ETV Bharat / state

ಹೋಟೆಲ್​ಗಳು ಭರ್ತಿ: 2 ದಿನಕ್ಕೆ ಪ್ರಯಾಣಿಕರನ್ನ ಮನೆಗೆ ಕಳುಹಿಸುತ್ತಿರುವ ಅಧಿಕಾರಿಗಳು! - ಬೆಂಗಳೂರಿನಲ್ಲಿ ಕೇವಲ ಎರಡು ದಿನ ಕ್ವಾರಂಟೈನ್​,

ಕ್ವಾರಂಟೈನ್ ಮಾಡಲು ಹೋಟೆಲ್​ಗಳು ಭರ್ತಿ ಹಿನ್ನೆಲೆ ಅಧಿಕಾರಿಗಳು ಪ್ರಯಾಣಿಕರನ್ನು ಎರಡೇ ದಿನಕ್ಕೆ ಮನೆಗೆ ಕಳುಹಿ ಸುತ್ತಿರುವ ಪ್ರಸಂಗ ಕಂಡು ಬಂದಿದೆ.

Only two days quarantine, Only two days quarantine in Bangalore, Bangalore quarantine news, ಕೇವಲ ಎರಡು ದಿನ ಕ್ವಾರಂಟೈನ್​, ಬೆಂಗಳೂರಿನಲ್ಲಿ ಕೇವಲ ಎರಡು ದಿನ ಕ್ವಾರಂಟೈನ್​, ಬೆಂಗಳೂರು ಕ್ವಾರಂಟೈನ್​ ಸುದ್ದಿ,
ಎರಡೇ ದಿನಕ್ಕೆ ಪ್ರಯಾಣಿಕರನ್ನು ಮನೆಗೆ ಕಳಿಸುತ್ತಿರುವ ಅಧಿಕಾರಿಗಳು
author img

By

Published : Jun 3, 2020, 4:38 PM IST

ಬೆಂಗಳೂರು: ಲಾಕ್​​​​​​ಡೌನ್ ಸಡಿಲಿಕೆ ಬಳಿಕ ವಿವಿಧ ರಾಜ್ಯಗಳಿಂದ, ಹೊರ ದೇಶಗಳಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ನಗರದ. ಸ್ಟಾರ್ ಹೋಟೆಲ್​ ಮತ್ತು ಬಜೆಟ್ ಹೋಟೆಲ್​ಗಳ ರೂಂಗಳು ಕೂಡಾ ಖಾಲಿಯಾಗುತ್ತಿವೆ. ಈ ಹಿನ್ನೆಲೆ ಹೈ ರಿಸ್ಕ್ ರಾಜ್ಯಗಳನ್ನು ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಒಂದೆರಡು ದಿನ ಮಾತ್ರ ಹೋಟೆಲ್ ಕ್ವಾರಂಟೈನ್​ನಲ್ಲಿಟ್ಟು ಮನೆಗೆ ಕಳುಹಿಸಲಾಗುತ್ತಿದೆ.

Only two days quarantine, Only two days quarantine in Bangalore, Bangalore quarantine news, ಕೇವಲ ಎರಡು ದಿನ ಕ್ವಾರಂಟೈನ್​, ಬೆಂಗಳೂರಿನಲ್ಲಿ ಕೇವಲ ಎರಡು ದಿನ ಕ್ವಾರಂಟೈನ್​, ಬೆಂಗಳೂರು ಕ್ವಾರಂಟೈನ್​ ಸುದ್ದಿ,
ಎರಡೇ ದಿನಕ್ಕೆ ಪ್ರಯಾಣಿಕರನ್ನು ಮನೆಗೆ ಕಳಿಸುತ್ತಿರುವ ಅಧಿಕಾರಿಗಳು

ಸಿಬ್ಬಂದಿ ಕೊರತೆ: ಪ್ರಯೋಗಾಲಯಗಳಿಂದ ವರದಿ ಬರಲು ವಿಳಂಬ ಅದಲ್ಲದೇ ಹೋಟೆಲ್​ ಕ್ವಾರಂಟೈನ್​ನಲ್ಲಿರುವವರನ್ನು ಮೇಲುಸ್ತುವಾರಿ ಮಾಡಲು ಪಾಲಿಕೆಗೆ ಸಿಬ್ಬಂದಿ ಕೊರತೆಯೂ ಉಂಟಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಹಲವರಿಗೆ ಜಿಲ್ಲಾಡಳಿತ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉಚಿತ ಕ್ವಾರಂಟೈನ್ ಸಂಸ್ಥೆಗಳು ಹಾಗೂ ಹೋಟೆಲ್​ಗಳಿಗೆ ನಿಯೋಜಿಸಲು ಸಿಬ್ಬಂದಿ ಕೊರತೆ ಎದುರಾಗಿದೆ.

