ETV Bharat / state

ಬ್ಯಾನರ್ ಕಟ್ಟಿ ಬಿಎಸ್​ವೈ ಭೇಟಿಗೆ ಪಟ್ಟು: ಸಿಎಂ ಮನೆ ಮುಂದೆ ವ್ಯಕ್ತಿಯಿಂದ ಹೈಡ್ರಾಮಾ! - ಬ್ಯಾನರ್​​ ಕಟ್ಟಿ ಸಿಎಂರನ್ನು ಭೇಟಿಯಾಗಲು ಧರಣಿ

ಮಂಜುನಾಥ್ ಎಂಬ ವ್ಯಕ್ತಿ ಬ್ಯಾನರ್ ಕಟ್ಟಿ ಸಿಎಂ ಭೇಟಿಗೆ ಪಟ್ಟು ಹಿಡಿದ ವ್ಯಕ್ತಿ. ಈತ ಗೃಹ ಕಚೇರಿ ಕೃಷ್ಣಾದ ಮುಂದೆ ಸಿಎಂ ಬಿಎಸ್​ವೈಗೆ ವಾರ್ನಿಂಗ್​ ಇರುವ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

Hydrama of a person
ಸಿಎಂ ಭೇಟಿಗೆ ಆಗ್ರಹ
author img

By

Published : Jun 22, 2020, 4:11 PM IST

ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಮುಂದೆ ವ್ಯಕ್ತಿಯೊಬ್ಬ ಬ್ಯಾನರ್​​ ಕಟ್ಟಿ ಸಿಎಂ ಅವರನ್ನು ಭೇಟಿಯಾಗಲು ಧರಣಿ ನಡೆಸಲು ಮುಂದಾದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಮಂಜುನಾಥ್ ಎಂಬ ವ್ಯಕ್ತಿ ಬ್ಯಾನರ್ ಕಟ್ಟಿ ಸಿಎಂ ಭೇಟಿಗೆ ಪಟ್ಟು ಹಿಡಿದ ವ್ಯಕ್ತಿ. ಈತ ಗೃಹ ಕಚೇರಿ ಕೃಷ್ಣಾದ ಮುಂದೆ ಸಿಎಂ ಬಿಎಸ್​ವೈಗೆ ವಾರ್ನಿಂಗ್​ ಇರುವ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಯೇಸು ಕಡೆಯಿಂದ ನಾನು ಬಿಎಸ್​ವೈರನ್ನು ಸಿಎಂ ಮಾಡಿದ್ದೇನೆ. ನನ್ನ ಪ್ರಾರ್ಥನೆಯಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ. ಸಿಎಂ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಲು ಮುಂದಾಗಿದ್ದಾ‌ನೆ.

ಬ್ಯಾನರ್ ಕಟ್ಟಿ ಸಿಎಂ ಭೇಟಿಗೆ ಆಗ್ರಹ

ಯಾವುದೇ ಅನುಮತಿ ಇಲ್ಲದೆ ಸಿಎಂ ಮನೆ ಮುಂದೆ ಬ್ಯಾನರ್ ಕಟ್ಟುವ ಹಾಗಿಲ್ಲ ಎಂದು ಸ್ಥಳಕ್ಕೆ ಬಂದ ಸಿಎಂ ಗೃಹ ಕಚೇರಿಯ ಪೊಲೀಸರು ಮಂಜುನಾಥ್ ಕಟ್ಟಿರುವ ಬ್ಯಾನರ್ ತೆರವುಗೊಳಿಸಿದರು. ಸಿಎಂ ಅಪಾಯಿಂಟ್​ಮೆಂಟ್ ತೆಗೆದುಕೊಳ್ಳಲು ನಿಯಮ‌ ಇದೆ. ಹೀಗೆಲ್ಲಾ ಬ್ಯಾನೆರ್ ಕಟ್ಟಬಾರದು ಎಂದು ಬುದ್ಧಿ ಹೇಳಿದರು. ಆದರೂ ಮಾತು ಕೇಳದ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.