ETV Bharat / state

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬೇಗ ಆಗಲಿ ಎಂದು ಹೈಕಮಾಂಡ್​​ಗೆ ಪತ್ರ ಬರೆದಿಲ್ಲ: ಪರಮೇಶ್ವರ್

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೈಕಮಾಂಡ್​ಗೆ ನಾನು ಯಾವುದೇ ಪತ್ರ ಅಥವಾ ಮೇಲ್​​ ಕಳುಹಿಸಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್​​ ಸ್ಪಷ್ಟನೆ ನೀಡಿದ್ದಾರೆ.

Parameshwar
ಪರಮೇಶ್ವರ್
author img

By

Published : Jan 20, 2020, 2:49 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ಇರುವುದಂತೂ ನಿಜ. ಆದರೆ ಈ ಸಂಬಂಧ ನಾನು ಹೈಕಮಾಂಡ್​ಗೆ ಯಾವುದೇ ಪತ್ರ ಬರೆದಿಲ್ಲ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಾನು ಯಾವ ಪತ್ರ ಅಥವಾ ಮೇಲ್ ಮಾಡಿಲ್ಲ. ನಮ್ಮ ಮನೆಯಲ್ಲಿ ಆದ ಸಭೆ ಬಗ್ಗೆ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇನೆ. ದಿನೇಶ್ ಗುಂಡೂರಾವ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ತಟಸ್ಥವಾಗಿ ಇದ್ದಾರೆ. ಯಾರನ್ನು ನೇಮಕ ಮಾಡುತ್ತೀರಾ ಎಂದು ಆದಷ್ಟು ಬೇಗ ಘೋಷಣೆ ಮಾಡಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಈ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್, ಎಂ. ಬಿ. ಪಾಟೀಲ್ ಅವರ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ವಿಳಂಬವಾಗುತ್ತಿರುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದಲ್ಲಿ ಮಧ್ಯಂತರವಾಗಿ ವಿಧಾನಸಭೆ ಚುನಾವಣೆ ಬರಲಿದೆ ಎಂದು ಕೆಲವರು ಮಾತಾಡುತ್ತಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ ಈ ದೃಷ್ಟಿಯಿಂದ ಬೇಗ ಘೋಷಣೆ ಮಾಡುವುದು ಒಳ್ಳೆಯದು ಎಂದರು.

ಪಕ್ಷದ ಹಿತದೃಷ್ಟಿಯಿಂದ ಸಿಎಲ್​​ಪಿ, ಎಲ್ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್​ಪಿ ಹೆಚ್ಚಿನದಲ್ಲ, ಎಲ್ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅದು ಆಯಾಯ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ ಎಂದರು.

ಈ ಎರಡು ಸ್ಥಾನ ಪ್ರತ್ಯೇಕಗೊಳಿಸಿದರೆ ರಾಜೀನಾಮೆ ಕೊಡ್ತೀನಿ ಅನ್ನೋದು ಸಿದ್ದರಾಮಯ್ಯ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಸಿದ್ದರಾಮಯ್ಯಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರದಲ್ಲೂ ಹೀಗೆ ಮಾಡಿದ್ದಾರೆ, ಇಲ್ಲೂ ಮಾಡಿದರೆ ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ ಎಂದು ಪರಮೇಶ್ವರ್​ ಹೇಳಿದರು.

ಯಡಿಯೂರಪ್ಪ ಅವರು ವಿದೇಶಕ್ಕೆ ಬಂಡವಾಳ ತರುತ್ತೇನೆ ಎಂದು ಹೋಗಿದ್ದಾರೆ. ಅವರು ನಮ್ಮ ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ಸರಿಯಾಗಿ ಅರ್ಥೈಸಿ ಬಂಡವಾಳ ತರಲಿ ಎಂದು ನಾನು ಆಶಿಸುತ್ತೇನೆ. ದೇಶದಲ್ಲಿ ಇರುವ ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳ ಬರುತ್ತಾ ಅನ್ನೊದು ಮುಖ್ಯ. ದೇಶದ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಹೇಳಬೇಕಲ್ಲ, ಅದನ್ನು ಸರಿಯಾಗಿ ತಿಳಿಸಿದರೆ ಹೂಡಿಕೆದಾರರು ಬರುತ್ತಾರೆ ಎಂದು ತಿಳಿಸಿದರು.