ಇನ್ನು ಹೋಟೆಲ್​ ಕ್ವಾರಂಟೈನ್​ನಲ್ಲಿರುವ ಮೇಲೆ ಗಮನ ಹರಿಸಲು ಕೇವಲ ಪೊಲೀಸೊಬ್ಬರನ್ನು ನಿಯೋಜಿಸಲಾಗಿದೆ. ಒಬ್ಬೊಬ್ಬರು ಆರೋಗ್ಯ ಅಧಿಕಾರಿ ಮತ್ತು ಸಹಾಯಕರಿಗೆ ಎರಡು ಮೂರು ಹೋಟೆಲ್​ ನ ಜವಾಬ್ದಾರಿ ನೀಡಲಾಗಿದೆ. ಸ್ಕ್ರೀನಿಂಗ್ ಮಾಡಿ ಬಿಟ್ಟ ಮೇಲೆ ನಂತರ ಕ್ವಾರಂಟೈನ್ ಅವಧಿ ಮುಗಿಯುವ ವೇಳೆಗೆ ಗಂಟಲು ದ್ರವ ಪರೀಕ್ಷೆ ನಡೆಸಲು ರಾಜ್ಯ ಆರೋಗ್ಯ ಇಲಾಖೆಯ ತಂಡ ಬರುತ್ತದೆ. ಆದ್ರೆ ಈ ವರದಿ ಬರುತ್ತಿರುವುದು ತಡವಾಗುತ್ತಿರೋದರಿಂದ ಸಮಸ್ಯೆ ಎದುರಾಗುತ್ತಿದೆ. ಉಳಿದಂತೆ ರೋಗ ಲಕ್ಷಣ ಇರದವರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಿಬ್ಬಂದಿಗೆ ರಜೆ ಇಲ್ಲ:

ಬಿಬಿಎಂಪಿಯ ಆರೋಗ್ಯ ವಿಭಾಗ, ಕಂದಾಯ ವಿಭಾಗ ಸೇರಿದಂತೆ ಫೀಲ್ಡ್​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಅಧಿಕಾರಿಗಳಿಗೆ ಮೂರು ತಿಂಗಳಿಂದ ರಜೆ ಸಿಕ್ಕಿಲ್ಲ. ನಿತ್ಯ ಕೋವಿಡ್ ರೋಗಿಗಳ ದಾಖಲು, ಕಾಂಟ್ಯಾಕ್ಟ್ ಟ್ರೇಸಿಂಗ್, ಕಂಟೇನ್​ಮೆಂಟ್ ಕೆಲಸಗಳು ನಿತ್ಯ ಇರುವುದರಿಂದ ಸಿಬ್ಬಂದಿಗಳಿಗೆ ರಜೆ ಸಿಗುತ್ತಿಲ್ಲ. ರಾತ್ರಿ ಹಗಲು ಕೋವಿಡ್ ನಿಯಂತ್ರಣಕ್ಕಾಗಿ, ಪ್ರಯಾಣಿಕರ ಕ್ವಾರಂಟೈನ್​ಗಾಗಿ ದುಡಿಯುತ್ತಿದ್ದಾರೆ.

ಉಚಿತ ಕ್ವಾರಂಟೈನ್ ಸೆಂಟರ್​ಗಳು: ನಗರದ ಸರ್ಕಾರಿ ಹಾಸ್ಟೆಲ್​ಗಳು, ಕಂಠೀರವ ಕ್ರೀಡಾಂಗಣದ ಹಾಸ್ಟೆಲ್ ಸೇರಿದಂತೆ ಕಲ್ಯಾಣ ಮಂಟಪಗಳಲ್ಲಿ ಬಡವರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಊಟದ ವ್ಯವಸ್ಥೆ ಸರ್ಕಾರವೇ ಮಾಡುತ್ತದೆ. ಪ್ರಯಾಣದಿಂದ ಬಂದ ಕೂಡಲೇ ಸ್ಕ್ರೀನಿಂಗ್ ಮಾಡಲಾಗುತ್ತದೆ. ಈ ವೇಳೆ ಸೋಂಕಿನ ಲಕ್ಷಣ ಇದ್ರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಇಲ್ಲದಿದ್ದರೆ ಏಳು ದಿನ ಕ್ವಾರಂಟೈನ್ ಮಾಡಿ ಮನೆಗೆ ಕಳುಹಿಸಲಾಗುತ್ತಿದೆ.

