ಬೆಂಗಳೂರು: ಆಗೊಮ್ಮೆ ಈಗೊಮ್ಮೆ ಅಂತಾ ಎಂಟ್ರಿ ಕೊಡೋ ಮಳೆರಾಯ ಸದ್ಯ ಕೈ ಕೊಟ್ಟು ಎಲ್ಲರ ನೆಮ್ಮದಿ ಹಾಳು ಮಾಡಿದ್ದಾನೆ. ಮಳೆ ಬಂದರೆ ಕಷ್ಟ, ಬಾರದೇ ಇದ್ದರೆ ನಷ್ಟ ಎಂಬ ಸಂಕಷ್ಟ ಎದುರಾಗಿದೆ. ಜೂನ್ ಮೊದಲ ವಾರದಲ್ಲೇ ಮುಂಗಾರು ಶುರುವಾಗಬೇಕಿತ್ತು. ಆದರೆ ಅದ್ಯಾಕೋ ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ.
ಕರ್ನಾಟಕದಲ್ಲಿ ಜೂನ್‌ನಲ್ಲಿ ಸಾಮಾನ್ಯವಾಗಿ 199.3 ಮಿ.ಮೀ.( ಮಿಲಿ ಮೀಟರ್) ಮಳೆಯಾಗಬೇಕಿತ್ತು. ಆದರೆ ಈ ಬಾರಿ 152.8 ಮಿಮಿ ಮಳೆಯಾಗಿದೆ. 23 ಮಿ.ಮೀ.ನಷ್ಟು ಜೂನ್‌ನಲ್ಲಿ ಮಳೆ ಕೊರತೆ ಉಂಟಾಗಿದೆ. ಹಾಗಿದ್ದರೆ ಜೂನ್ ತಿಂಗಳಲ್ಲಿ ಆದ ಮಳೆಯ ಪ್ರಮಾಣವೆಷ್ಟು? ವಾಡಿಕೆಗಿಂತ ಕಡಿಮೆ ಮಳೆ ಯಾವ ಜಿಲ್ಲೆಯಲ್ಲಿ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಜಿಲ್ಲೆಗಳು | ವಾಡಿಕೆ ಮಳೆ | ಸುರಿದ ಮಳೆ | ಕೊರತೆ |
---|---|---|---|
ದಕ್ಷಿಣ ಕನ್ನಡ | 964.7mm | 483mm | 50mm |
ಉಡುಪಿ | 1107.6mm | 720mm | 35mm |
ಉತ್ತರ ಕನ್ನಡ | 738.4mm- | 591.9mm | 20mm |
ಬೆಳಗಾವಿ | 141.4mm | 138mm | 2mm |
ಬೀದರ್ | 130mm | 117.2mm | 10mm |
ಧಾರವಾಡ | 130mm | 99.3mm | 24mm |
ಹಾವೇರಿ | 118.4mm | 69.9mm | 41mm |
ರಾಯಚೂರು | 88.4mm | 78.2mm | 11mm |
ಯಾದಗಿರಿ | 106.4mm | 83.7mm | 21mm |
ಬಳ್ಳಾರಿ | 75.8mm | 57.9mm | 24mm |
ಬೆಂ.ಗ್ರಾಮೀಣ | 72.9mm | 66.2mm | 8mm |
ಬೆಂ. ನಗರ | 72.0mm | 62.7mm | 13mm |
ಚಾಮರಾಜನಗರ | 62.8mm | 47mm | 25mm |
ದಾವಣಗೆರೆ | 80.5mm | 49.4mm | 39mm |
ಹಾಸನ | 143.7mm | 87.7mm | 39mm |
ಕೊಡಗು | 569.8mm | 288.3mm | 49mm |
ಮೈಸೂರು | 81.5mm | 62.8mm | 23mm |
ಶಿವಮೊಗ್ಗ | 363mm | 187.8mm | 48mm |
ಜಿಲ್ಲೆಗಳು | ವಾಡಿಕೆ ಮಳೆ | ಸುರಿದ ಮಳೆ | ಅಧಿಕ |
---|---|---|---|
ಬಾಗಲಕೋಟೆ | 86mm | 120mm | 40mm |
ಗದಗ | 87.6 mm | 94.2mm | 8mm |
ಕಲರ್ಬುಗಿ | 108.3mm | 130.6mm | 21mm |
ಕೊಪ್ಪಳ | 75.8mm | 94.4mm | 25mm |
ವಿಜಯಪುರ | 92.8mm | 103.3mm | 11mm |
ಚಿಕ್ಕಬಳ್ಳಾಪುರ | 64mm | 131mm | 105mm |
ಚಿತ್ರದುರ್ಗ | 51.5mm | 55.9mm | 9mm |
ಕೋಲಾರ | 63.3mm | 76.7mm | 21mm |
ಮಂಡ್ಯ | 55.3mm | 62.0mm | 12mm |
ರಾಮನಗರ | 72.9mm | 99.5mm | 37mm |
ತುಮಕೂರು | 61mm | 98mm | 61mm |
ಒಟ್ಟು 30 ಜಿಲ್ಲೆಗಳಲ್ಲಿ 11 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದರೆ, ಮಿಕ್ಕ 19 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಒಟ್ಟಾರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದರೆ, ಉತ್ತರ ಒಳನಾಡಿನಲ್ಲಿ ಸಾಮಾನ್ಯ ಮಳೆಯಾಗಿದೆ ಅಂತಾರೆ ಹವಾಮಾನ ತಜ್ಞ ಪಾಟೀಲ್. ಇನ್ನು ಜುಲೈ ಮೊದಲ ವಾರದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.