ETV Bharat / state

ಆರ್ಮಿ ಅಧಿಕಾರಿಗಳಿಗೆ ನೀಡುವ ಮದ್ಯ ಮಾರಾಟ: ಆರೋಪಿಯ ಬಂಧನ - illegal liquor sale in bangalore

ಮೇಕ್ರಿ ಸರ್ಕಲ್​​ ಬಳಿ ಇರುವ ಏರ್ಫೋರ್ಸ್​​​ ಕ್ಯಾಂಟೀನ್​​ನಿಂದ ಮದ್ಯ ಖರೀದಿ ಮಾಡಿ ಅದನ್ನು ಸಾಗಿಸುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಮಾಲುಸಮೇತ ಅರೆಸ್ಟ್ ಮಾಡಿದ್ದಾರೆ.

illegal liquor sale; one arrested
ಅರ್ಮಿ ಅಧಿಕಾರಿಗಳಿಗೆ ನೀಡುವ ಮದ್ಯ ಮಾರಾಟ; ಆರೋಪಿ ಅಂದರ್​!
author img

By

Published : Dec 31, 2020, 11:26 AM IST

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಆರ್ಮಿ ಅಧಿಕಾರಿಗಳಿಗೆ ನೀಡುವ ಮದ್ಯವನ್ನು ಪಡೆದು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪಶ್ಚಿಮ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

illegal liquor sale; one arrested
ಆರೋಪಿಯಿಂದ ವಶಪಡಿಸಿಕೊಂಡ ವಸ್ತುಗಳು

ಮಣಿ (61) ಬಂಧಿತ ಆರೋಪಿ. ಈತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಮೇಕ್ರಿ ಸರ್ಕಲ್​​ ಬಳಿ ಇರುವ ಏರ್ಫೋರ್ಸ್​​​ ಕ್ಯಾಂಟೀನ್​​ನಿಂದ ಮದ್ಯ ಖರೀದಿಸಿದ್ದಾನೆ. ಬಳಿಕ ಅದನ್ನು ಸಾಗಿಸುತ್ತಿದ್ದಂತೆ ರೆಡ್ ಹ್ಯಾಂಡ್ ಆಗಿ ಬಸವೇಶ್ವರ ನಗರ ಹಾಗೂ ಮಾಗಡಿ ರೋಡ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಓದಿ: ಹೊಟೇಲ್‌ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ: ಸಿಸಿಟಿವಿ ದೃಶ್ಯ

ಬಂಧಿತನಿಂದ BLACK & WHITE - 26 ಬಾಟಲ್​ಗಳು, 100 Piper's - 55, Peter Scot - 15, Blender Prides - 13, MC Roys - 05 ಬಾಟಲ್​​ಗಳು ಸೇರಿದಂತೆ ಒಟ್ಟು 114 ಬಾಟಲ್​​​ಗಳ 85 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.