ETV Bharat / state

ಗ್ರಾಹಕರಿಲ್ಲದೆ ನಷ್ಟ: ಬಸ್ ನಿಲ್ದಾಣಗಳಲ್ಲಿನ ಹೋಟೆಲ್, ಅಂಗಡಿಗಳು ಬಂದ್

author img

By

Published : Jul 9, 2020, 9:38 PM IST

ಲಾಕ್​ಡೌನ್ ತೆರವಾದ ಮೇಲೂ ಪ್ರಯಾಣಿಕರಿಲ್ಲದ ಕಾರಣ ಶೇ 5 ರಷ್ಟೂ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಲು ಮಳಿಗೆ ಮಾಲೀಕರು ನಿರ್ಧರಿಸಿದ್ದಾರೆ.

bangalore
ಬಸ್ ನಿಲ್ದಾಣಗಳಲ್ಲಿನ ಹೋಟೆಲ್,ಅಂಗಡಿಗಳು ಬಂದ್

ಬೆಂಗಳೂರು: ಕೋವಿಡ್ ತಂದ ಅವಾಂತರದಿಂದ ನಷ್ಟ ಎದುರಿಸಲಾಗದೆ ಬಸ್ ನಿಲ್ದಾಣಗಳಲ್ಲಿದ್ದ ಅಂಗಡಿ ಮುಂಗಟ್ಟು, ಮಳಿಗೆಗಳು ಹಾಗೂ ಹೋಟೆಲ್​ಗಳನ್ನು ಮಾಲೀಕರು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.

ಬಸ್ ನಿಲ್ದಾಣಗಳಲ್ಲಿನ ಹೋಟೆಲ್,ಅಂಗಡಿಗಳು ಬಂದ್

ಮೆಜೆಸ್ಟಿಕ್, ಶಾಂತಿನಗರದ ಬಸ್ ನಿಲ್ದಾಣಗಳು ಜನ ಸಂಚಾರವಿಲ್ಲದೆ ಭಣಗುಡುತ್ತಿವೆ. ಕೋವಿಡ್ ಬಂದ ನಂತರ ಗ್ರಾಹಕರೇ ಇಲ್ಲ. ಲಾಕ್​ಡೌನ್ ತೆರವಾದ ಮೇಲೂ ಪ್ರಯಾಣಿಕರಿಲ್ಲದ ಕಾರಣ ಶೇ 5 ರಷ್ಟೂ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಮಳಿಗೆ ಬಂದ್ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿದ್ದ ಅಂಗಡಿ, ಮಳಿಗೆ, ಹೋಟೆಲ್​ಗಳು ಬಾಗಿಲು ಮುಚ್ಚಿವೆ. ಈ ಹಿಂದೆ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿದ್ದರು. ಆದರೆ ನಂತರ ಎಷ್ಟೇ ಮನವಿ ಮಾಡಿದರೂ ಸರ್ಕಾರ, ಸಾರಿಗೆ ಇಲಾಖೆ ಸ್ಪಂದಿಸಿಲ್ಲ. ಹೀಗಾಗಿ ಅಂಗಡಿ ಮುಚ್ಚುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಕದಂಬ ಹೋಟೆಲ್​ನ ಮಾಲೀಕ ಎಮ್.ವಿ ರಾಘವೇಂದ್ರ ಹೇಳುತ್ತಾರೆ.

ಭದ್ರತಾ ಠೇವಣಿ ವಾಪಸ್ಸು ಕೊಟ್ಟರೆ ಈಗಲೂ ಖಾಲಿ ಮಾಡಲು ಸಿದ್ಧ ಅಥವಾ ಡಿಸೆಂಬರ್​ವರೆಗೆ ಬಾಡಿಗೆ ಮನ್ನಾ ಮಾಡಿ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸಾಲ ಮಾಡಿದ್ದೇವೆ. ಸಿಬ್ಬಂದಿಗಳಿಗೆ ವೇತನ ಕೊಡಲೂ ಸಾಧ್ಯವಿಲ್ಲ. ಹೊಟೇಲ್​ಗಳಿಗೆ ಲಕ್ಷಾಂತರ ವೆಚ್ಚ ಮಾಡಿ ಡಿಸೈನ್ ಮಾಡಿದ್ದೇವೆ. ಆ ಖರ್ಚೂ ಕೂಡಾ ವಾಪಸ್ಸು ಸಿಗುತ್ತಿಲ್ಲ. ಸರ್ಕಾರ ನೆರವಿಗೆ ಬರುವವರೆಗೂ ತಾತ್ಕಾಲಿಕವಾಗಿ ಮುಚ್ಚುತ್ತೇವೆ ಎಂದು ಹೊಟೇಲ್ ಮಾಲೀಕ ದಯಾನಂದ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.