ETV Bharat / state

ಮುಸಲ್ಮಾನರು ಬಿಜೆಪಿಗೆ ಮತ ಹಾಕಿದರೆ ಖುಷಿ ಪಡುವವರಲ್ಲಿ ನಾನು ಮೊದಲಿಗ : ಸಚಿವ ವಿ ಸೋಮಣ್ಣ - ಶಾದಿ ಮಹಲ್ ನಿರ್ಮಾಣ

ಮುಸಲ್ಮಾನರು ಕೂಡಾ ದೇಶದಲ್ಲಿ ವಾಸ ಮಾಡಲು, ಭಾವನೆ ವ್ಯಕ್ತಪಡಿಸಲು ಅವಕಾಶ ಇದೆ ಎಂದು ವಸತಿ ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ.

ಸಚಿವ ವಿ ಸೋಮಣ್ಣ
ಸಚಿವ ವಿ ಸೋಮಣ್ಣ
author img

By

Published : Oct 18, 2022, 4:07 PM IST

ಬೆಂಗಳೂರು: ಮುಸಲ್ಮಾನರು ಬಿಜೆಪಿಗೆ ಮತ ಹಾಕಿದರೆ ಖುಷಿ ಪಡುವವರಲ್ಲಿ ನಾನು ಮೊದಲಿಗ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲವೂ ದಾಖಲೆಯಲ್ಲಿ ಇದೆ. ಮುಸಲ್ಮಾನರು ಕೂಡಾ ದೇಶದಲ್ಲಿ ವಾಸ ಮಾಡಲು, ಭಾವನೆ ವ್ಯಕ್ತಪಡಿಸಲು ಅವಕಾಶ ಇದೆ ಎಂದರು.

ಚಂದ್ರಾಲೇಔಟ್​ನಲ್ಲಿ ಚಂದ್ರಗಿರಿ ಪಾರ್ಕ್​ನಲ್ಲಿ ಈದ್ಗಾ ಗೋಡೆ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, 1982ರಲ್ಲಿ 78 ಎಕರೆ ಭೂ ಸ್ವಾಧೀನ ಆಗಿತ್ತು. ಆಗ ಉತ್ತರಹಳ್ಳಿ ಕ್ಷೇತ್ರ ಇತ್ತು. ಆಗ ಈದ್ಗಾ ಮೈದಾನಕ್ಕೆ ‌ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪತ್ರ ಬರೆದಿದ್ದರು. ನಂತರ 1.20 ಗುಂಟೆ ಜಾಗವನ್ನು ಬಿಡಿಎ ಷರತ್ತಿನ ಮೇಲೆ ವಕ್ಫ್ ಬೋರ್ಡ್​ಗೆ ಹಸ್ತಾಂತರ ಮಾಡುತ್ತಾರೆ.

ಅಂದಿನ‌ ಶಾಸಕರಾಗಿದ್ದ ಆರ್. ಅಶೋಕ್ ಅವರಿಗೆ ಮುಸ್ಲಿಂ ಸಮುದಾಯದ ನೋಂದಣಿ ಶುಲ್ಕ ಮನ್ನಾ ಮಾಡುವಂತೆ ಕೇಳಿದ್ದರು. 2012 ರಲ್ಲಿ ಅಶೋಕ್ ಸಿಎಂಗೆ ಪತ್ರ ಬರೆದು ಉಚಿತವಾಗಿ ನೋಂದಣಿ ಮಾಡಿಕೊಡುವಂತೆ ಕೇಳಿದ್ದರು. ಆನಂತರ ಶುಲ್ಕ ಕಟ್ಟಲಿಲ್ಲ. ಅದು ಹಾಗೆಯೇ ಉಳಿಯಿತು ಎಂದು ವಿವರಿಸಿದರು.

ನಾನು ಇವರ ಯಾರ ಮತ ಕೇಳಿದವನು ಅಲ್ಲ. ಅವರು ಮತ ಹಾಕಿದವರೂ ಅಲ್ಲ. ಮೊನ್ನೆ ಶಾದಿ ಮಹಲ್ ನಿರ್ಮಾಣ ಕಾರ್ಯದಲ್ಲಿ ಸರ್ಕಾರದ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮುಸಲ್ಮಾನರು ಇದ್ದಾರೆ. ನಾನು ಮಾನವೀಯತೆಯಿಂದ ಕೆಲವು ಕೆಲಸ ಮಾಡಿಕೊಟ್ಟೆ ಅಂತಾ ಕೆಲವು ತಿಳಿಗೇಡಿಗಳು ಈ ರೀತಿ ಮಾಡಿದ್ದಾರೆ.

ಈದ್ಗಾ ಮೈದಾನ ಬಿದ್ದು ಹೋಗುತ್ತದೆ ಅಂತಾ ಸರ್ಕಾರದ ದುಡ್ಡಲ್ಲಿ ಗೋಡೆ ಮಾಡಿಸಿದ್ದೇನೆ. ಮೂಲ ಸೌಕರ್ಯ ಕೊಟ್ಟೆವು ಎಂದೇಳಿ ಈ ರೀತಿ ಚಿಲ್ಲರೆ ಕೆಲಸ ಮಾಡೋದು ಬಿಡಬೇಕು. ನಾನು ಗೋಡೆ ಕಟ್ಟಿ ಕೊಟ್ಟಿರೋದು ಮಾನವೀಯತೆಯ ದೃಷ್ಟಿಯಿಂದ. ನಾನು ಯಾರಿಗೂ ಸ್ವಂತಕ್ಕೆ ಕಟ್ಟಿಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈವರೆಗೆ ಮತ ಕೇಳುವುದಕ್ಕೆ ಹೋಗಿಲ್ಲ: ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಹಿಂದೂಗಳಿಗೆ ಸೂರು ಕೊಡಿ ಅಂತಾ ಹೇಳಿಲ್ಲ. ಪ್ರತಿಯೊಬ್ಬರಿಗೂ ಸೂರು ಕೊಡಿ ಅಂತಾ ಪ್ರಧಾನಿಗಳು ಹೇಳಿದ್ದಾರೆ. ನಮ್ಮ ಕ್ಷೇತ್ರದ ಮುಸಲ್ಮಾನರಲ್ಲಿ ಶೇ. 90 ರಷ್ಟು ಅವಿದ್ಯಾವಂತರು. ನಾನು ಅವರಿಗೆ ಈವರೆಗೆ ಮತ ಕೇಳುವುದಕ್ಕೆ ಹೋಗಿಲ್ಲ ಎಂದರು.

ಓದಿ: ಕೆಪಿಟಿಸಿಎಲ್ ನೇಮಕಾತಿ ಅಕ್ರಮ: 20 ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.