ETV Bharat / state

ನಿಂಬೆ ಹಣ್ಣು ಬಾಯಲ್ಲಿಟ್ಟುಕೊಂಡು ಸಚಿವ ಎಂಟಿಬಿ ನಾಗರಾಜ್ ಸಖತ್​ ಡಾನ್ಸ್​ ​

ಸಚಿವ ಎಂಟಿಬಿ ನಾಗರಾಜ್​ ಮತ್ತೆ ನೃತ್ಯದ ಮೂಲಕ ಸದ್ದು ಮಾಡಿದ್ದಾರೆ. ನಾಗಿಣಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಲೆದಿದ್ದ ವಸತಿ ಸಚಿವರು ಇದೀಗ ನಿಂಬೆಹಣ್ಣನ್ನ ಬಾಯಲ್ಲಿಟ್ಟಿಕೊಂಡು ಮನಸೋಯಿಚ್ಛೆ ಕುಣಿದಿದ್ದಾರೆ.

ನಿಂಬೇಹಣ್ಣು ಬಾಯಲ್ಲಿಟ್ಟುಕೊಂಡು ಸ್ಟೇಪ್ ಹಾಕಿದ ಸಚಿವ ಎಂಟಿಬಿ ನಾಗರಾಜ್
author img

By

Published : Apr 21, 2019, 1:00 PM IST

ಬೆಂಗಳೂರು: ಗರುಡಾಚಾರ್ ಪಾಳ್ಯದಲ್ಲಿ ರಾತ್ರಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಸ್ಟೆಪ್ ಹಾಕುವ ಮೂಲಕ ವಸತಿ ಸಚಿವ ಎಂಟಿಬಿ ನಾಗರಾಜ್​ ಸಖತ್​ ಮನರಂಜನೆ ನೀಡಿದ್ದಾರೆ.

ನಿಂಬೆ ಹಣ್ಣು ಬಾಯಲ್ಲಿಟ್ಟುಕೊಂಡು ಕುಣಿದ ಸಚಿವ ಎಂಟಿಬಿ ನಾಗರಾಜ್

ಮೊದಲು‌ ನಿಂಬೆ ಹಣ್ಣು ಬಾಯಲ್ಲಿಟ್ಟುಕೊಂಡು ಹೆಜ್ಜೆ ಹಾಕಿದ ಸಚಿವರು ನಂತರ ವೀರಗಾಸೆ ತಂಡತೊಂದಿಗೆ ಕುಣಿದು ಎಲ್ಲರನ್ನೂ ಖುಷಿಪಡಿಸಿದರು. ಈ ಹಿಂದೆಯೂ ಚುನಾವಣಾ ಪ್ರಚಾರಾದ ವೇಳೆ ನಾಗಿಣಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ಸಚಿವರು, ನಿನ್ನೆ ನಿಂಬೆಹಣ್ಣನ್ನ ಬಾಯಲ್ಲಿಟ್ಟುಕೊಂಡು ಡ್ಯಾನ್ಸ್ ಮಾಡಿರೋ ವಿಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಶ್ರೀರಾಮನವಮಿ ಅಂಗವಾಗಿ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಕಳೆದ 40 ವರ್ಷಗಳಿಂದ ಸಚಿವ ಎಂಟಿಬಿ ನಾಗರಾಜ್ ಕುಟುಂಬದವರು ಈ ಉತ್ಸವವನ್ನ ಅದ್ಧೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ನಿನ್ನೆ ಅಂಬಾರಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೆರವಣಿಗೆ ಮಾಡಲಾಯಿತು.

ಸಚಿವರ ಕುಟುಂಬದವರೆಲ್ಲಾ ಸೇರಿ ಶ್ರೀ ಮಂಜುನಾಥ ದೇವರ ಅಂಬಾರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ನಾದಸ್ವರ, ತಮಟೆ ವಾದ್ಯ, ಕೀಲು ಕುದುರೆ, ನಾಯಂಡಿ ನೃತ್ಯ, ಗಾರಡಿ ಗೊಂಬೆಕುಣಿತ, ಮರಗಾಲು ಮನುಷ್ಯ ಮುಂತಾದ ಸಾಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ಆಕರ್ಷಿಸಿದವು.

