ETV Bharat / state

ಅನಧಿಕೃತ ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ: 75 ಮಹಿಳೆಯರ ರಕ್ಷಣೆ, 15 ಆರೋಪಿಗಳ ಬಂಧನ

ಬೆಂಗಳೂರಿನ ವಿವಿಧ ಪೊಲೀಸ್​ ಠಾಣೆ ವ್ಯಾಪ್ತಿಗಳಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಲೈವ್ ಬ್ಯಾಂಡ್​ಗಳ ಮೇಲೆ‌ ಸಿಸಿಬಿ ಪೊಲೀಸರು ದಾಳಿ ನಡೆಸಿ 75 ಮಹಿಳೆಯರನ್ನು ರಕ್ಷಿಸಿದ್ದಾರೆ.

Illegal live band, ಬೆಂಗಳೂರಲ್ಲಿ ಅನಧಿಕೃತ ಲೈವ್ ಬ್ಯಾಂಡ್
ಬೆಂಗಳೂರಲ್ಲಿ ಅನಧಿಕೃತ ಲೈವ್ ಬ್ಯಾಂಡ್
author img

By

Published : Feb 9, 2020, 10:56 AM IST

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಲೈವ್ ಬ್ಯಾಂಡ್​ಗಳ ಮೇಲೆ‌ ಸಿಸಿಬಿ ಪೊಲೀಸರು ದಾಳಿ ನಡೆಸಿ 75 ಮಹಿಳೆಯರನ್ನು ರಕ್ಷಿಸಿ, 15 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಶೋಕ್ ನಗರ ಠಾಣೆ, ಕಲಾಸಿಪಾಳ್ಯ ಠಾಣೆ ಮತ್ತು ಕಾಟನ್ ಪೇಟೆ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಡೆ ಬಾರ್ ಆ್ಯಂಡ್ ರೆಸ್ಟೋರೆಂಟ್​​ಗಳ‌ಲ್ಲಿ ಅವ್ಯಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಕುಲ್ದೀಪ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಬಂಧಿತರು ಅನಧಿಕೃತವಾಗಿ ಲೈವ್ ಬ್ಯಾಂಡ್ ನಡೆಸುತ್ತಿರುವುದು, ಮಹಿಳೆಯರಿಂದ ಡ್ಯಾನ್ಸ್ ಮಾಡಿಸಿ ಗಿರಾಕಿಗಳಿಂದ ಹಣ ಪಡೆಯುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗ್ತಿದೆ. ಲೈವ್ ಬ್ಯಾಂಡ್​​ನಲ್ಲಿದ್ದ ಮಹಿಳೆಯರನ್ನು ರಕ್ಷಿಸಿ ನಗದು, ಕೆಲ ದಾಖಲಾತಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.