ETV Bharat / state

ನಾನು ಕಾಂಗ್ರೆಸ್ ಪಕ್ಷದಿಂದ ದೂರ ಆಗಿಲ್ಲ.. ಜತೆಗೇ ಇದ್ದೇನೆ: ಎಸ್​ಆರ್​ಪಿ

author img

By

Published : Jan 14, 2023, 4:38 PM IST

ವರಿಷ್ಠರು ಬಯಸಿದರೆ ವಿಧಾನಸಭಾ ಚುನಾವಣೆಗೆ ನಿಲ್ಲುತ್ತೇನೆ. ಯಾವುದೇ ಕ್ಷೇತ್ರದಿಂದ ನಿಲ್ಲಲು ಹೇಳಿದರೂ ನಿಲ್ಲುತ್ತೇನೆ. 25 ವರ್ಷ ಮೇಲ್ಮನೆ ಸದಸ್ಯನಾಗಿ ಸಚಿವನಾಗಿದ್ದೆ. ಈಗ ಕೆಳ ಮನೆಗೆ ಸ್ಫರ್ಧೆಗೆ ಅವಕಾಶ ಕೊಟ್ಟರೆ ಸ್ಫರ್ಧಿಸುತ್ತೇನೆ - ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ‌ನಾಯಕ ಎಸ್ ಆರ್ ಪಾಟೀಲ್.

SR Patil
ಎಸ್ ಆರ್ ಪಾಟೀಲ್

ಬೆಂಗಳೂರು: ನಾನು ಕಾಂಗ್ರೆಸ್ ಪಕ್ಷದಿಂದ ದೂರ ಆಗಿಲ್ಲ. ಕಾಂಗ್ರೆಸ್ ಜತೆಗೆ ಇದ್ದೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ‌ನಾಯಕ ಎಸ್ ಆರ್ ಪಾಟೀಲ್ ತಿಳಿಸಿದರು. ಬೆಂಗಳೂರಿನ ಶಿವಾನಂದವೃತ್ತ ಸಮೀಪ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವರಿಷ್ಠರು ಬಯಸಿದರೆ ವಿಧಾನಸಭಾ ಚುನಾವಣೆಗೆ ನಿಲ್ಲುತ್ತೇನೆ. ಯಾವುದೇ ಕ್ಷೇತ್ರದಿಂದ ನಿಲ್ಲಲು ಹೇಳಿದರೂ ನಿಲ್ಲುತ್ತೇನೆ. 25 ವರ್ಷ ಮೇಲ್ಮನೆ ಸದಸ್ಯನಾಗಿ ಸಚಿವನಾಗಿದ್ದೆ. ಈಗ ಕೆಳ ಮನೆಗೆ ಸ್ಫರ್ಧೆಗೆ ಅವಕಾಶ ಕೊಟ್ಟರೆ ಸ್ಫರ್ಧಿಸುತ್ತೇನೆ ಎಂದರು.

ಮೀಸಲಾತಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಎಸ್​ಆರ್​ಪಿ, 'ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡಿಕೆ ಇಟ್ಟು ಹೋರಟ ಮಾಡುತ್ತಿದ್ದಾರೆ. ಮೀಸಲಾತಿ ‌ನೀಡುವ ಬಗ್ಗೆ ಸರ್ಕಾರ ಗಮನ ಹರಿಸುತ್ತದೆ' ಎಂದರು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಫರ್ಧೆ ವಿಚಾರ ಮಾತನಾಡುತ್ತಾ, ಕೋಲಾರ ಸೇರಿದಂತೆ ಹಲವು ಕಡೆ ಸಿದ್ದರಾಮಯ್ಯ ಸ್ಫರ್ಧೆಗೆ ಒತ್ತಾಯ ಇದೆ. ಬಾದಾಮಿಯಲ್ಲಿ ಒತ್ತಾಯ ಇದೆ. ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಫರ್ಧಿಸುವುದಾಗಿ ಹೇಳಿದ್ದಾರೆ. ಬಾಗಲಕೋಟೆ ನಾಯಕನಾಗಿ ನಾನು ಬಾದಾಮಿಗೆ ಕರೆಯುತ್ತಿದ್ದೇನೆ. ಸಿದ್ದರಾಮಯ್ಯ ಏನ್ ನಿರ್ಧಾರ ಮಾಡ್ತಾರೆ ಅಂತಾ ನೋಡಬೇಕು ಎಂದು ಹೇಳಿದರು.

