ETV Bharat / state

ಬೆಂಗಳೂರಿನಲ್ಲಿ ಮನೆಗಳಿಗೆ ಮಳೆ ನೀರು; ಹೋಟೆಲ್-ಲಾಡ್ಜ್​ಗಳತ್ತ ಜನರ ಹಜ್ಜೆ, ಬೆಲೆ ಗಗನಕ್ಕೆ!

ಮಳೆಯಿಂದ ತತ್ತರಿಸಿರುವ ಬೆಂಗಳೂರಿನ ಕೆಲವು ಭಾಗದ ನಿವಾಸಿಗಳು ಹೋಟೆಲ್ ಮತ್ತು ಲಾಡ್ಜ್​ಗಳಿಗೆ ತಾತ್ಕಾಲಿಕವಾಗಿ ಸೇರಿಕೊಂಡಿದ್ದಾರೆ. ಹೀಗಾಗಿ, ಕೆಲವೆಡೆ ಹೋಟೆಲ್-ಲಾಡ್ಜ್​ಗಳು ಹೌಸ್​ಫುಲ್​ ಆಗಿವೆಯಂತೆ. ದುಪ್ಪಟ್ಟು ಹಣ ವಸೂಲಿಯೂ ನಡೆಯುತ್ತಿದೆ.

Hotels are Costly in Bengaluru  Hotels are Costly in Bengaluru over rain effect  Heavy rain in Bengaluru  ಬೆಂಗಳೂರಿಗೆ ಮತ್ತೊಂದು ಶಾಕ್​ ಹೋಟೆಲ್ ಲಾಡ್ಜ್​ಗಳು ಹೌಸ್​ಫುಲ್  ಮಳೆಯಿಂದ ತತ್ತರಿಸಿದ ಬೆಂಗಳೂರಿನ ಜನ  ಐಟಿಬಿಟಿ ಜನ ಮಳೆಗೆ ತತ್ತರ  ಹೋಟೆಲ್​ಗಳಿಗೆ ಮೊರೆ ಹೋಗುತ್ತಿರುವ ಜನ  ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನ ತತ್ತರ
ಬೆಂಗಳೂರಿಗೆ ಮತ್ತೊಂದು ಶಾಕ್
author img

By

Published : Sep 8, 2022, 8:33 AM IST

ಬೆಂಗಳೂರು: ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಹೊಳೆಯಂತಾಗಿವೆ. ಅದರಲ್ಲೂ ಐಟಿ-ಬಿಟಿ ಪರಿಸರವಾದ ಮಹದೇವಪುರದಲ್ಲಿ ಅಪಾರ್ಟ್ಮೆಂಟ್​ಗಳು, ವಿಲ್ಲಾಗಳು, ಐಷಾರಾಮಿ ಬಡಾವಣೆಗಳಲ್ಲಿ ಮಳೆ‌ನೀರು ತುಂಬಿ ತುಳುಕುತ್ತಿದೆ. ಇಲ್ಲಿನ ಹಲವು ನಿವಾಸಿಗಳು ಜೀವ ಉಳಿಸಿಕೊಳ್ಳಲು ಮನೆಗಳನ್ನು ತೊರೆದು ಹೋಟೆಲ್​ಗಳ ಮೊರೆ ಹೋಗುತ್ತಿದ್ದಾರೆ. ಇದರ ದುರ್ಲಾಭ ಪಡೆದುಕೊಳ್ಳುತ್ತಿರುವ ಹೋಟೆಲ್​ ಮತ್ತು ಲಾಡ್ಜ್​ಗಳು ಜನರಿಂದ ದುಪ್ಪಟ್ಟು ಹಣ ಪೀಕುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.

Hotels are Costly in Bengaluru  Hotels are Costly in Bengaluru over rain effect  Heavy rain in Bengaluru  ಬೆಂಗಳೂರಿಗೆ ಮತ್ತೊಂದು ಶಾಕ್​ ಹೋಟೆಲ್ ಲಾಡ್ಜ್​ಗಳು ಹೌಸ್​ಫುಲ್  ಮಳೆಯಿಂದ ತತ್ತರಿಸಿದ ಬೆಂಗಳೂರಿನ ಜನ  ಐಟಿಬಿಟಿ ಜನ ಮಳೆಗೆ ತತ್ತರ  ಹೋಟೆಲ್​ಗಳಿಗೆ ಮೊರೆ ಹೋಗುತ್ತಿರುವ ಜನ  ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನ ತತ್ತರ
ಅಪಾರ್ಟ್‌ಮೆಂಟ್‌ ಆವರಣದಲ್ಲಿ ತುಂಬಿಕೊಂಡಿರುವ ಮಳೆ ನೀರು

