ETV Bharat / state

ಹೈಕೋರ್ಟ್ ಆದೇಶದಂತೆ ಹೆಚ್​ಡಿಕೆ ಬಿಡದಿ ಜಮೀನು ಒತ್ತುವರಿ ತೆರವಿಗೆ ಕ್ರಮ: ಚೆಲುವರಾಯಸ್ವಾಮಿ - ಈಟಿವಿ ಭಾರತ ಕನ್ನಡ

ಹೆಚ್​ಡಿಕೆ ಒಡೆತನದ ಬಿಡದಿ ಜಮೀನು ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಬಿಡದಿ ಜಮೀನು ಒತ್ತುವರಿ ತೆರವಿಗೆ ಕ್ರಮ
ಬಿಡದಿ ಜಮೀನು ಒತ್ತುವರಿ ತೆರವಿಗೆ ಕ್ರಮ
author img

By ETV Bharat Karnataka Team

Published : Nov 16, 2023, 8:49 PM IST

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಅವರ ಒಡೆತನದ ಬಿಡದಿ ಜಮೀನು ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶ ಮಾಡಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ‌ ಎಂಬ ಕಾರಣಕ್ಕೆ ಕ್ರಮಕ್ಕೆ ಮುಲಾಜು ತೋರಿಸುವುದಿಲ್ಲ. ಬಿಡದಿ ಜಮೀನು ವಿಚಾರವಾಗಿ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಬಳಿ ಕೇಳಿ.‌ ಹೈಕೋರ್ಟ್ ಒತ್ತುವರಿ ತೆರವು ಆದೇಶ ಮಾಡಿದೆ. ಹೈಕೋರ್ಟ್ ಆದೇಶದ ಬಗ್ಗೆ ಸರ್ಕಾರ ಏನು ಮಾಡುತ್ತೆ ಅದನ್ನು ಮಾಡುತ್ತದೆ. ಮಾಜಿ ಸಿಎಂ‌ ಎಂಬ ಕಾರಣಕ್ಕೆ ಮುಲಾಜು ಮಾಡಲ್ಲ, ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುತ್ತದೆ. ಆದರೆ, ಯಾವಾಗ ಎಂದು ಹೇಳಲು ಆಗುವುದಿಲ್ಲ ಎಂದರು.

ಕುಮಾರಸ್ವಾಮಿ ನಾನು ಬೇರೆಯವರ ಆಸ್ತಿ ಲೂಟಿ ಮಾಡಿಲ್ಲ ಎನ್ನುತ್ತಾರೆ. ಹಾಗಾದರೆ ಅದರ ಬಗ್ಗೆ ತನಿಖೆ ಮಾಡಿಸಲಿ. ಎಲ್ಲಾ ರಾಜಕಾರಣಿಗಳ ಬಗ್ಗೆ ತನಿಖೆ ಮಾಡಬೇಕೋ ಅಥವಾ ಆಯ್ದ ಕೆಲವರ ಮೇಲೆ ತನಿಖೆ ಮಾಡಬೇಕೋ ಎಂಬುದನ್ನು ಪ್ರಧಾನಿ ಬಳಿ ಹೇಳಿ ತನಿಖೆ ಮಾಡಸಲಿ. ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇದೆ ಎಂದರು. ನಾನು ಅವರ ರೀತಿಯಲ್ಲಿ ಬಿಡದಿಯಲ್ಲಿ ಒತ್ತುವರಿ ಮಾಡಿಲ್ಲ, ಗ್ರ್ಯಾಂಟ್ ಮಾಡಿರುವ ಜಮೀನು‌ ಪಡೆದಿಲ್ಲ. ನಾನು ಜಮೀನನ್ನು ಖರೀದಿ ಮಾಡಿದ್ದೇವೆ. ಯಾವುದೇ ಗ್ರ್ಯಾಂಟ್ ಜಮೀನು ಪಡೆದರೆ ಅಥವಾ ಒತ್ತುವರಿ ಮಾಡಿದರೆ ಅದು ನನ್ನ ಅಪರಾಧ. ಆದರೆ ನಾನು ಯಾವುದೇ ಜಮೀನು ಒತ್ತುವರಿ ಮಾಡಿಲ್ಲ. ನಾನು ಏನಾದರೂ ಒತ್ತುವರಿ ಮಾಡಿದರೆ ಕ್ರಮ ಆಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯತೀಂದ್ರ ವಿಡಿಯೋ ‌ವಿವಾದಕ್ಕೆ ಪ್ರತಿಕ್ರಿಯೆ ‌ನೀಡಿ,‌ ಯತೀಂದ್ರ ಮಾಜಿ‌ ಶಾಸಕರು, ಅವರು ಜನ ಪರ ಕೆಲಸ ಮಾಡಬಾರದು ಎಂದು ಕಾನೂನಿನಲ್ಲಿ ಇದ್ಯಾ? ಇವರ ಕುಟುಂಬದಲ್ಲಿ ‌ಅಧಿಕಾರ ಇದ್ದಾಗ ಅಧಿಕಾರಿಗಳ ಜೊತೆಗೆ ‌ಮಾತನಾಡಿಲ್ವಾ?. ಜನರ ಜೊತೆಗೆ ಸಂಪರ್ಕ ಇರಲಿಲ್ಲವೇ?. ಯತೀಂದ್ರ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿಲ್ಲ. ಯತೀಂದ್ರ ಸಾರ್ವಜನಿಕರು ಬಂದಾಗ ಭೇಟಿ ಆಗಿದ್ದಾರೆ. ನಾಲ್ಕೈದು ಜನಕ್ಕೆ ಸಹಾಯ ಮಾಡಿದ್ದಾರಾ? ಸಹಾಯ ಧನ ಕೊಟ್ಟಿದ್ದಾರಾ? ಅಥವಾ ಮನೆ ಕೊಡಲು ಹೇಳಿದ್ದಾರಾ? ಬೆಳಗ್ಗೆ ಎದ್ದರೆ ಯತೀಂದ್ರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಯತೀಂದ್ರ ಸೌಜನ್ಯಯುತ ವ್ಯಕ್ತಿ.‌ ಯತೀಂದ್ರ ಅವರು ಆಶ್ರಯ ಕಮಿಟಿಯಲ್ಲಿದ್ದಾರೆ, ಅವರಿಗೆ ಅಧಿಕಾರ ಇದೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಅವರು ಮಾತನಾಡಿದ್ದಾರಾ?. ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಈ‌ ಬಾರಿ ಸಮ್ಮಿಶ್ರ ಸರ್ಕಾರ ಬರಲಿದೆ ಅಂದುಕೊಂಡಿದ್ದರು. ಅವರು ಸಿಎಂ ಆಗಿದ್ದರೆ ನಾವು ಸಂತಸ ಪಡುತ್ತಿದ್ದೆವು. ಇದೆಲ್ಲ ಬಿಟ್ಟು, ಎಚ್​ಡಿಕೆ ಬರ ವಿಚಾರವಾಗಿ ನಮ್ಮ ಸಚಿವರು ಬಂದರೆ ಭೇಟಿಗೆ ಅವಕಾಶ ಕೊಡಲು ಕೇಂದ್ರಕ್ಕೆ ಹೇಳಲಿ ಎಂದರು.

ಇದನ್ನೂ ಓದಿ: ಬಿಜೆಪಿಗೆ BSY ಅನಿವಾರ್ಯ, ಆದರೆ ವಿಜಯೇಂದ್ರ ಯಶಸ್ವಿಯಾಗೋದು ಕಷ್ಟ: ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.