ ಪ್ರತಿಮೆ ವಿವಾದ - undefined

ಸರಸ್ವತಿ ಮತ್ತು ಬುದ್ಧನ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮುಂಭಾಗ ಬೃಹತ್ ಪ್ರತಿಭಟನೆ ನಡೆದಿದೆ.

ಪ್ರತಿಮೆ ವಿವಾದದಲ್ಲಿ ಬೆಂಗಳೂರು ವಿವಿ
author img

By

Published : May 7, 2019, 10:38 AM IST

Updated : May 7, 2019, 10:44 AM IST

ಬೆಂಗಳೂರು: ಬೆಂಗಳೂರು ವಿವಿ ಮುಂಭಾಗದಲ್ಲಿ ಬುದ್ದ ಹಾಗು ಸರಸ್ವತಿಯ ಪ್ರತಿಮೆ ಸ್ಥಾಪನೆ ವಿಚಾರವಾಗಿ ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ.

ವಿವಿ ಪ್ರಧಾನ ಕಚೇರಿ ಮುಂಭಾಗ 1,973 ರ ಕಾಲಾವಧಿಯಲ್ಲಿ ಸರಸ್ವತಿ ದೇವಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಹಳೆಯದಾದ ಸರಸ್ವತಿ ವಿಗ್ರಹ ವಿರೂಪಗೊಂಡ ಹಿನ್ನೆಲೆಯಲ್ಲಿ,ಹೊಸ ವಿಗ್ರಹ ಕೂರಿಸಲು ವಿ.ವಿ ಏರ್ಪಾಡು ಮಾಡಿತ್ತು.

ಪ್ರತಿಮೆ ವಿವಾದದಲ್ಲಿ ಬೆಂಗಳೂರು ವಿವಿ

ಸರಸ್ವತಿಯ ನೂತನ ವಿಗ್ರಹ ಸ್ಥಾಪನೆಗೆ 2.50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಉದ್ಘಾಟನೆಗೆ ದಿನ ನಿಗದಿಯೂ ಆಗಿತ್ತು. ಆದರೆ ಕೆಲ ವಿದ್ಯಾರ್ಥಿಗಳು ಸರಸ್ವತಿ ವಿಗ್ರಹವನ್ನು ತೆರವು ಮಾಡಿರುವ ಜಾಗದಲ್ಲಿ ಬುದ್ಧನ ವಿಗ್ರಹವನ್ನಿಟ್ಟಿದ್ದಾರೆ. ಬುದ್ದನ ಮೂರ್ತಿಯನ್ನು ತೆರವು ಮಾಡಲು ವಿವಿ ಸಿಬ್ಬಂದಿ ಮುಂದಾದಾಗ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಒಟ್ಟು ಸೇರಿದ ಕೆಲ ವಿದ್ಯಾರ್ಥಿಗಳು ಬುದ್ದನ ಮೂರ್ತಿ ಪ್ರತಿಷ್ಟಾಪಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Intro:ವಿದ್ಯೆ ಕೊಡುವ ಸರಸ್ವತಿಯೋ?? ಶಾಂತಿ ಪ್ರಿಯ ಬುದ್ದನೋ?? ಪ್ರತಿಮೆ ವಿವಾದದಲ್ಲಿ ಬೆಂಗಳೂರು ವಿವಿ???

ಬೆಂಗಳೂರು: ಬೆಂಗಳೂರು ವಿವಿಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಆಗಾಗ ಗಲಾಟೆ,‌ವಾದ- ವಿವಾದಗಳು ಆಗೋದು ಮಾಮೂಲಿ.. ಸದ್ಯ ವಿದ್ಯೆ ಕೊಡುವ ಸರಸ್ವತಿ ಪ್ರತಿಮೆಯೋ, ಇಲ್ಲ ಶಾಂತಿ ಪ್ರಿಯಾ ಬುದ್ಧನ ಪ್ರತಿಮೆಯೋ ಎಂಬ ವಿವಾದ ಭುಗಿಲೆದಿದೆ..‌ಹೌದು, ಬೆಂಗಳೂರು ವಿವಿ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ.. ಸರಸ್ವತಿ ಮತ್ತು ಬುದ್ಧನ ಮೂರ್ತಿ ವಿಚಾರಕ್ಕೆ ನಿನ್ನೆ ಬೆಂಗಳೂರು ವಿವಿ ಮುಂಭಾಗ ದೊಡ್ಡ ಪ್ರತಿಭಟನೆಯೇ ನಡೆದಿದೆ..