ಸರ್ಜಾಪುರ, ಯಮಲೂರು ಬೆಳ್ಳಂದೂರು ಭಾಗಗಳಲ್ಲಿ ಹೆಚ್ಚಾಗಿ ಶ್ರೀಮಂತ ‌ಕುಟುಂಬಗಳು ವಾಸವಾಗಿವೆ. ಇಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಈ ಭಾಗದ ಜನರು ಹೋಟೆಲ್​ಗಳ ಮೊರೆ ಹೋಗಿದ್ದಾರೆ. ಆದರೆ ಸಂಕಷ್ಟದ ಸಮಯದಲ್ಲೂ ಹೋಟೆಲ್​ ಮಾಲೀಕರು ಸ್ಪಂದಿಸದೆ ದುಡ್ಡು ಪೀಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅನೇಕ ಹೋಟೆಲ್‌ಗಳು ಸಾಕು ಪ್ರಾಣಿಗಳೊಂದಿಗೆ ಅತಿಥಿಗಳನ್ನು ಒಳಸೇರಿಸಲು ನಿರಾಕರಿಸುತ್ತಿದ್ದಾರಂತೆ. ಇದು ರೂಂಗಳಿಗೆ ಬೇಡಿಕೆ ಮತ್ತು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಮಳೆಗೆ ಬೆಂಗಳೂರು ತತ್ತರ

ಮುಂದಿನ 10-15 ದಿನಗಳವರೆಗೆ ರೂಂ ಬುಕ್ಕಿಂಗ್‌: ಮಹದೇವಪುರ ವ್ಯಾಪ್ತಿಯ ವೈಟ್‌ಫೀಲ್ಡ್, ಔಟರ್ ರಿಂಗ್ ರೋಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಕುಂದಲಹಳ್ಳಿ, ಮಾರತಹಳ್ಳಿಯ ಕೆಲವು ಹೋಟೆಲ್​ನ ಕೊಠಡಿಗಳು ಈಗಾಗಲೇ ಫುಲ್ ಆಗಿದೆ. ದುಪ್ಪಟ್ಟು ಹಣ ನೀಡಲು ಸಿದ್ದರಿದ್ದರೂ ರೂಂಗಳು ದೊರೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಮಳೆ ನೀರು ಕಡಿಮೆ ಆದನಂತರ ಹಾನಿಯಾಗಿರುವ ಐಷಾರಾಮಿ ಸಂಕೀರ್ಣಗಳನ್ನು ಸರಿಪಡಿಸಲು ಇನ್ನೂ 10-15 ದಿನಗಳು ಬೇಕಾಗಲಿದ್ದು, ನಿವಾಸಿಗಳು ಹೋಟೆಲ್​ನಲ್ಲೇ ಉಳಿದುಕೊಳ್ಳುತ್ತಾರೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ, ಸಾಕಷ್ಟು ಮುಂದಾಲೋಚನೆಯಿಂದ ಜನರು ಕೆಲವು ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.

ಹೋಟೆಲ್-ಲಾಡ್ಜ್​ಗಳಿಗೆ ಬೇಡಿಕೆ

ಯಮಲೂರಿನಲ್ಲಿ ಮಳೆ ಅವಾಂತರದಿಂದ ಐಷಾರಾಮಿ ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಕೆಲ ನಿವಾಸಿಗಳು ಹಳೆ ವಿಮಾನ ನಿಲ್ದಾಣ ರಸ್ತೆಯ ಹೋಟೆಲ್‌ನಲ್ಲಿ ತಂಗಿದ್ದಾರೆ. ಹೋಟೆಲ್​ವೊಂದು ನಮಗೆ ಒಂದು ರಾತ್ರಿ ಕಳೆಯಲು 42 ಸಾವಿರ ರೂಪಾಯಿ ಬಿಲ್​ ಮಾಡಿದೆ ಎಂದು ಪರ್ಪಲ್‍ಫ್ರಂಟ್ ಟೆಕ್ನಾಲಜೀಸ್ ಸಿಇಓ ಮತ್ತು ಸಂಸ್ಥಾಪಕಿ ಮೀನಾ ಗಿರೀಶಬಲ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಜಲಾವೃತವಾದ ಲೇಔಟ್​ಗಳು.. ಮನೆ ಖಾಲಿ ಮಾಡಿ ಹೋಟೆಲ್,​ ಲಾಡ್ಜ್​ ಸೇರಿದ ಬೆಂಗಳೂರಿಗರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.