ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ವಕೀಲ ಮೊಹಮ್ಮದ್ ತಾಹೀರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರದ ಅರ್ಜಿ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠವು ನಡೆಸಿತು.
ಸಕ್ಷಮ ಪ್ರಾಧಿಕಾರದ ಹಿರಿಯ ಅಧಿಕಾರಿಗಳೇ ಭಾಗಿಯಾಗಿದ್ದ ಬಗ್ಗೆ ಹೈಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿ ಸಕ್ಷಮ ಅಧಿಕಾರಿಗಳು ನೇಮಕ ಮಾಡಿದ ಹಾಗೂ ತನಿಖಾ ಪ್ರಗತಿಯನ್ನ ಹೈಕೊರ್ಟ್ಗೆ ಸಲ್ಲಿಸುವಂತೆ ಸೂಚನೆ ನೀಡಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತ ಅವರನ್ನು ಸಕ್ಷಮ ಪ್ರಾಧಿಕಾರವಾಗಿ ನೇಮಕ ಮಾಡಲಾಗಿತ್ತು. ಆದ್ರೆ ಈ ಪ್ರಕರಣದಲ್ಲಿ ವಿಜಯ ಶಂಕರ್ ಸಕ್ಷಮ ಪ್ರಾಧಿಕಾರಿ ಅವರೇ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೇರೆ ಅಧಿಕಾರಿಯನ್ನ ನೇಮಕ ಮಾಡುವುದಾಗಿ ಸೂಚಿಸಿದ್ರು.
ಈ ವೇಳೆ ಗರಂ ಆದ ನ್ಯಾಯಾಧೀಶರು ಸಕ್ಷಮ ಅಧಿಕಾರಿ ಕೈಗೊಂಡ ಕ್ರಮ ಹಾಗೂ ಪ್ರಕರಣದ ಕುರಿತು ವಿಚಾರಣೆ ನಡೆಸಿದ ವಿವರವನ್ನ ಲಕೋಟೆ ಮೂಲಕ ಜುಲೈ 30ರಂದು ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.