ಬೆಂಗಳೂರು: ರಾಜ್ಯಾದ್ಯಂತ ಏಪ್ರಿಲ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಿದೆ. ಇಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಭಾಷೆಗಳಿಗೆ ಪರೀಕ್ಷೆ ನಡೆದಿದೆ.
- ಸಂಸ್ಕ್ರತ ಪರೀಕ್ಷೆಗೆ 20,307 ವಿದ್ಯಾರ್ಥಿಗಳು ನೋಂದಾಯಿಸಿದ್ದು, 19,960 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 347 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
- ತಮಿಳು ವಿಷಯಕ್ಕೆ 286 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 18 ಗೈರು ಹಾಜರು ಹಾಗೂ 268 ಹಾಜರಾಗಿದ್ದಾರೆ.
- ತೆಲಗು ವಿಷಯಕ್ಕೆ 78 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 67 ಹಾಜರು, 10 ವಿದ್ಯಾರ್ಥಿಗಳು ಗೈರಾಗಿದ್ದಾರೆ.
- ಉರ್ದು ವಿಷಯಕ್ಕೆ 11,237 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 1,117 ಗೈರು ಆಗಿದ್ದರೆ, 10,120 ಹಾಜರಾಗಿದ್ದಾರೆ.
- ಫ್ರೆಂಚ್ ವಿಷಯಕ್ಕೆ 2,881 ನೋಂದಣಿ ಮಾಡಿಕೊಂಡಿದ್ದು, 40 ಗೈರು, 2841 ಹಾಜರಾಗಿದ್ದಾರೆ.
- ಮಲಯಾಳಂ ವಿಷಯಕ್ಕೆ 9 ನೋಂದಣಿ, ಒಬ್ಬ ವಿದ್ಯಾರ್ಥಿ ಗೈರು, 8 ಹಾಜರು.
- ಮರಾಠಿ ವಿಷಯಕ್ಕೆ 2,464 ನೋಂದಣಿ, 172 ಗೈರು, 2,310 ಹಾಜರು.
ಪರೀಕ್ಷಾ ಅಕ್ರಮ, ಅವ್ಯವಹಾರದಲ್ಲಿ ಯಾರು ಭಾಗಿಯಾಗಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ. ಯಾವುದೇ ವಿದ್ಯಾರ್ಥಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ ಎಂದು ಪಿಯು ಬೋರ್ಡ್ ತಿಳಿಸಿದೆ.
ಇದನ್ನೂ ಓದಿ: 'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