ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ವತಿಯಿಂದ ಇಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಸಮ್ಮೇಳನ ಹಾಗೂ ಕ್ಯಾಲೆಂಡರ್ ಬಿಡುಗಡೆ ಮತ್ತು ಸಮ್ಮೇಳನದ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಸಚಿವ ಗೋಪಾಲಯ್ಯ, ಈ ಬಾರಿಯ ಹೊಸ ವರ್ಷ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ತರಲಿ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಜನರು ಚೇತರಿಸಿಕೊಳ್ಳಲಿ. ಇದಕ್ಕೆ ಬೇಕಾದ ಸಹಾಯ ನಾನು ಮಾಡಲು ಸಿದ್ಧ. ಕೊರೊನಾ ಸಮಯದಲ್ಲಿ ನಾನು ಚಾಮರಾಜನಗರದಿಂದ ಬಂದ ಕುಟುಂಬಗಳು ಹಾಗೂ ಸುತ್ತಮುತ್ತ ಇರುವವರಿಗೆ ಎರಡು-ಮೂರು ದಿನ ಅಕ್ಕಿ ನೀಡಿದ್ದೇನೆ. ಸಂಕಷ್ಟದಲ್ಲಿದ್ದ ಜನರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.
ಓದಿ:'ಕುಮಾರಸ್ವಾಮಿ ವಿಚಾರದಲ್ಲಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದೇನೆ'
ಈ ಕಾರ್ಯಕ್ರಮವನ್ನು ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.