ETV Bharat / state

ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದಲ್ಲ.. ಶೀಲ‌‌ ಶಂಕಿಸಿ ಗಂಡನಿಂದಲೇ ಪತ್ನಿಯ ಹತ್ಯೆ - ETV Bharath Kannada news

ಗರ್ಭಿಣಿಯಾದ ಹೆಂಡತಿಯನ್ನೇ ಶಂಕಿಸಿ ಕೊಲೆ ಮಾಡಿದ ಪತಿ - ಆರು ತಿಂಗಳ ಹಿಂದೆ ವಿವಾಹವಾಗಿದ್ದ ಜೋಡಿಯ ನಡುವೆ ಬಂದ ಅನುಮಾನ ಕೊಲೆಯಲ್ಲಿ ಅಂತ್ಯ - ಕೊಲೆ ಮಾಡಿ ಹುಡುಗಿಯ ಅಣ್ಣನಿಗೆ ಕೊಂದ ಸಂದೇಶ ಕಳಿಸಿದ್ದ ಪತಿ.

husband-killed-his-wife-for-suspicion-in-bengaluru
ಶೀಲ‌‌ ಶಂಕಿಸಿ ಗಂಡನಿಂದಲೇ ಪತ್ನಿಯ ಹತ್ಯೆ
author img

By

Published : Jan 16, 2023, 10:43 PM IST

ಶೀಲ‌‌ ಶಂಕಿಸಿ ಗಂಡನಿಂದಲೇ ಪತ್ನಿಯ ಹತ್ಯೆ

ಬೆಂಗಳೂರು: ಮಡದಿ ಗರ್ಭಿಣಿಯಾಗಿರುವುದು ತನ್ನಿಂದಲ್ಲ, ಆಕೆಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಿಸಿ ಪತಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಇಬ್ಬರು ನಡುವೆ ಬೆಳದ ಅನುಮಾನದ ಹುತ್ತ ಸಾವಿಗೆ ಕಾರಣವಾಗಿದೆ. ಕೊಲೆ ಮಾಡಿದ ಪತಿ ಹೆಂಡತಿಯ ಅಣ್ಣನಿಗೆ ಕೊಲೆಯ ಬಗ್ಗೆ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾನೆ.

22 ವರ್ಷದ ನಾಜ಼್ ಕೊಲೆಯಾದ ಮಹಿಳೆಯಾಗಿದ್ದು ಹೆಂಡತಿಯನ್ನ ಕೊಂದು‌ ಪತಿ ನಾಸೀರ್ ಹುಸೇನ್ ಎಸ್ಕೇಪ್ ಆಗಿದ್ದಾನೆ. ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ ಕೊಲೆಯಾಗಿರುವುದು ಎಂದು ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳ ಹಿಂದೆ ದಂಪತಿ ಲವ್ ಮ್ಯಾರೇಜ್ ಆಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ನಾಸೀರ್ ಹುಸೇನ್ ತಂದೆ-ತಾಯಿ ಇರಲಿಲ್ಲ ಎಂಬುದು ತಿಳಿದು ಬಂದಿದೆ.

ಏನಿದು ಪ್ರಕರಣ?: ನಾಜ಼್ ಮತ್ತು ನಾಸೀರ್ ಹುಸೇನ್ ಪ್ರೀತಿ ಮಾಡಿದ್ದರು. ನಾಸೀರ್​ ಖಾಸಗಿ ಕಂಪನಿಯ ಟೆಕ್ಕಿ ಎಂದು ಹೇಳಿಕೊಂಡಿದ್ದ. ಒಳ್ಳೆಯ ಹುಡುಗ ನಂತೆ ಕಂಡ ನಾಸೀರ್​ಗೆ ನಾಜ಼್ ಮನೆಯವರು ಆರು ತಿಂಗಳ ಹಿಂದೆ ವಿವಾಹದ ಮುದ್ರೆ ಒತ್ತಿದ್ದರು. ಮದುವೆಯ ನಂತರ ಇಬ್ಬರು ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್​ನಲ್ಲಿ ಬಂದು ಸಂಸಾರ ಆರಂಭಿಸಿದ್ದರು.

ಇತ್ತೀಚೆಗೆ ನಾಜ಼್ ಗರ್ಭಿಣಿಯಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ನಾಸೀರ್​ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿಕೊಂಡಿದೆ. ಗರ್ಭಿಣಿಯಾಗುವುದಕ್ಕೆ ಕಾರಣ ನಾನಲ್ಲ‌ ಎಂದು ಹೇಳಿ ಗರ್ಭಪಾತ ಮಾಡಿಸುವಂತೆ‌ ಒತ್ತಾಯಿಸಿದ್ದಾನೆ. ಇದಕ್ಕೆ ಪತ್ನಿಯು ನಿರಾಕರಿಸಿದ್ದರಿಂದ ಇಬ್ಬರು ನಡುವೆ ಜಗಳವಾಗಿದೆ. ಈ ಜಗಳವನ್ನು ಮನೆಯವರು ಸರಿ ಪಡಿಸಿದ್ದರು.

