ETV Bharat / state

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಮತ ಹಾಕಿ ಬದ್ಧತೆ ತೋರಿದ್ದೇನೆ, ಮನಪರಿವರ್ತನೆ ಆಗಿಲ್ಲ: ಜಿ.ಟಿ. ದೇವೇಗೌಡ - ನನ್ನ ಮಾನಪರಿವರ್ತನೆ ಆಗಿಲ್ಲ ಎಂದ ಜಿಟಿ ದೇವೇಗೌಡ

ಹೆಚ್​.ಡಿ.ದೇವೇಗೌಡರ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರೇ ಹಾಡಿ ಹೊಗಳಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಣ್ಣ ಆಡಿರುವ ಮಾತುಗಳು ಕನ್ನಡ ನಾಡು ಮತ್ತು ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ. ಅವರು ಬಹಿರಂಗ ಕ್ಷಮೆ ಕೇಳದೆ ಹೋದರೆ ಅದು ತಪ್ಪಾಗುತ್ತದೆ ಎಂದು ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

i-have-shown-commitment-by-voting-for-jds-in-rajya-sabha-elections-says-gt-devegowda
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಮತ ಹಾಕಿ ಬದ್ಧತೆ ತೋರಿದ್ದೇನೆ, ಮನಪರಿವರ್ತನೆ ಆಗಿಲ್ಲ: ಜಿ.ಟಿ.ದೇವೇಗೌಡ
author img

By

Published : Jul 2, 2022, 9:27 PM IST

ಬೆಂಗಳೂರು: ಜೆಡಿಎಸ್ ಪಕ್ಷ ಯಾರನ್ನ ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಮಾಡುತ್ತದೆಯೋ ಅವರಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಬದ್ಧವಾಗಿ ನಡೆದುಕೊಂಡಿದ್ದೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ವಿಚಾರವಾಗಿ ನನ್ನ ನಿಲುವು ಬದಲಾಗಿಲ್ಲ. ನಾನು ರಾಜ್ಯಸಭೆ ಚುನಾವಣೆಗೆ ಮುನ್ನವೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಮಾತನ್ನು ಆಡಿದ್ದೆ. ದೇವೇಗೌಡರ ರಾಜ್ಯಸಭೆ ಅಭ್ಯರ್ಥಿಯನ್ನಾಗಿಸಿದರೆ ಮೊದಲ ಮತ ನಾನೇ ಚಲಾಯಿಸುತ್ತೇನೆ ಎಂದು ಹಿಂದೆ ಹೇಳಿದ್ದೆ. ಈ ಬಾರಿಯೂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದಿದ್ದೆ. ಹೀಗಾಗಿ ನನಗೆ ಮನಪರಿವರ್ತನೆಯಾಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಮತ ಹಾಕಿ ಬದ್ಧತೆ ತೋರಿದ್ದೇನೆ, ಮನಪರಿವರ್ತನೆ ಆಗಿಲ್ಲ: ಜಿ.ಟಿ.ದೇವೇಗೌಡ

ನಾನು ಒಬ್ಬ ಹಿರಿಯ ಮುಖಂಡನಾಗಿ ನನ್ನ ಜನ ನೀಡುವ ಅಪಾರ ಪ್ರೀತಿ ಹಾಗೂ ಗೌರವಕ್ಕೆ ಬೆಲೆ ಕೊಡುತ್ತೇನೆ. ಐದು ವರ್ಷದ ಅವಧಿಗೆ ನಮ್ಮ ಕ್ಷೇತ್ರದ ಮತದಾರರು ಜನತಾ ದಳಕ್ಕೆ ಮತ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಐದು ವರ್ಷದ ಅವಧಿಯಲ್ಲಿ ಜನತಾ ದಳದಿಂದ ಕೈಗೊಂಡ ಪ್ರತಿಯೊಂದು ನಿರ್ಧಾರವನ್ನು ಬೆಂಬಲಿಸಿ ಅವರ ಪರವಾಗಿ ಮತ ನೀಡಬೇಕಾಗುತ್ತದೆ. ನಾನು ಯಾವತ್ತೂ ಆತ್ಮವಂಚನೆ ಮಾಡಿಕೊಂಡಿಲ್ಲ. ಬಿ.ಎಸ್. ಯಡಿಯೂರಪ್ಪರಿಗೆ 20 ತಿಂಗಳ ಅಧಿಕಾರ ಬಳಿಕ ನೀಡಲಿಲ್ಲ ಎಂಬ ಕಾರಣಕ್ಕಾಗಿ ನಾನು ಅಂದು ಬಿಜೆಪಿಗೆ ಹೋಗಿದ್ದೆ. ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ನಂತರ ಘೋಷಿಸಿದ್ದೆ. ಅದೇ ರೀತಿ ಅವರೇ ಸಿಎಂ ಆದರು ಎಂದರು.

ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ: ಜೆಡಿಎಸ್ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಹೋರಾಟ ನಡೆಯುತ್ತಿದ್ದು, ನಾನು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ಸದ್ಯ ನಾನು ಒಬ್ಬ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದೇನೆ. ಪಕ್ಷದ ಚಟುವಟಿಕೆಗಳಲ್ಲಿ ಹಾಗೂ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ. 2023ರ ಚುನಾವಣೆಗೆ ಮುನ್ನ ಮತ್ತೊಮ್ಮೆ ನಾನು ಮತದಾರರ ಬಳಿ ತೆರಳುತ್ತೇನೆ. ಅವರನ್ನು ಕೇಳುತ್ತೇನೆ. ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ. ಅವರ ತೀರ್ಮಾನಕ್ಕೆ ನಾನು ಬೆಲೆ ಕೊಡುತ್ತೇನೆ ಎಂದು ಜಿಟಿಡಿ ಸ್ಪಷ್ಟಪಡಿಸಿದರು.

ದೇವೇಗೌಡರು ದೈವ ಭಕ್ತರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಕಾಂಗ್ರೆಸ್​ ಮುಖಂಡ ಕೆ.ಎನ್.ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾಕೆ ಅವರು ಆ ರೀತಿ ಮಾತನಾಡಿದ್ದರೋ ಗೊತ್ತಿಲ್ಲ. ತಮ್ಮ ಮಾತಿನ ಬಗ್ಗೆ ಅವರು ಯೋಚನೆ ಮಾಡಬೇಕು. ಕೋವಿಡ್ ಸಮಯದಲ್ಲಿ ಸಾಕಷ್ಟು ಮಂದಿ ಸತ್ತು ಹೋಗಿದ್ದಾರೆ. ಯಾವ್ಯಾವ ವಯಸ್ಸಿನವರು ಪೈಲ್ವಾನ್​ಗಳು, ವೈದ್ಯರು ಮೃತಪಟ್ಟಿದ್ದಾರೆ. ದೇವೇಗೌಡರು ದೈವ ಭಕ್ತರು. ದೈವ ಭಕ್ತಿಯಿಂದಲೇ ಕನ್ನಡದ ರೈತನ ಮಗ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಕೀರ್ತಿಗೆ ಪಾತ್ರರಾದರು ಎಂದು ಹೇಳಿದರು.

ಇದನ್ನೂ ಓದಿ: ನಮ್ಮ ಮುಂದಿನ ಸಿಎಂ ಕುಮಾರಸ್ವಾಮಿ, ತಾಕತ್ತಿದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್​-ಬಿಜೆಪಿಗೆ ಇಬ್ರಾಹಿಂ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.