ನಿರಾಣಿ V/S ಯತ್ನಾಳ್​ ವಿಚಾರ ಮಾತನಾಡಿ, ಅವರಿಬ್ಬರದು ವೈಯಕ್ತಿಕ ವಿಚಾರ. ಆದರೆ, ನಾನು ಹಿರಿಯನಾಗಿ ಸಲಹೆ ನೀಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ಏಕವಚನ ಪದ ಪ್ರಯೋಗ ಮಾಡಬಾರದು ಎಂದು ಹೇಳಿದರು.

ಬಾದಾಮಿಗೆ ಆಹ್ವಾನ: ಕಳೆದ ಸಾರಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಿದ್ದ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಒಂದಿಷ್ಟು ಹೆಚ್ಚುವರಿ ಸ್ಥಾನ ಗೆದ್ದಿತ್ತು. ಈ ಹಿನ್ನೆಲೆ ಈ ಬಾರಿಯೂ ಬಾದಾಮಿಯಿಂದ ಸ್ಪರ್ಧಿಸಿದರೆ ಬಾಗಲಕೋಟೆ, ಬೆಳಗಾವಿ, ರಾಯಚೂರು, ಬಳ್ಳಾರಿ, ಬೀದರ್, ವಿಜಯಪುರ ಮುಂತಾದ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಹೆಚ್ಚಿನ ಬಲ ಬರಲಿದೆ.

ಈ ಕಾರಣದಿಂದ ತಾವು ಬದಾಮಿಯಿಂದಲೇ ಸ್ಪರ್ಧಿಸುವಂತೆ ಎಸ್​.ಆರ್​. ಪಾಟೀಲ್ ಅವರಿಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಕೋಲಾರದಿಂದ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ ಹಳೆ ಮೈಸೂರು ಭಾಗದ ನಾಯಕರಿಗೂ ಬೇಸರ ಮೂಡಿಸಿದ್ದಾರೆ. ಇದೀಗ ಗೆಲ್ಲುವ ಕ್ಷೇತ್ರಕ್ಕಾಗಿ ಸಾಕಷ್ಟು ಹುಡುಕಿದ ಸಿದ್ದರಾಮಯ್ಯ ಅಂತಿಮವಾಗಿ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ನಿವಾಸಕ್ಕೆ ಎಸ್​ಆರ್​ಪಿ: ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ವಿಧಾನ ಪರಿಷತ್​ ಪ್ರತಿಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ಇತ್ತೀಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಮಾಲೋಚಿಸಿದ್ದರು. ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದ, ಎಸ್ ಆರ್ ಪಾಟೀಲ್ ದಿಢೀರ್ ಭೇಟಿ ನೀಡಿ ಸಮಾಲೋಚಿಸಿರುವುದು ಅಚ್ಚರಿಗೆ ಕಾರಣವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಸಿದ್ದರಾಮಯ್ಯ ಮತ್ತು ಪಕ್ಷದ ಕಾರ್ಯಕ್ರಮಗಳಿಂದ ಎಸ್​ ಆರ್​ ಪಾಟೀಲ್​​ ಅಂತರ ಕಾಪಾಡಿಕೊಂಡಿದ್ದರು. ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದರು. ಕ್ಷೇತ್ರಕ್ಕೆ ಸೀಮಿತರಾಗಿದ್ದು ಬಹುದಿನಗಳ ನಂತರ ಬೆಂಗಳೂರಿಗೆ ಆಗಮಿಸಿದ್ದರು.

ಕೋಲಾರದಿಂದಲೇ ಸ್ಪರ್ಧೆ: ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವೆ. ಈ ಕ್ಷೇತ್ರದ ಅಭ್ಯರ್ಥಿಯಾಗಲು ನಾನು ತೀರ್ಮಾನ ಮಾಡಿರುವೆ. ನಿಮ್ಮ ಪ್ರೀತಿ ಮತ್ತು ಅಭಿಮಾನವನ್ನು ನಾನು ತಿರಸ್ಕಾರ ಮಾಡಲಿಕ್ಕೆ ಸಾಧ್ಯವಿಲ್ಲ. ನಾನು ಸ್ಪರ್ಧೆ ಮಾಡಬೇಕೆಂದು ಈಗಾಗಲೇ ತೀರ್ಮಾನ ಮಾಡಿದ್ದೇವೆ. ಆದರೆ, ಪಕ್ಷ ಮತ್ತು ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ ಸಿದ್ದರಾಮಯ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.