ಬೆಂಗಳೂರು: ನಮ್ಮ ಮನೆಯಲ್ಲಿ ಒಡಕು ಉಂಟಾಗಿದೆ. ನನಗೆ ಎಲ್ಲ ರೀತಿಯ ವಿಶ್ವಾಸ ಇದೆ. ಎಲ್ಲವೂ ಸರಿ ಹೋಗ್ತದೆ ಎಂದು ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ತಿಳಿಸಿದ್ದಾರೆ.
ಅತೃಪ್ತರ ಜೊತೆ ಮಾತುಕತೆಗೆ ತೆರಳಿದ್ದ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಮುಂಬೈನಿಂದ ಕೆಐಎಎಲ್ಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಅತೃಪ್ತರ ಜೊತೆ ಮಾತುಕತೆ ನಡೆಸಿದ್ದೇನೆ. ನಮ್ಮ ಮನೆಯಲ್ಲಿ ಒಡಕು ಉಂಟಾಗೋಕೆ ನಮ್ಮ ಮನೆಯವರೇ ಕಾರಣ. ಅತೃಪ್ತರು ಹೇಳಿರುವ ಕೆಲ ವಿಚಾರಗಳಿವೆ. ಅವುಗಳನ್ನ ನಾಯಕರಿಗೆ ತಿಳಿಸಲಿದ್ದೇನೆ. ಎಲ್ಲ ಗೊಂದಲಗಳು ನಿವಾರಣೆಯಾಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡ ಮಹೇಂದ್ರ ಸಿಂಘಿ ಹೇಳಿದ್ರು.