ETV Bharat / state

ಕಳ್ಳದಂಧೆಯಲ್ಲಿ ಎಣ್ಣೆ ಮಾರಾಟ.. ಇಬ್ಬರು ಆರೋಪಿಗಳ ಬಂಧನ - ಕಳ್ಳದಂಧೆಯಲ್ಲಿ ಎಣ್ಣೆ ಮಾರಾಟ

ಬಂಧಿತರಿಂದ 12 ಲಕ್ಷ ಮೌಲ್ಯದ 110 ಫುಲ್ ಬಾಟಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಯಮದ ಪ್ರಕಾರ ಪರವಾನಿಗೆ ಇಲ್ಲದೆ ಯಾವುದೇ ವ್ಯಕ್ತಿ 2.5 ಲೀಟರ್​​ಗಿಂತ ಹೆಚ್ಚು ಮದ್ಯ ಹೊಂದಲು ಅವಕಾಶವಿಲ್ಲ..

ಇಬ್ಬರು ಆರೋಪಿಗಳ ಬಂಧನ
police arrested two accused at Bangalore
author img

By

Published : Dec 30, 2020, 9:09 AM IST

ಬೆಂಗಳೂರು : ಕಳ್ಳದಂಧೆಯಲ್ಲಿ ಎಣ್ಣೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

ಮಣಿ ಮತ್ತು ರಾಮು ಬಂಧಿತ ಆರೋಪಿಗಳು. ಇವರು ಮಿಲ್ಟ್ರಿ ಕ್ಯಾಂಟೀನ್, ಡ್ಯೂಟಿ ಫ್ರೀ ಶಾಪ್​​ಗಳಿಂದ ನೂರಾರು ಲೀಟರ್ ಎಣ್ಣೆಯನ್ನು ಖರೀದಿಸಿ ಹೊಸವರ್ಷಕ್ಕೆ ಪೂರೈಕೆ ಮಾಡಲು ಅನಧಿಕೃತವಾಗಿ ಶೇಖರಿಸಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಓದಿ: ಕೊರೊನಾ ರೂಪಾಂತರ ವೈರಸ್ ​: ಯುಕೆಯಿಂದ ಬಂದ ಮೂವರಿಗೆ ಸೋಂಕು ದೃಢ

ಬಂಧಿತರಿಂದ 12 ಲಕ್ಷ ಮೌಲ್ಯದ 110 ಫುಲ್ ಬಾಟಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಯಮದ ಪ್ರಕಾರ ಪರವಾನಿಗೆ ಇಲ್ಲದೆ ಯಾವುದೇ ವ್ಯಕ್ತಿ 2.5 ಲೀಟರ್​​ಗಿಂತ ಹೆಚ್ಚು ಮದ್ಯ ಹೊಂದಲು ಅವಕಾಶವಿಲ್ಲ. ಆದರೆ, ಪಾರ್ಟಿಗಳಿಗೆ ಬಾರ್​ನ ಬೆಲೆಗಿಂತ ಕಡಿಮೆ ಬೆಲೆಗೆ ರೆಸ್ಟೊರೆಂಟ್​​​ಗೆ ಎಣ್ಣೆ ಮಾರಾಟ ಮಾಡಲು ಶೇಖರಣೆ ಮಾಡಿರುವ ವಿಚಾರ ಬಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.