ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹ್ಯೂಮನ್ ಕಲೆಕ್ಟಿವ್ ಸಂಘಟನೆ ಸದಸ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ದೊಮ್ಮಲೂರಿನ ರಾಯಭಾರ ಗಾಲ್ಫ್ ಲಿಂಕ್ಸ್ ಟೆಕ್ ಪಾರ್ಕ್ ಬಳಿ ಜಮಾಯಿಸಿದ ನೂರಾರು ಮುಸ್ಲಿಂ ಬಾಂಧವರು ಮಾನವ ಸರಪಳಿ ರಚಿಸಿ ಸಿಎಎ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.
ಇದೇ ವೇಳೆ ಹ್ಯೂಮನ್ ಕಲೆಕ್ಟಿವ್ ಸಂಘಟನೆ ಸಿಎಎ ಮತ್ತು ಎನ್‌ಆರ್‌ಸಿಗೆ ಏಕೆ ವಿರುದ್ಧವಾಗಿದೆ ಎಂಬುದನ್ನು ವಿವರಿಸುವ ಕರಪತ್ರಗಳನ್ನು ಟೆಕ್ಪಾರ್ಕ್ನ ನೌಕರರಿಗೆ ವಿತರಿಸಲಾಯಿತು. ಕಾನೂನಿನ ಬಗ್ಗೆ ಸ್ಪಷ್ಟೀಕರಣಗಳನ್ನು ಬಯಸುವ ಜನರೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಯಿತು. ಇನ್ನು ಸಿಎಎ, ಎನ್ಆರ್ಸಿ ಪ್ರತಿಭಟನೆಯಲ್ಲಿ ಸಾಕಷ್ಟು ಐಟಿ ವೃತ್ತಿಪರರು ಕೂಡ ಭಾಗವಹಿಸಿದ್ದರು.