ಆದರೆ, ಮತ್ತೆ ಪತಿ ಪತ್ನಿಯ ನಡುವೆ ಇದೇ ವಿಚಾರಕ್ಕೆ ಜಗಳವಾಗಿದೆ. ಈ ಗಲಾಟೆ ತಾರಕಕ್ಕೇರಿದಾಗ ಪತಿ ನಾಸೀರ್​ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆತ ನಾಜ಼್​ಳ ಅಣ್ಣನಿಗೆ ನಿನ್ನ ತಂಗಿಯ ಕೊಲೆ ಮಾಡಿರುವುದಾಗಿ ಸಂದೇಶ ಕಳುಹಿಸಿದ್ದಾನೆ. ಸಂದೇಶ ಓದಿದ ಕೂಡಲೇ ಪೊಲೀಸರಿಗೆ ನಾಜ಼್​ಳ ಅಣ್ಣ ದೂರು ನೀಡದ್ದು, ಪೊಲೀಸರು ಬಂದು ಅಪಾರ್ಟಮೆಂಟ್​ ನೋಡಿದಾಗಿ ಕೊಲೆ ನಡೆದಿರುವುದು ಗೊತ್ತಾಗಿದೆ.

ಇವರಿಬ್ಬರಿಗೆ ಮದುವೆ ಮಾಡಿಸಿದವನ ಮೇಲೆಯೇ ಪತಿಗೆ ಶಂಕೆ: ಆರು ತಿಂಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಇವರಿಬ್ಬರ ನಡುವೆ ವಿವಾಹಕ್ಕೆ ಕಾರಣನಾಗಿದ್ದವನ ಜೊತೆ ಪತ್ನಿ ಅಕ್ರಮ ಸಂಬಂಧದಲ್ಲಿದ್ದಳು ಎಂದು ನಾಸೀರ್​ ಶಂಕಿಸಿದ್ದ. ಇವರಿಬ್ಬರ ಮದುವೆ ಮಾಡಿಸಿದವನು ನಾಸೀರ್​ಗೆ ಸಂಬಂಧಿ ಎಂದು ಹೇಳಲಾಗುತ್ತಿದೆ. ತಲೆ ಮರೆಸಿಕೊಂಡಿರುವ ನಾಸೀರ್​ ಸಿಕ್ಕ ನಂತರ ಸತ್ಯಾಂಶ ಹೊರ ಬರಲಿದೆ.

ಪೊಲೀಸರು ಹೇಳುವಂತೆ: ಕೊಲೆ ಪ್ರಕರಣ ಸಂಬಂಧ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಜೆ.ಬಾಬಾ ಪ್ರತಿಕ್ರಿಯಿಸಿದ್ದಾರೆ‌‌. ‌ಸುದ್ದುಗುಂಟೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಗಂಡನಿಂದಲೇ ಹೆಂಡತಿ ಹತ್ಯೆಯಾಗಿದ್ದಾಳೆ‌. ಗರ್ಭೀಣಿಯಾಗಿದ್ದ ಹೆಂಡತಿ ಮೇಲೆ ಸಂಶಯವಿತ್ತು. ಇದೇ ಕಾರಣಕ್ಕಾಗಿಯೇ ದಂಪತಿ‌ ನಡುವೆ ಆಗಾಗ ಗಲಾಟೆಯಾಗುತಿತ್ತು. ನಿನ್ನೆ ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಾಸೀರ್ ಪಶ್ಚಿಮ ಬಂಗಾಳದ ಮೂಲದವನು ಎನ್ನಲಾಗಿದ್ದು ಆರು ತಿಂಗಳ ಹಿಂದೆ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದರು. ಪತ್ನಿ ಮೇಲೆ‌ ಪತಿಗೆ ಶೀಲದ ಬಗ್ಗೆ ಸಂಶಯ ಕಾರಣಕ್ಕಾಗಿಯೇ ಕೃತ್ಯವೆಸಗಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಎಸ್ಕೇಪ್ ಆಗಿರುವ ಅರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಾರ್ಟಮೆಂಟ್​ನವರು ತಿಳಿಸುವಂತೆ: ಒಂದೂವರೆ ತಿಂಗಳ ಹಿಂದೆ ಈ ಅಪಾರ್ಟಮೆಂಟ್​ಗೆ ಬಂದಿದ್ದರು. ಬೊಮ್ಮನಹಳ್ಳಿಯಲ್ಲಿದ್ದ ಕಂಪನಿ ಮಾರುತಿ ನಗರಕ್ಕೆ ಬದಲಾಗಿದೆ ಓಡಾಡಲು ಹತ್ತಿರ ಆಗುತ್ತೆ ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಬಂದು ಫ್ಲಾಟ್​ ಬುಕ್​ ಮಾಡಿದ್ದರು. ಗಂಡ ಮಾತ್ರ ಕೆಲಸಕ್ಕೆ ಹೋಗುತ್ತಿದ್ದ. ಆಕೆ ಹೌಸ್​ ವೈಫ್​ ಆಗಿದ್ದಳು ಎಂದು ಅಪಾರ್ಟಮೆಂಟಿನ ಮಾಲೀಕ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಹಿಳೆಯರ ನಕಲಿ‌ ಪ್ರೊಫೈಲ್ ಬಳಸಿ ಹಣ ಮಾಡುತ್ತಿದ್ದ ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.