ಬೆಂಗಳೂರು: ಸಿಲಿಕಾನ್ ಸಿಟಿಯ ಸಿಟಿ ಮಾರ್ಕೇಟ್ ಚೆಕ್ ಪೋಸ್ಟ್ ಬಳಿಯ ಸ್ಕೂಟರ್ನಲ್ಲಿ 3 ಕೋಟಿ ಮೌಲ್ಯದ 6.55 ಕೆ.ಜಿ ಚಿನ್ನಾಭರಣ ಸಾಗಣೆ ತನಿಖೆಯನ್ನ ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ದು, ಚಿನ್ನ ಹಾಗೂ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ಓದಿ: ಪ್ರಿಯಕರನೊಂದಿಗಿದ್ದ ವೇಳೆ ಸಿಕ್ಕಿಬಿದ್ದ ಪತ್ನಿ: ಇನಿಯನೊಂದಿಗೆ ಸೇರಿ ಗಂಡನ ಕೊಂದ ರಾಗಿಣಿ!
ರಾಜಸ್ಥಾನ ಮೂಲದ ದಲ್ವತ್ ಸಿಂಗ್ ಹಾಗೂ ವಿಕಾಸ್ ದಾಖಲೆ ರಹಿತ ಚಿನ್ನಾಭರಣ ಸಾಗಣೆ ಮಾಡುತ್ತಿದ್ದರು. ಹೀಗಾಗಿ ಪಶ್ಚಿಮ ವಿಭಾಗ ಡಿಸಿಪಿ ಡಾ.ಸಂಜೀವ್ ಎಂ.ಪಾಟೀಲ್ ಅವರು ಖುದ್ದಾಗಿ ಆರೋಪಿಗಳ ವಿಚಾರಣೆ ಮಾಡಿ ಆದಾಯ ತೆರಿಗೆ ಇಲಾಖೆಗೆ ಕೋಟ್ಯಂತರ ಮೌಲ್ಯದ ಅಕ್ರಮ ಚಿನ್ನ ಸಾಗಣೆ ಮಾಹಿತಿ ನೀಡುವಂತೆ ತಿಳಿಸಿದ್ದರು.
ಸದ್ಯ ಆದಾಯ ತೆರಿಗೆ ಇಲಾಖೆ ತನಿಖೆಗೆ ಇಳಿದಿದ್ದು, ಅಕ್ರಮ ಚಿನ್ನಾಭರಣ ಸಾಗಣೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.