Intro:ನಿಂಬೇಹಣ್ಣು ಬಾಯಲ್ಲಿಟ್ಟುಕೊಂಡು ಸ್ಟೇಪ್ ಹಾಕಿದ ಸಚಿವ ಎಂಟಿಬಿ ನಾಗರಾಜ್.

ವಸತಿ ಸಚಿವರಿಂದ ನಾಗಿನಿ ಡ್ಯಾನ್ಸ್ ನಂತರ ಇದೀಗ ನಿಂಬೆಹಣ್ಣಿನ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ನೆನ್ನೆ ರಾತ್ರಿ ನಡೆದ ಶ್ರೀರಾಮನವಮಿ ಪಲ್ಲಕ್ಕಿ ಉತ್ಸವದಲ್ಲಿ ಸ್ಟೇಪ್ ಹಾಕಿ ಉತ್ಸವದಲ್ಲಿ ನೆರೆದಿದ್ದವರಿಗೆ ಗ್ರಾಮಸ್ಥರಿಗೆ ಮನರಂಜನೆ ನೀಡಿದರು.

ಮೊದಲು‌ ನಿಂಬೇಹಣ್ಣು ಬಾಯಲ್ಲಿಟ್ಟುಕೊಂಡು ಸ್ಟೇಪ್ ಹಾಕಿದ ಸಚಿವರು ನಂತರ ವೀರಗಾಸೆ ತಂಡತೊಂದಿಗೆ ಕುಣಿದು ಎಲ್ಲಾರಿಗು ಖುಷಿ ಪಡಿಸಿದರು.

Body:ಈ ಹಿಂದೆಯೂ ಚುನಾವಣಾ ಪ್ರಚಾರಾದ ವೇಳೆ ನಾಗಿನಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ವಸತಿ ಸಚಿವರು,ಇದೀಗ ನಿಂಬೆಹಣ್ಣನ್ನ ಬಾಯಲ್ಲಿಟ್ಟುಕೊಂಡು ಡ್ಯಾನ್ಸ್ ಮಾಡಿದ್ದಾರೆ. ಸಚಿವರ ನಿಂಬೆಹಣ್ಣಿನ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ರಾತ್ರಿ‌ಯಿಂದ ಫುಲ್ ವೈರಲ್ ಆಗಿದೆ.

ಶ್ರೀರಾಮನವಮಿ ಅಂಗವಾಗಿ ಬೆಂಗಳೂರಿನ ಗರುಡಾಚಾರ್ ಪಾಳ್ಯ ವಾರ್ಡ್ ನಲ್ಲಿ
ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಹಬ್ಬದ ಪ್ರಯುಕ್ತ ರಾತ್ರಿ ಹತ್ತು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಸೇರಿದ್ದರು ಸಚಿವ ಎಂಟಿಬಿ ನಾಗರಾಜ್ ಕುಟುಂಬದವರಿಂದ ಕಳೆದ 40 ವರ್ಷಗಳಿಂದ ಈ ಉತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲಾಗುತ್ತಿದ್ದು ಸಚಿವರಾದ ಮೇಲೆ ಇದು ಮೊದಲ ಶ್ರೀರಾಮನವಮಿ ಹಬ್ಬ ಹಾಗಾಗಿ ಆನೇಮೇಲೆ ಅಂಬಾರಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೆರವಣಿಗೆ
ಮಾಡಲಾಗಿತ್ತು. ಇನ್ನೂ ಆನೆಗೆ ಸಚಿವರು ಬಾಳೆಹಣ್ಣು ತಿನಿಸಿ ಸಚಿವರ ಕುಟುಂಬದವರೆಲ್ಲಾ ಸೇರಿ ಶ್ರೀ ಮಂಜುನಾಥ ದೇವರ ಅಂಬಾರಿಗೆ ಪೂಜೆ ಸಲ್ಲಿಸಿದರು.

Conclusion:ಈ ವೇಳೆ ನಾದಸ್ವರ, ತಮಟೆ ವಾಧ್ಯ, ಕೀಲು ಕುದುರೆ, ನಾಯಂಡಿ ನೃತ್ಯ, ಗಾರಡಿಗೊಂಬೆ ಕುಣಿತ, ಮರಗಾಲು ಮನುಷ್ಯ ಮುಂತಾದ ಸಾಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ಆಕರ್ಷಿಸಿತು.

ಧರ್ಮರಾಜು ಎಮ್ ಕೆಆರ್ ಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.