ETV Bharat / state

ನಕಲಿ ಕೀ ಬಳಸಿ ನಿರ್ಮಾಪಕನ ಮನೆಗೆ ಕನ್ನ: ಆರೋಪಿಗಳನ್ನು ಬಂಧಿಸಿದ ಪೊಲೀಸರು - ಬೆಂಗಳೂರು ಮನೆ ಕಳ್ಳತನ

ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

House Theft accused arrested in Bengaluru
ನಕಲಿ ಕೀ ಬಳಸಿ ಮಾಲೀಕನ ಮನೆಗೆ ಕನ್ನ
author img

By

Published : Jul 29, 2021, 12:40 PM IST

ಬೆಂಗಳೂರು : ನಕಲಿ ಕೀ ಬಳಸಿ ನಿರ್ಮಾಪಕನ ಮನೆಗೆ ಕನ್ನ ಹಾಕಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಆರೋಪಿ ನಿರ್ಮಾಪಕನ ಕಾರು ಚಾಲಕ ಎಂದು ತಿಳಿದು ಬಂದಿದೆ.

ಏನಿದು ಘಟನೆ: ಜುಲೈ 10 ರಂದು ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಎಂಬವರ ಮನೆಗೆ ನುಗ್ಗಿದ ಕಳ್ಳರು 3 ಲಕ್ಷ ರೂಪಾಯಿ ನಗದು, 710 ಗ್ರಾಂ. ಚಿನ್ನಾಭರಣ ದೋಚಿದ್ದರು. ಈ ಸಂಬಂಧ ನಿರ್ಮಾಪಕ ಕಶ್ಯಪ್ ಹನುಮಂತನಗರ ಠಾಣೆಗೆ ದೂರು ನೀಡಿದ್ದರು.

House Theft accused arrested in Bengaluru
ನಿರ್ಮಾಪಕ ರಮೇಶ್ ಕಶ್ಯಪ್

ದೂರು ದಾಖಲಿಸಿಕೊಂಡು ತನಖೆಗಿಳಿದ ಪೊಲೀಸರು ಆರೋಪಿಗಳಾದ ಚಂದ್ರಶೇಖರ್(32), ಅಭಿಷೇಕ್ (34) ಅನ್ನು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಡಿಪಡಿಸಿದಾಗ ಆರೋಪಿ ಚಂದ್ರಶೇಖರ್ ನಿರ್ಮಾಪಕ ಕಶ್ಯಪ್ ಅವರ ಕಾರು ಚಾಲಕ ಎಂಬುದು ಗೊತ್ತಾಗಿದೆ.

ಮಾಲೀಕನ ಮನೆಗೆ ಕನ್ನ : ಆರೋಪಿ ಚಂದ್ರ ಶೇಖರ್, ಕಶ್ಯಪ್ ಅವರ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಕಶ್ಯಪ್ ಅವರ ಮನೆಯ ಕೀ ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡಿದ್ದ. ಜುಲೈ 10 ರಂದು ಕಶ್ಯಪ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಸ್ನೇಹಿತ ಅಭಿಷೇಕ್ ಅನ್ನು ಮುಂದೆ ಬಿಟ್ಟು ಕಳ್ಳತನ ಮಾಡಿಸಿದ್ದ.

ಓದಿ : ತಡರಾತ್ರಿ ಸಿಎಂ ಮನೆ ಮುಂದೆ ವೀಲ್ಹಿಂಗ್: ಮೂವರು ಪೊಲೀಸ್ ವಶಕ್ಕೆ, ಸ್ಕೂಟರ್ ಜಪ್ತಿ

ಸದ್ಯ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ಕದ್ದ ಚಿನ್ನವನ್ನು ಅಡವಿಟ್ಟು ಹಣ ಪಡೆದಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಕಶ್ಯಪ್ ಅವರ ಮನೆಯ ಸಿಸಿಟಿವಿ ಮತ್ತು ಚಂದ್ರಶೇಖರ್​ನ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.