Intro:newsBody:ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬೇಗ ಆಗಲಿ; ಹಾಗಂತ ಹೈಕಮಾಂಡ್ಗೆ ಪತ್ರ ಬರೆದಿಲ್ಲ: ಪರಮೇಶ್ವರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ಇರುವುದಂತೂ ನಿಜ. ಆದರೆ ಈ ಸಂಬಂದ ತಾವು ಹೈಕಮಾಂಡ್ಗೆ ಯಾವುದೇ ಪತ್ರ ಬರೆದಿಲ್ಲ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಾನು ಯಾವ ಪತ್ರ ಅಥವಾ ಮೇಲ್ ಮಾಡಿಲ್ಲ. ನಮ್ಮ ಮನೆಯಲ್ಲಿ ಆದ ಸಭೆ ಬಗ್ಗೆ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇನೆ. ದಿನೇಶ್ ಗುಂಡೂರಾವ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ತಟಸ್ಥವಾಗಿ ಇದ್ದಾರೆ. ಯಾರನ್ನು ನೇಮಕ ಮಾಡುತ್ತೀರ ಅಂದ್ರೆ ಅದನ್ನು ಆದಷ್ಟು ಬೇಗ ಘೋಷಣೆ ಮಾಡಿದ್ರೆ ಒಳ್ಳೆಯದು. ಡಿಕೆ ಶಿವಕುಮಾರ್ ,ಎಂ ಬಿ ಪಾಟೀಲ್ ಅವರ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿದೆ. ವಿಳಂಬವಾಗುತ್ತಿರುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದಲ್ಲಿ ಮಧ್ಯಂತರವಾಗಿ ವಿಧಾನಸಭೆ ಚುನಾವಣೆ ಬರುತ್ತೆ ಅಂತ ಕೆಲವರು ಮಾತಾಡುತ್ತಿದ್ದರೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ ಈ ದೃಷ್ಟಿಯಿಂದ ಬೇಗ ಘೋಷಣೆ ಮಾಡುವುದು ಒಳ್ಳೆಯದು ಎಂದರು.
ಒಬ್ಬ ಅಧ್ಯಕ್ಷ ಇದ್ರೆ ಒಳ್ಳೆಯದು ನಾಲ್ಕು ಜನ ಕಾರ್ಯಾಧ್ಯಕ್ಷರು ಇದ್ದರೆ ಒಳ್ಳೆಯದಲ್ಲ. ನನ್ನ ದೃಷ್ಟಿಯಿಂದ ಒಂದು ಕೂಡ ಉಪಾಧ್ಯಕ್ಷ ಇಲ್ಲವೇ ಕಾರ್ಯಾಧ್ಯಕ್ಷ ಮಾಡಬಾರದು. ಗುಂಪುಗಾರಿಗೆ ಪ್ರಾರಂಭವಾಗುತ್ತದೆ. ಇದು ಅವರು ನಾನು ಹೇಳಿಲ್ಲ ಅಂತ ಇವರು ಇವರು ನಾನು ಹೇಳಿಲ್ಲ ಅಂರ ಅವರು ಆಪಾದನೆ ಮಾಡುತ್ತಾರೆ. ಇದು ಒಳ್ಳೆಯದಲ್ಲ ಅಂತ ನನ್ನ ಅಭಿಪ್ರಾಯ. ನಾನು ಹಿರಿಯ ನಾಯಕ ಸಭೆ ಕರೆದಿದ್ದೆ ಅದರಲ್ಲಿ ಕೂಡ ನಾನು ಹೇಳಿದೆ ಬೇಗ ಮಾಡಿ ಎಂದು. ದೆಹಲಿಗೆ ಕರೆದು ಅಭಿಪ್ರಾಯ ಕೇಳುತ್ತಾರೆ ಎಂದು ಕೊಂಡಿದೆ ಅದು ಆಗಲಿಲ್ಲ ಎಂದರು.
ಪ್ರತ್ಯೇಕವಾಗಲಿ
ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ. ಹೈಕಮಾಂಡ್ ಗೆ ಮಾಜಿ ಡಿಸಿಎಂ ಪರಮೇಶ್ವರ್ ಒತ್ತಾಯ ಮಾಡಿದರು. ಪಕ್ಷದ ಹಿತದೃಷ್ಟಿಯಿಂದ ಸಿಎಲ್ಪಿ, ಎಲ್ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್ಪಿ ಹೆಚ್ವಿನದಲ್ಲ, ಎಲ್ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅದು ಆಯಾಯ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ. ಪ್ರತ್ಯೇಕ ಮಾಡಿದರೆ ರಾಜೀನಾಮೆ ಕೊಡ್ತೀನಿ ಅನ್ನೋದು ಸಿದ್ದರಾಮಯ್ಯ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಸಿದ್ದರಾಮಯ್ಯ ಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರ ದಲ್ಲೂ ಮಾಡಿದ್ದಾರೆ, ಇಲ್ಲೂ ಮಾಡಿದರೆ ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ, ಹಾಗಂತ ನಮ್ಮಲ್ಲೆನೂ ಗುಂಪಿಲ್ಲ. ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ ಅಂದ್ರೆ ನಾನು ಒಂದು ಗುಂಪಾ ಎಂದು ಪ್ರಶ್ನಿಸಿದರು.
ಚರ್ಚೆಯಲ್ಲಿ ಮಾತಾಡಲಿಲ್ಲ
ಪಿಸಿಸಿ, ಎಲ್ ಓಪಿ, ಅಧ್ಯಕ್ಷರ ಬಗ್ಗೆ ನಾವು ನಮ್ಮ ಮನೆಯಲ್ಲಿ ಆದ ಚರ್ಚೆಯಲ್ಲಿ ಮಾತಾಡಲಿಲ್ಲ. ನಾವು ಪಕ್ಷದ ಸಂಘಟನೆ ಬಗ್ಗೆ , ಸರ್ಕಾರದ ಹೇಗೆ ಕೆಲಸ ಮಾಡುತ್ತಿದೆ , ಸಿಎಎ ಎನ್ ಆರ್ ಸಿ ಬಗ್ಗೆ ಮಾತಾಡಿದ್ದೆವು. ಕೆಸಿ ವೇಣುಗೋಪಾಲ್ ಜೊತೆಗೆ ಆಗಾಗ ಮಾತಾಡುತ್ತೇವೆ. ಜೊತೆಗೆ ನಾನು ಇವಾಗ ಸಧ್ಯಕ್ಕೆ ಬೇಗ ತೀರ್ಮಾನ ತೆಗೆದುಕೊಂಡ್ರೆ ಒಳ್ಳೆಯದು ಎಂದು ಹೇಳಿದೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಿರುವುದರಿಂದ ಇದು ವಿಳಂಬ ಆಗುತ್ತದೆ. ನನ್ನ ವಯಕ್ತಿಕ ಅಭಿಪ್ರಾಯದ ಪ್ರಕಾರ ಯಾವುದೇ ಕಾರ್ಯಾಧ್ಯಕ್ಷರ ನೇಮಕ ಬೇಕಿಲ್ಲ ಎಂದರು.
ಬಿಜೆಪಿಯವರು ನಮ್ಮ ಮತ್ತು ಜೆಡಿಎಸ್ ಪಕ್ಷದಿಂದ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಅವರನ್ನು ಸಚಿವರನ್ನು ಮಾಡುತ್ತಾರೆ ಎಂದು ಕರೆದುಕೊಂಡುಹೋದ್ರು. ಪಾಪ ನಮ್ಮಲ್ಲಿ ಕೆಲವರು ಸಚಿವರಿದ್ರು ಅಲ್ಲಿ ಹೋಗಿ ಎಕ್ಸ್ ಆಗಿಬಿಟ್ರು. ಎಂ ಟಿ ಬಿ ನಾಗರಾಜ್ ಅವರನ್ನು ನಾವು ಸಚಿವರನ್ನಾಗಿ ಮಾಡಿದ್ದೊ ಏನ್ ಮಾಡೊದು? ವಿಶ್ವನಾಥ್ ಅವರು ಗೆಲ್ಲುತ್ತೇವೆ ಅಂತ ಹೋಗಿದ್ರು ಅಲ್ಲಿ ಸೋತ್ರು ಎಂದು ಅಭಿಪ್ರಾಯ ಪಟ್ಟರು.
ಯಡಿಯೂರಪ್ಪ ಅವರು ವಿದೇಶಕ್ಕೆ ಬಂಡವಾಳ ತರುತ್ತೇನೆ ಎಂದು ಹೋಗಿದ್ದಾರೆ. ಅವರು ನಮ್ಮ ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ಸರಿಯಾಗಿ ಅರ್ಥೈಸಿ ಬಂಡವಾಳ ತರಲಿ ಎಂದು ನಾನು ಆಶಿಸುತ್ತೇನೆ. ದೇಶದಲ್ಲಿ ಇರುವ ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳ ಬರುತ್ತಾ ಅನ್ನೊದು ಮುಖ್ಯ. ದೇಶದ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಹೇಳಿಬೇಕಲ್ಲ. ಅದನ್ನು ಸರಿಯಾಗಿ ತಿಳಿಸಿದ್ರೆ ಹೂಡಿಕೆದಾರರು ಬರುತ್ತಾರೆ ಎಂದು ಹೇಳಿದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.