ಬೆಂಗಳೂರು: ವಜ್ರದ ಹರಳುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯುವಲ್ಲಿ ಸಿಟಿ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ರವಿ ಕುಮಾರ್, ಪ್ರವೀಣ್ ಕುಮಾರ್, ಸುಧೀರ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಹೀಗಾಗಿ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಮೊದಲು ವಶಕ್ಕೆ ಪಡೆದಿದ್ದಾರೆ. ನಂತರ ಪರಿಶೀಲನೆ ಮಾಡಿದಾಗ ಕೆಂಪು ಬಣ್ಣದ ಪರ್ಸ್ನಲ್ಲಿ 80 ವಜ್ರದಂತಹ ಹರಳು ಪತ್ತೆಯಾಗಿವೆ.
ಹೀಗಾಗಿ ವಿಚಾರಣೆ ನಡೆಸಿದಾಗ ಅಕ್ರಮವಾಗಿ ವಜ್ರದ ಹರಳು ಸಾಗಿಸುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಭರಣ ತಯಾರಿಸುವ ತಜ್ಞರನ್ನು ಕರೆಯಿಸಿ ಪರಿಶೀಲನೆ ಮಾಡಿದಾಗ ಕಚ್ಚಾ ವಜ್ರದ ಹರಳುಗಳೆಂದು ಮಾಹಿತಿ ಸಿಕ್ಕಿದೆ. ಇವು ಸುಮಾರು 40,00,000 ಬೆಲೆಬಾಳುವ ವಜ್ರದ ಹರಳಾಗಿದ್ದು, ಇದನ್ನು ಆರೋಪಿಗಳು ಕಳ್ಳತನ ಮಾಡಿ ಅಂಚೆ ಪೇಟೆ ಚಿನ್ನದ ಆಭರಣ ತಯಾರಿಸುವವರಿಗೆ ಮಾರಾಟ ಮಾಡಲು ಬಂದಿರುವ ವಿಚಾರ ಗೊತ್ತಾಗಿದೆ.
ಸದ್ಯ ಆರೋಪಿಗಳ ವಿರುದ್ಧ ಸಿಆರ್ಪಿಸಿ ಹಾಗೂ ಐಪಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.