ETV Bharat / state

ನಡುರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿ ಕೊಂದ ಪತಿ: ಬಳಿಕ ಠಾಣೆಗೆ ಶರಣಾದ ಭೂಪ - ಬೆಂಗಳೂರು

ನಡುರಸ್ತೆಯಲ್ಲಿ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ ಘಟನೆ ರಾಜಗೋಪಾಲ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬಳಿಕ ಪತಿ ತಾನಾಗಿ ಪೊಲೀಸ್​ ಠಾಣೆಗೆ ಶರಣಾಗಿದ್ದಾನೆ.

ಠಾಣೆಗೆ ಶರಣಾದ ಪಾಪಿ ಪತಿ
ಠಾಣೆಗೆ ಶರಣಾದ ಪಾಪಿ ಪತಿ
author img

By

Published : Jul 1, 2020, 8:02 AM IST

ಬೆಂಗಳೂರು: ನಡು ರಸ್ತೆಯಲ್ಲಿ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಗರದಲ್ಲಿ ನಡೆದಿದೆ. ಕೊಲೆ ‌ಮಾಡಿದ ನಂತರ ಆರೋಪಿ ಠಾಣೆಗೆ ಬಂದು ಶರಣಾಗಿದ್ದಾನೆ‌.

ಹಾಸನ ಜಿಲ್ಲೆಯ ಚನ್ನರಾಯನಪಟ್ಟಣದ ನಿವಾಸಿಯಾದ ಹೇಮಾ ಎಂಬಾಕೆಯನ್ನ ಕುಣಿಗಲ್ ಮೂಲದ ಮಂಜುನಾಥ್​ಗೆ ಕಳೆದ 10 ವರ್ಷಗಳ‌ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮಂಜುನಾಥ್ ಟೆಂಪೋ ಚಾಲಕನಾಗಿ ಕಾರ್ಯ ನಿರ್ವಹಿಸಿದರೆ, ಹೇಮಾ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮದುವೆಯಾಗಿ ಕೆಲ‌ದಿನಗಳ ಕಾಲ ಚೆನ್ನಾಗಿದ್ದ ಗಂಡ‌ - ಹೆಂಡತಿ, ಕೆಲ ದಿನಗಳ ಬಳಿಕ ಪ್ರತಿ ದಿನ ಗಲಾಟೆ ಮಾಡುತ್ತಿದ್ದರಂತೆ. ಇದೇ ವಿಚಾರವಾಗಿ ಈ ಹಿಂದೆ ಹೇಮಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಆದರೆ, ನಿನ್ನೆ ಕೂಡ ಗಲಾಟೆ ಮತ್ತೆ ತಾರಕಕ್ಕೇರಿದೆ. ಇದೇ ಕೋಪದಲ್ಲಿ ಮಂಜುನಾಥ್ ಹೇಮಾ ಮೇಲೆ ಹಲ್ಲೆ ‌ಮಾಡಿದ್ದಾನೆ. ಇದರಿಂದ ಭೀತಿಗೊಂಡ ಹೇಮಾ ಮನೆಯಿಂದ ಹೊರಗಡೆ ಓಡಿ ಬಂದಿದ್ದಾಳೆ. ಆದರೂ ‌ಬಿಡದ ಮಂಜುನಾಥ್ ನಡು ರಸ್ತೆಯಲ್ಲಿ ಚಾಕು ಇರಿದು ಕೊಲೆ ‌ಮಾಡಿದ್ದಾನೆ.‌

ಸದ್ಯ ಆತನೇ ರಾಜಗೋಪಾಲನಗರ ಪೊಲೀಸ್​ ಠಾಣೆಗೆ ಬಂದು ಶರಣಾಗಿ ಕೊಲೆ‌ ಮಾಡಿರುವ ವಿಚಾರ ತಿಳಿಸಿದ್ದಾನೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ದಂಪತಿಗೆ ಎರಡು‌ ಮಕ್ಕಳಿದ್ದು, ಗಂಡ ಹೆಂಡತಿ ಜಗಳದಲ್ಲಿ ಅವುಗಳು ಅನಾಥವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.