ಅಂದಹಾಗೇ, ಬೆಂಗಳೂರು ವಿವಿ ಪ್ರಧಾನ ಕಚೇರಿ ಮುಂಭಾಗ ಹಲವು ವರ್ಷಗಳ ಹಿಂದೆ ಅಂದರೆ 19 73 ರಿಂದಲೇ ಸರಸ್ವತಿ ದೇವಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸರಸ್ವತಿ ವಿಗ್ರಹ ವಿರೂಪಗೊಂಡ ಹಿನ್ನೆಲೆ, ಅದನ್ನ ತೆರವು ಮಾಡಿ ಹೊಸ ವಿಗ್ರಹ ಕೂರಿಸಲು ಏರ್ಪಾಡು ಮಾಡಲಾಗಿತ್ತು. ಇದಕ್ಕಾಗಿ
2.50ಲಕ್ಷ ರೂಪಾಯಿ ವೆಚ್ಚ ಮಾಡಿ ಹೊಸ ಪ್ರತಿಮೆ
ಸಿದ್ದಪಡಿಸಲಾಗಿದೆ.. ಇನ್ನೂ 2 ದಿನಗಳಲ್ಲಿ ಉದ್ಘಾಟನೆ ಮಾಡಲು ತಯಾರಿ ನಡೆದಿತ್ತು.

ಆದರೆ ಕೆಲ ವಿದ್ಯಾರ್ಥಿಗಳು ಸರಸ್ವತಿ ವಿಗ್ರಹವನ್ನು ತೆರವು ಮಾಡಿದ್ದ ಜಾಗದಲ್ಲಿ ಬುದ್ಧನ ವಿಗ್ರಹವನ್ನು ಇಟ್ಟು ವಿವಾದ ಸೃಷ್ಟಿ ಮಾಡಿದ್ದಾರೆ.. ಅದನ್ನು ತೆರವು ಮಾಡಲು ವಿವಿ ಸಿಬ್ಬಂದಿ ಮುಂದಾದಾಗ ವಿದ್ಯಾರ್ಥಿಗಳ ವಿರೋಧ ವ್ಯಕ್ತವಾಗಿದೆ.. ಇದಕ್ಕಾಗಿ ತಡರಾತ್ರಿ ಸಿಂಡಿಕೇಟ್ ಸಭೆಯನ್ನೂ ಕರೆಯಲಾಗಿತ್ತು..‌ಆದರೆ ಯಾವುದೇ ಪ್ರಯೋಜನವಾಗಿಲ್ಲ.. ಇತ್ತ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಪೊಲೀಸರು ಮಧ್ಯ ಪ್ರವೇಶಿ ತಿಳಿಗೊಳಿಸಿದ್ದರು...
ಇಂದು ಸರ್ಕಾರಿ ರಜೆ ಇರುವುದರಿಂದ ಸದ್ಯ
ಬೂದಿ ಮುಚ್ಚಿದ ಕೆಂಡದಂತಾಗಿರೋ ವಿವಿ ಆವರಣ, ಯಾವಾಗ ಬೇಕಾದರೂ ಸಿಡಿಯಬಹುದು.. ವಿದ್ಯಾ ಸರಸ್ವತಿಗೂ ಶಾಂತಿ ಪ್ರಿಯ ಬುದ್ಧನ ಪ್ರತಿಮೆ ಕಥೆಯೇನು ಎಂಬುದು ತಿಳಿಯಬೇಕಿದೆ...

KN_BNG_01_07_BANGALORE_VV_PRATHIME_GALATE_SCRIPT_DEEPA_7201801
Body:..Conclusion:..
Last Updated : May 7, 2019, 10:44 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.