ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ಸಿಬಿಐ ತನ್ನದೇ ಆದ ಆ್ಯಂಗಲ್ ನಲ್ಲಿ ತನಿಖೆ ಚುರುಕುಗೊಳಿಸಿದೆ. ಸದ್ಯ ಇಂದಿನಿಂದ 3 ದಿನ ಸಿಬಿಐ ರೋಷನ್ ಬೇಗ್ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನಿಂದ 400 ಕೋಟಿ ರೂ. ಪಡೆದಿರುವ ಆರೋಪ ರೋಷನ್ ಬೇಗ್ ಮೇಲಿದೆ. ಕಳೆದ ಭಾನುವಾರ ರೋಷನ್ ಬೇಗ್ ಬಂಧಿಸಿದ ಸಿಬಿಐ ಕೆಲ ಮಾಹಿತಿಯನ್ನು ಪಡೆದಿದ್ದರು. ಆದರೆ ಅಕ್ರಮ ಹಣದ ಕುರಿತು ರೋಷನ್ ಬೇಗ್ ಸಮರ್ಪಕ ಉತ್ತರ ನೀಡಿರಲಿಲ್ಲ ಎನ್ನಲಾಗ್ತಿದೆ. ಹೀಗಾಗಿ ಇಂದಿನಿಂದ ಅಸಲಿ ತನಿಖೆ ಶುರುವಾಗಲಿದೆ.
ಓದಿ:ವಿವಾಹ ಪ್ರಸ್ತಾಪ ನಿರಾಕರಿಸಿದ್ದ ಯುವತಿ ಹತ್ಯೆ ಮಾಡಿದ ಪಾತಕಿ : ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್!
ಬೇಗ್ ಅವರು ಐಎಂಎ ಸಂಸ್ಥೆಯ ಫಲಾನುಭವಿಯಾಗಿರುವ ಸಾಕ್ಷ್ಯಕ್ಕೆ ಇನ್ನಷ್ಟು ದಾಖಲಾತಿ ಹಾಗೂ ಮಾಹಿತಿ ಪಡೆದು ಆಸ್ತಿಮುಟ್ಟುಗೋಲು ಹಾಕುವ ಸಾಧ್ಯತೆ ಕೂಡ ಇದೆ. ಸದ್ಯ ಬೇಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸಿಬಿಐ ಅಧಿಕಾರಿಗಳು ಹೆಬ್ಬಾಳದ ಗಂಗಾನಗರ ಬಳಿ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಆದರೆ ಈಗಾಗಲೇ ಅನಾರೋಗ್ಯ ಇರುವ ಕಾರಣ ಜೈಲಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಆದರೆ ಸಿಬಿಐ ವಶದಲ್ಲಿ ಮನ್ಸೂರ್ ಖಾನ್ ಇರುವ ಕಾರಣ ಬೇಗ್ & ಮನ್ಸೂರ್ ಅವರನ್ನು ಎದುರು-ಬದುರು ಕೂರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.