ಬೆಂಗಳೂರು: ಪ್ರಾಜೆಕ್ಟ್ ಪ್ರಾಣ (ಸಂಸ್ಕೃತದಲ್ಲಿ ಉಸಿರು ಅಥವಾ ಜೀವ) ಎಂಬ ಹೆಸರನ್ನು ಕೃತಕ ಉಸಿರಾಟದ ಯಂತ್ರಕ್ಕಿಟ್ಟು, ಐಐಎಸ್ಸಿ ವಿಜ್ಞಾನಿಗಳು ಈಗ ಅದರ ಮೂಲ ಮಾದರಿಯನ್ನು ಪರಿಚಯಿಸಿದ್ದಾರೆ.
ಕೋವಿಡ್-19 ದುಷ್ಪರಿಣಾಮದಿಂದಾಗಿ ನ್ಯೂಮೋನಿಯಾ ಉಂಟಾಗುವ ಸಾಧ್ಯತೆ ಇರುವುದರಿಂದ ಮಾರ್ಚ್ 2020ರ ಕೊನೆಯಲ್ಲಿ ಕೃತಕ ಉಸಿರಾಟ ಯಂತ್ರ (ventilator) ತಯಾರು ಮಾಡಲು ಐಐಎಸ್ಸಿ ವಿಜ್ಞಾನಿಗಳು ನಿರ್ಧರಿಸಿದ್ದರು. ಭಾರತ ವಿಜ್ಞಾನ ಲೋಕದ ಮುಕುಟಮಣಿ ಎಂದು ಕರೆಸಿಕೊಳ್ಳುವ ಐಐಎಸ್ಸಿ ವಿಜ್ಞಾನಿಗಳು ಸುಮಾರು 1 ತಿಂಗಳಲ್ಲಿ ಕಡಿಮೆ ವೆಚ್ಚದ ವೆಂಟಿಲೇಟರ್ನ ಮೂಲ ಮಾದರಿಯನ್ನು ಪರಿಚಯಿಸಿದ್ದಾರೆ.
35 ದಿನಗಳಲ್ಲಿ ಕೃತಕ ಉಸಿರಾಟದ ಯಂತ್ರದ ಚಿತ್ರದಿಂದ ಮೂಲ ಮಾದರಿಯವರೆಗೆ ತಲುಪಿರುವ ವಿಜ್ಞಾನಿಗಳ ತಂಡದ ಸಾಧನೆ ಅತಿ ದೊಡ್ಡದು. ಸದ್ಯಕ್ಕೆ ಈ ವಿಜ್ಞಾನಿಯ ತಂಡ ವಿವಿಧ ಉದ್ಯಮಿಗಳ ಜೊತೆ ಸಂಪರ್ಕದಲ್ಲಿದ್ದು ಶೀಘ್ರದಲ್ಲಿ ಮೂಲ ಮಾದರಿಯನ್ನು ದೊಡ್ಡಮಟ್ಟದ ಉತ್ಪಾದನೆಗೆ ಒಳಪಡಿಸುವ ಹಂತದಲ್ಲಿದ್ದಾರೆ.
ಈ ಅಧ್ಯಯನಕ್ಕೆ ಐಐಎಸ್ಸಿ, ಕೇಂದ್ರ ಮುಖ್ಯ ವೈಜ್ಞಾನಿಕ ಸಲಹೆಗಾರ ನಿಧಿ, ಕೇಂದ್ರ ಸರ್ಕಾರ, ಎಸ್ಬಿಐ ಬ್ಯಾಂಕ್ನ ಸಿಎಸ್ಆರ್ ಹಾಗೂ ನಾರಾಯಣ ಹೆಲ್ತ್ ಕೇರ್ ಆರ್ಥಿಕ ಸಹಾಯ ಮಾಡಿದೆ.