ETV Bharat / state

ಶಾಸಕರ ಭವನದಲ್ಲಿ ಕುರುಬ ಸಮುದಾಯದ ನಾಯಕರ ಸಭೆ.. ಮಾಜಿ ಸಚಿವ ಹೆಚ್ ವಿಶ್ವನಾಥ್ ಹೀಗಂದರು..

ಮಂತ್ರಿ ಮಾಡ್ತೀನಿ ಬಾ ಅಂತಾ ಯಾರಾದರೂ ಕರಿತಾರಾ?. ಅವಕಾಶ ಸಿಗಬಹುದು ಅಥವಾ ಇಲ್ಲ. ನನಗೆ ಮಂತ್ರಿ ಸ್ಥಾನ ನೀಡುವ ಕುರಿತು ಚರ್ಚೆ ಆಗ್ತಿದೆ ನಿಜ. ಆದರೆ, ಅದಕ್ಕಾಗಿ ನಾವು ದುಂಬಾಲು ಬಿದ್ದಿಲ್ಲ. ಇವತ್ತಿನ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರಿದ್ದಾರೆ. ಇದು ಸಮುದಾಯದ ವಿಚಾರಕ್ಕೆ ಸಂಬಂಧಿಸಿದ ಸಭೆ. ದೇಶದ ಕುರುಬ ಸಮುದಾಯವನ್ನು ಒಂದು ವೇದಿಕೆಗೆ ತರುವ ಪ್ರಯತ್ನ..

H.Vishwanath meeting at MLA's house
ಶಾಸಕರ ಭವನದಲ್ಲಿ ಎಚ್.ವಿಶ್ವನಾಥ್ ಸಭೆ : ಇದು ಶಕ್ತಿ ಪ್ರದರ್ಶನದ ಸಭೆ ಅಲ್ಲ ಅಂದ್ರು ಹಳ್ಳಿ ಹಕ್ಕಿ
author img

By

Published : Sep 20, 2020, 8:43 PM IST

Updated : Sep 20, 2020, 9:10 PM IST

ಬೆಂಗಳೂರು : ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್ ಶಾಸಕರ ಭವನದಲ್ಲಿ ಕುರುಬ ಸಮುದಾಯದ ನಾಯಕರ ಸಭೆ ನಡೆಸಿದರು.

ಶೆಫಾರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್‌ನ 5ನೇ ವಾರ್ಷಿಕೋತ್ಸವ ಸಮಾರಂಭದ ರೂಪುರೇಷೆ ಚರ್ಚಿಸಲು ಸಭೆ ನಡೆಸಿದ್ದಾರೆ. ಮಾಜಿ ಸಚಿವ ಹೆಚ್ ಎಂ ರೇವಣ್ಣ ಸೇರಿ ಕುರುಬ ಸಮುದಾಯದ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹೆಚ್ ವಿಶ್ವನಾಥ್ ಅವರು ಸಮುದಾಯದ ಶಕ್ತಿ ಪ್ರದರ್ಶನ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ಶಾಸಕರ ಭವನದಲ್ಲಿ ಕುರುಬ ಸಮುದಾಯದ ನಾಯಕರ ಸಭೆ

ಸಭೆ ಬಳಿಕ ಮಾತನಾಡಿದ ಹೆಚ್ ವಿಶ್ವನಾಥ್ ಅವರು, ಸಚಿವ ಆಗಬೇಕು ಅಂತಾ ಹಠ, ಚಟಕ್ಕೆ ನಾನು ಬಿಜೆಪಿಗೆ ಬಂದಿಲ್ಲ. ಹಳೆ ಪಕ್ಷದಲ್ಲಿದ್ದಾಗ ಅಲ್ಲಿನ ನಮ್ಮ ನಾಯಕರ ವಿರುದ್ಧ ಬಂಡಾಯವೆದ್ದು ಬಂದವರು ನಾವು. ನಾನೂ ದೆಹಲಿಗೆ ಹೋಗಿ ಬಂದಿದ್ದೇನೆ. ಇದು ಯಾವ ಶಕ್ತಿ ಪ್ರದರ್ಶನದ ಸಭೆಯೂ ಅಲ್ಲ. ಶೆಫರ್ಡ್ ಇಂಟರ್ ನ್ಯಾಷನಲ್ ಸಂಘಟನೆ ಸಭೆ. ಇದು ರಾಜಕೀಯ ಸಭೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮಂತ್ರಿ ಮಾಡ್ತೀನಿ ಬಾ ಅಂತಾ ಯಾರಾದರೂ ಕರಿತಾರಾ?. ಅವಕಾಶ ಸಿಗಬಹುದು ಅಥವಾ ಇಲ್ಲ. ನನಗೆ ಮಂತ್ರಿ ಸ್ಥಾನ ನೀಡುವ ಕುರಿತು ಚರ್ಚೆ ಆಗ್ತಿದೆ ನಿಜ. ಆದರೆ, ಅದಕ್ಕಾಗಿ ನಾವು ದುಂಬಾಲು ಬಿದ್ದಿಲ್ಲ. ಇವತ್ತಿನ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರಿದ್ದಾರೆ. ಇದು ಸಮುದಾಯದ ವಿಚಾರಕ್ಕೆ ಸಂಬಂಧಿಸಿದ ಸಭೆ. ದೇಶದ ಕುರುಬ ಸಮುದಾಯವನ್ನು ಒಂದು ವೇದಿಕೆಗೆ ತರುವ ಪ್ರಯತ್ನ. ಇದು ರಾಜಕೀಯಕ್ಕೆ ಸಂಬಂಧಪಟ್ಟ ಸಭೆ ಅಲ್ಲ ಎಂದರು.

ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ, ಸಂಪುಟ ವಿಸ್ತರಣೆ ಕುರಿತು ಚರ್ಚಿಸೋಕೆ ದೆಹಲಿಗೆ ಹೋಗಿದ್ರು. ಸಂಪುಟ ವಿಸ್ತರಣೆ ಆಗೇ ಆಗುತ್ತೆ. ಸಂಪುಟದಲ್ಲಿ ನಾವು ಇರ್ತೀವಿ ಅನ್ಕೊಂಡಿದ್ದೇವೆ. ಐವತ್ತು, ಅರವತ್ತು ಜನ ಆಕಾಕ್ಷಿಗಳಿದ್ದಾರೆ. ಆದರೆ, ಐವತ್ತು ಅರವತ್ತು ಜನಕ್ಕೂ ಮಂತ್ರಿ ಸ್ಥಾನ ಸಿಗಲ್ಲ. ರಾಜಕೀಯ ಅಂದ್ರೇನೇ ಅವಕಾಶ. ನಮ್ಮ ನಡೆ ಶಾಸಕನ ನಡೆ. ಶಾಸನ ಸಭೆ ಆರಂಭ ಆಗ್ತಿದೆ. ನಾನು ಸಭೆಯಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

Last Updated : Sep 20, 2020, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.