ETV Bharat / state

ಮನೆಯೊಳಗೆ ನುಗ್ಗಲೆತ್ನಿಸಿದ ಕಳ್ಳ; ಕಾಲಿಗೆ ಗುಂಡು ಹೊಡೆದ ಮನೆ ಮಾಲೀಕ

ಪರವಾನಗಿ ಪಡೆದ ಡಬಲ್ ಬ್ಯಾರಲ್ ಗನ್‌ನಿಂದ ಮನೆ ಮಾಲೀಕರು ಕಳ್ಳನಿಗೆ ಶೂಟ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರೋಪಿ
ಆರೋಪಿ
author img

By

Published : Dec 13, 2022, 3:08 PM IST

Updated : Dec 13, 2022, 4:25 PM IST

ಕಳ್ಳನ ಕಾಲಿಗೆ ಮನೆ ಮಾಲೀಕ ಶೂಟ್ ಮಾಡಿದ ಪ್ರಕರಣ

ಬೆಂಗಳೂರು: ನಗರದ ಈಶಾನ್ಯ ವಿಭಾಗದ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಚೇನಹಳ್ಳಿಯಲ್ಲಿ ವೆಂಕಟೇಶ್ ಎಂಬವರು ಕಳ್ಳನ‌ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಾಗಲಕೋಟೆ ಮೂಲದ ಲಕ್ಷ್ಮಣ್ ಎಂಬಾತ ಗ್ಯಾಸ್ ಕಟರ್ ಜೊತೆ ನಿನ್ನೆ ರಾತ್ರಿ ಇವರ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾನೆ. ಕಳ್ಳನನ್ನು ಕಂಡು ನಾಯಿ ಬೊಗಳಿದ್ದು ಎಚ್ಚೆತ್ತ ಮನೆ ಮಾಲೀಕ ಸಿಸಿಟಿವಿ ದೃಶ್ಯ ನೋಡಿ ಕಳ್ಳ ಎನ್ನುವುದನ್ನು ಖಾತರಿ ಮಾಡಿಕೊಂಡಿದ್ದಾರೆ.

ಕಳ್ಳನಿಂದ ರಕ್ಷಣೆ ಪಡೆಯಲು ಪರವಾನಗಿ ಪಡೆದುಕೊಂಡಿದ್ದ ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿದ್ದಾರೆ. ಗುಂಡೇಟು ತಿಂದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ. ಪ್ರಕರಣದ ವಿಚಾರಣೆ‌ ನಡೆಯುತ್ತಿದೆ.

'ನಿನ್ನೆ ರಾತ್ರಿ ಸುಮಾರು 2:30 ರ ಸಮಯದಲ್ಲಿ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಒಬ್ಬ ವ್ಯಕ್ತಿ, ಮನೆಯ ಕಾಂಪೌಂಡ್​ ದಾಟಿಕೊಂಡು ಒಳ ಹೋಗಿದ್ದಾನೆ. ಕಳ್ಳನ ಕಂಡು ನಾಯಿ ಬೊಗಳಿದ್ದು ಮಾಲೀಕ ಎಚ್ಚೆತ್ತುಕೊಂಡಿದ್ದಾರೆ. ನಂತರ ಅವನ ಕಾಲಿಗೆ ​​ ಬಂದೂಕುನಿಂದ ಶೂಟ್ ಮಾಡಿ, ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆರೋಪಿಯ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಲಾಗಿದೆ' ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ: ನಾಲ್ವರು ಮಕ್ಕಳು, ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ.. ಒಬ್ಬಳು ಬಚಾವ್​!!

Last Updated : Dec 13, 2022, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.