ಬೆಂಗಳೂರು: ಬೆಳಗಾವಿ ಲೋಕಸಭೆ ಉಪಚುನಾವಣೆ ವಿಚಾರವಾಗಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಇನ್ನೂ ಎಲೆಕ್ಷನ್ ಡಿಕ್ಲೇರ್ ಆಗಿಲ್ಲ. ನಾನು ನಿಲ್ಲೋದಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದೇನೆ. ಆದ್ರೂ ನನ್ನ ಹೆಸರು ಯಾಕೆ ಸುದ್ದಿ ಮಾಡಿ ಬಿಡ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಅಭ್ಯರ್ಥಿ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಎರಡು ಬಾರಿ ಕೋರ್ ಕಮಿಟಿ ಸಭೆ ಆಗಿದೆ. ಸಭೆಗಳಲ್ಲೂ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ. ಉಸ್ತುವಾರಿಗಳ ನೇಮಕದ ಬಗ್ಗೆ ಚರ್ಚೆ ಆಗಿದೆ. ಬೈ ಎಲೆಕ್ಷನ್ ಅನೌನ್ಸ್ ಆಗೋ ತನಕ ಅಭ್ಯರ್ಥಿ ಘೋಷಣೆ ಇಲ್ಲ. ಪಾರ್ಟಿ, ಹೈಕಮಾಂಡ್ ತೀರ್ಮಾನ ಅಂತಿಮ. ಅಮಿತ್ ಶಾ ಬಂದಾಗಲೂ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ ಎಂದರು.
ಓದಿ:ಬಿಜೆಪಿ ನಾಯಕರಿಗೆ ಅಮಿತ್ ಶಾ ಮುಂದೆ ಮಾತನಾಡುವ ಧೈರ್ಯವಿಲ್ಲ: ಬಂಡೆಪ್ಪ ಕಾಶೆಂಪೂರ
ಖಾತೆ ಮರು ಹಂಚಿಕೆ ಕುರಿತು ಪ್ರತಿಕ್ರಿಯೆ : ಇದೇ ಸಂದರ್ಭದಲ್ಲಿ ಖಾತೆ ಮರು ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಈ ಬಗ್ಗೆ ತೀರ್ಮಾನ ಮಾಡ್ತಾರೆ. ಹಿರಿಯ ಸಚಿವರ ಜೊತೆ ಚರ್ಚೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ನನ್ನ ಖಾತೆ ಬದಲಾಗೋ ವಿಚಾರ ಮಾಧ್ಯಮಗಳ ಸೃಷ್ಠಿ ಎಂದು ಹೇಳಿ ಗರಂ ಆದರು.