ಬೆಂಗಳೂರು: ನಗರದಲ್ಲಿ ಮಾಸ್ಕ್ ಧರಿಸದ ಜನರಿಂದ ದಿನವೊಂದಕ್ಕೆ ಲಕ್ಷ ಲಕ್ಷ ರೂಪಾಯಿ ದಂಡ ವಸೂಲಿ ಆಗುತ್ತಿದೆ. ರಾಜಧಾನಿಯಲ್ಲಿ ಮಾಸ್ಕ್ ಕಡ್ಡಯಗೊಳಿಸಿ, ದಂಡ ವಿಧಿಸಲು ಆರಂಭವಾದ 2020ರ ಮೇ ತಿಂಗಳಿಂದ ಈವರೆಗೂ ಬರೋಬ್ಬರಿ 15,72,30,620 ರೂ. ಸಂಗ್ರಹವಾಗಿದೆ.
ಇದೀಗ ನಗರದಲ್ಲಿ ಮತ್ತೆ ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿದ್ದಂತೆ ಮಾರ್ಷಲ್ಗಳ ತಂಡ ಮತ್ತಷ್ಟು ಅಲರ್ಟ್ ಆಗಿದೆ. ಜನ ಮೈಮರೆತು ಓಡಾಡಿದರೂ ದಂಡ ಹಾಕುವುದು ಖಚಿತ. ಮಾಸ್ಕ್ ಇದ್ದರೂ, ಸರಿಯಾಗಿ ಧರಿಸಿರದಿದ್ದರೂ ದಂಡ ತೆರಬೇಕಾಗುತ್ತದೆ. ಮಾಸ್ಕ್ ನಿಯಮ ಉಲ್ಲಂಘಿಸಿದವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ. ಕೇವಲ ಜನವರಿ ತಿಂಗಳ 13 ದಿನಗಳಲ್ಲೇ, 35,31,750 ರೂಪಾಯಿ ದಂಡ ವಸೂಲಿಯಾಗಿದೆ.
ಶುಕ್ರವಾರ ಒಂದು ದಿನದ ದಂಡ:
ಮಾಸ್ಕ್ ಪ್ರಕರಣ - 910
ದಂಡ - 2,27,500 ರೂ.
ಸಾಮಾಜಿಕ ಅಂತರ - 22
ಒಟ್ಟು - 2,33,000 ರೂ.
ಈ ಪೈಕಿ ಪಶ್ಚಿಮ ವಲಯದಲ್ಲಿ ಅತಿಹೆಚ್ಚು ಕೋವಿಡ್ ನಿಯಮ ಉಲ್ಲಂಘನೆ ಕಂಡುಬಂದಿದ್ದು, 393 ಜನರಿಗೆ ದಂಡ ಬಿದ್ದಿದೆ. ಉಳಿದಂತೆ ಪೂರ್ವವಲಯದಲ್ಲಿ 155, ದಕ್ಷಿಣ ವಲಯ 158 ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ.
ಜನವರಿ ತಿಂಗಳ ದಂಡದ ಮೊತ್ತ (01 to 13ರವರೆಗೆ):
ಮಾಸ್ಕ್ ಪ್ರಕರಣ - 13,740
ದಂಡ - 34,35,000 ರೂ.
ಸಾಮಾಜಿಕ ಅಂತರ - 387 ಪ್ರಕರಣ
ಒಟ್ಟು - 35,31,750 ರೂ.
ಕೇವಲ ಮಾರ್ಷಲ್ಸ್ ವಿಧಿಸಿರುವ ದಂಡದ ವಿವರ ಇದಾಗಿದೆ. ಇದಲ್ಲದೆ ಪೊಲೀಸ್ ಹಾಗೂ ಕಿರಿಯ ಆರೋಗ್ಯ ಅಧಿಕಾರಿಗಳು ಸಂಗ್ರಹಿಸಿರುವ ದಂಡ ಪ್ರತ್ಯೇಕವಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಮಾಸ್ಕ್ ಹಾಕದ ಯುವಕನನ್ನು ಕೊರಳಪಟ್ಟಿ ಹಿಡಿದು ಎಳೆದೊಯ್ದ ಪೊಲೀಸ್