ಬೆಂಗಳೂರು: ಕಾಂಗ್ರೆಸ್ ವರಿಷ್ಠ ನಾಯಕರು ಯಾರು ಪ್ರಬಲರಾಗಿದ್ದಾರೆ ಅನ್ನುವುದನ್ನು ಗಮನಿಸಿದ್ದಾರೆ. ಬೀದರ್‍ನಿಂದ ನನಗೆ ಹೈಕಮಾಂಡ್ ಸ್ಪರ್ಧೆ ಮಾಡಿ ಎಂದರೆ ಸ್ಪರ್ಧಿಸುತ್ತೇನೆ ಎಂದು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ರಾಹುಲ್ ಗಾಂಧಿ ಮಾರ್ಚ್18 ಕ್ಕೆ ಕಲಬುರಗಿಗೆ ಬರುತ್ತಿದ್ದಾರೆ. ಸ್ಥಾನ ಹಂಚಿಕೆ, ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಲಿದ್ದೇವೆ. ಅಂದು ಸುಗಮವಾಗಿ ಸ್ಥಾನ ಹಂಚಿಕೆ ಮುಗಿಯುತ್ತದೆ ಎಂದರು.
ಮೈಸೂರು ಕ್ಷೇತ್ರದ ವಿಚಾರದಲ್ಲಿ ಗೊಂದಲವಿಲ್ಲ. ಎಲ್ಲವೂ ಊಹಾಪೋಹಗಳು. ಸತ್ಯಾಂಶ ಬೇರೆಯದೇ ಇದೆ. ಎರಡೂ ಪಕ್ಷದ ಮುಖಂಡರು ಕೂತು ಚರ್ಚೆ ಮಾಡಿದ್ದಾರೆ. ಕೊನೆ ಹಂತದಲ್ಲಿ ಗೀವ್ ಅಂಡ್ ಟೇಕ್ ಪಾಲಿಸಿ ಇದ್ದೇ ಇರುತ್ತದೆ. ಒಂದೆರಡು ಸೀಟು ಹಂಚಿಕೆ ಹೆಚ್ಚು-ಕಮ್ಮಿ ಆಗಬಹುದು ಅಷ್ಟೇ ಹೊರತು ಮೈತ್ರಿ ಗಟ್ಟಿಯಾಗಿದೆ.
ಎಷ್ಟು ಸೀಟು ಎಂಬ ಬಗ್ಗೆ ನಾನು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ಮಂಡ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ ಯಾರೂ ಹೇಳಿಕೆಗಳನ್ನು ನೀಡಬೇಡಿ ಅಂತ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಮಂಡ್ಯದಲ್ಲೂ ಒಗ್ಗಟ್ಟಿನಿಂದಲೇ ಕೆಲಸ ಮಾಡ್ತೇವೆ ಎಂದರು.
ಪಕ್ಷದ ಹಿತದೃಷ್ಟಿಯಿಂದ ಯಾರೂ ಹೇಳಿಕೆಗಳನ್ನು ನೀಡಬೇಡಿ ಅಂತ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಮಂಡ್ಯದಲ್ಲೂ ಒಗ್ಗಟ್ಟಿನಿಂದಲೇ ಕೆಲಸ ಮಾಡ್ತೇವೆ ಎಂದರು.