ಆನೇಕಲ್: ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕೋಳಿ ಶೆಡ್ನ್ನು ಆನೇಕಲ್ ತಹಶೀಲ್ದಾರ್ ಸಿ. ಮಹಾದೇವಯ್ಯ ನೇತೃತ್ವದ ತಂಡ ತೆರವುಗೊಳಿಸಿತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಹುಲಿಮಂಗಲದ ಪೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಸರಸ ಮುನಿಸ್ವಾಮಿ ರೆಡ್ಡಿಯವರು ಅಕ್ರಮ ಕೋಳಿ ಶೆಡ್ಗಳನ್ನು ನಿರ್ಮಾಣ ಮಾಡಿ ಬಳಕೆ ಮಾಡುತ್ತಿದ್ದರು. ಸರ್ವೆ ನಂ.156ರಲ್ಲಿ ಸುಮಾರು 2 ಎಕರೆ ಅಂದರೆ ಸುಮಾರು ಐದೂವರೆ ಕೋಟಿಗೂ ಅಧಿಕ ಮೌಲ್ಯದ ಭೂಮಿಯನ್ನು ಅತಿಕ್ರಮಿಸಿದ್ದರು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಜೆಸಿಬಿಗಳ ಮುಖಾಂತರ ಕೋಳಿ ಶೆಡ್ ಹಾಗೂ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾರೆ.
156ನೇ ಸರ್ವೇ ನಂಬರ್ ಒಂದರಲ್ಲಿಯೇ ಸುಮಾರು 16 ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಎಲ್ಲ 16 ಪ್ರಕರಣಗಳ ಸ್ಥಳಗಳನ್ನು ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್ ಮಹಾದೇವಯ್ಯ ತಿಳಿಸಿದರು.