ETV Bharat / state

ವಂಚಕ ಮನ್ಸೂರ್​ ಬೆಂಗಳೂರಿಗೆ... ಶಾಂತಿನಗರ ಕಚೇರಿಗೆ ಕರೆತಂದ ಇಡಿ ಅಧಿಕಾರಿಗಳು

author img

By

Published : Jul 20, 2019, 7:51 AM IST

Updated : Jul 20, 2019, 10:01 AM IST

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್​​ನನ್ನ ದೆಹಲಿಯಿಂದ ಬೆಂಗಳೂರಿಗೆ ಕರೆತರಲಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ಮನ್ಸೂರ್ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಮನ್ಸೂರ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್​​ನನ್ನ ಇಡಿ ಅಧಿಕಾರಿಗಳು ದೆಹಲಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.20ಕ್ಕೆ ಕರೆತಂದ ಅಧಿಕಾರಿಗಳು ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಇಡಿಕಚೇರಿಗೆ ಮನ್ಸೂರ್ ಖಾನ್​ರನ್ನ ಕರೆದೊಯ್ಯುತ್ತಿರುವುದು

ದೆಹಲಿಯಲ್ಲಿ ಬಂಧಿಸಲ್ಪಟ್ಟಿದ್ದ ಮನ್ಸೂರ್​ನನ್ನು ಕೆಲ ಕಾನೂನು ಪ್ರಕ್ರಿಯೆ ಮುಗಿಸಿ, ಅಲ್ಲಿನ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಈಗಾಗಲೇ ಐಎಂಎ ಮೂಲಕ ಮನ್ಸೂರ್ ಖಾನ್ 200 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಸ್ತಿ ಮಾಡಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದ್ದು, ವಿಚಾರಣೆಯಿಂದ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಸದ್ಯ ಇಡಿ ಅಧಿಕಾರಿಗಳ ವಶದಲ್ಲಿದ್ದು, ಇಡಿ ವಿಚಾರಣೆ ಮುಗಿದ ನಂತರ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದ್ದಾರೆ. ಯಾಕೆಂದರೆ ಈಗಾಗಲೇ ಐಎಂಎ ವಂಚನೆ ಪ್ರಕರಣದಲ್ಲಿ ಹೂಡಿಕೆದಾರರು ಕಮರ್ಷಿಯಲ್‌ ಠಾಣೆಯಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ದೂರು ದಾಖಲಿಸಿದ್ದಾರೆ.

Intro:ಐ ಎಂ ಎ ಬಹುಕೋಟಿ ವಂಚನೆ ಪ್ರಕರಣ
ಮನ್ಸೂರ್ ಖಾನ್ ನಗರಕ್ಕೆ ಕರೆ ತಂದ ತನಿಖಾಧಿಕಾರಿಗಳು

ಐ ಎಂ ಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಮನ್ಸೂರ್ ಖಾನ್ ನನ್ನ ಇಡಿ ಅಧಿಕಾರಿಗಳು ದೆಹಲಿಯಿಂದ
ವಿಮಾನದ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.20 ಕ್ಕೆ ಕರೆತಂದ ಅಧಿಕಾರಿಗಳು ಕೆ ಐಎಲ್ ಏರ್ ಪೋರ್ಟ್ ನಿಂದ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲು ಸಿದ್ದತೆ ನಡೆಸಿದ್ದಾರೆ.

ನಿನ್ನೆ ದೆಹಲಿಯಲ್ಲಿ ಮನ್ಸೂರ್ ರೆಡ್ ಆ್ಯಂಡ್ ಆಗಿ ತನಿಖಾಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ನಂತ್ರ ಅಲ್ಲಿ ಕೆಲ ಕಾನೂನು ಪ್ರಕ್ರಿಯೆ ಮುಗಿಸಿ ದೆಹಲಿಯ ಇಡಿ ಕಚೇರಿಯಲ್ಲಿ ಮನ್ಸೂರ್ ವಿಚಾರಣೆ ನಡೆಸಿದ್ರು.

ಈಗಾಗಲೇ ಐಎಂಎ ಮೂಲಕ ಮನ್ಸೂರ್ ಖಾನ್ ೨೦೦ ಕೋಟಿಗೂ ಹೆಚ್ಚು ಆಸ್ತಿ ಅಕ್ರಮವಾಗಿ ಮಾಡಿರೋದು ಇಡಿ ತನಿಖೆಯಲ್ಲಿ ಪತ್ತೆಯಾಗಿದ್ದು ಮನ್ಸೂರ್ ಖಾನ್ ವಿಚಾರಣೆಯಿಂದ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಸದ್ಯ ಇಡಿ ಅಧಿಕಾರಿಗಳ ವಶದಲ್ಲಿದ್ದು ಇಡಿ ವಿಚಾರಣೆ ಮುಗಿದ ನಂತ್ರ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಕೆ ಮುಂದುವರೆಸಲಿದ್ದಾರೆ. ಯಾಕಂದ್ರೆ ಈಗಾಗ್ಲೇ ಐಎಂಎ ವಂಚನೆ ಪ್ರಕರಣದಲ್ಲಿ ಸುಮಾರು ನಾಲ್ಕು ಸಾವಿರಕ್ಕು ಹೆಚ್ಚು ಪ್ರಕರಣಗಳು ಮನ್ಸೂರು ವಿರುದ್ದ ಹೂಡಿಕೆದಾರರು ಕಮರ್ಷಿಯಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಪ್ರಕರಣದ ತನಿಖೆ ಎಸ್ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ

Body:KN_BNG_01_IMA_7204498Conclusion:KN_BNG_01_IMA_7204498
Last Updated : Jul 20, 2019, 10:01 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.