ಮುಂಬೈನಿಂದ ಬಂದ ಪ್ರಯಾಣಿಕರ ಕ್ವಾರಂಟೈನ್: ನಿನ್ನೆ ಮುಂಬೈನಿಂದ ಉದ್ಯಾನ್ ಎಕ್ಸ್​ಪ್ರೆಸ್ ಬಂದಿದ್ದು, ಒಟ್ಟು 556 ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣ, ಹೈ ರಿಸ್ಕ್ ಜನರ 114 ಮಂದಿಯ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 3 ಜನ ರಾಯಲ್ ಆರ್ಕೀಡ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ. 54 ಜನ ಇನ್ ಫೆಂಟ್ರಿ ರಸ್ತೆಯ ಫಿನಿಕ್ಸ್ ಹೋಟೆಲ್ ಹಾಗೂ ಉಚಿತ ವಸತಿ ವ್ಯವಸ್ಥೆಯಲ್ಲಿ 79 ಜನ ಜ್ಞಾನ ಭಾರತಿ ಹಾಸ್ಟೆಲ್ ಹಾಗೂ ಆನೇಕಲ್​ನ ತೆಲುಗರಹಳ್ಳಿಯಲ್ಲಿ 105 ಜನ ಉಚಿತ ಕ್ವಾರಂಟೈನ್​ಗೆ ಹೋಗಿದ್ದಾರೆ. 137 ಜನರನ್ನು ಹೋಂ ಕ್ವಾರಂಟೈನ್​ಗೆ ಕಳುಹಿಸಲಾಗಿದೆ. ಇಂದು 600 ಪ್ರಯಾಣಿಕರು ಬಂದಿದ್ದು, 109 ಜನರನ್ನು ಹೋಂ ಕ್ವಾರಂಟೈನ್​ಗೆ, 220 ಜನರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

ರೋಗಿಗಳ ಸಂಪರ್ಕಿತರಿಗೆ ಹೋಟೆಲ್ ಕ್ವಾರಂಟೈನ್: ಅಲ್ಲದೇ ನಗರದಲ್ಲಿ ಕೊರೊನಾ ಪಾಸಿಟವ್ ಸಂಖ್ಯೆ ಮುನ್ನೂರರ ಗಡಿ ದಾಟುತ್ತಿದೆ. ಪ್ರತಿ ರೋಗಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ರೂಂ ವ್ಯವಸ್ಥೆ ಬೇಕು. ಲಾಕ್ ಡೌನ್ ಸಡಿಲಿಕೆ ಬಳಿಕ ರೈಲು, ವಿಮಾನದ ಮೂಲಕ ಸಾಕಷ್ಟು ಪ್ರಯಾಣಿಕರು ಬರುತ್ತಿದ್ದಾರೆ. ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ, ನಗರದಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಹೋಟೆಲ್ ರೂಂಗಳು ಇವೆ. ಆದರೆ ನಗರಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೋಂ ಕ್ವಾರಂಟೈನ್ ಮಾಡುವ ಯೋಚನೆ ಇದೆ. ಈ ಬಗ್ಗೆ ಸರ್ಕಾರವೂ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಎರಡೇ ದಿನಕ್ಕೆ ಪ್ರಯಾಣಿಕರನ್ನು ಮನೆಗೆ ಕಳುಹಿಸುತ್ತಿರುವ ಅಧಿಕಾರಿಗಳು

ಹೋಟೆಲ್​ಗಳು ಫುಲ್ ಆಗ್ತಿವೆ. ಸೋಂಕಿನ ಲಕ್ಷಣ ಇಲ್ಲದವರನ್ನು ಹೋಂ ಕ್ವಾರಂಟೈನ್ ಮಾಡಲು ಹಾಗೂ ಲಕ್ಷಣ ಇರುವವರನ್ನು ಕೂಡಲೇ ಆಸ್ಪತ್ರೆಗೆ ಅಥವಾ ಕೋವಿಡ್ ಕೇರ್ ಸೆಂಟರ್​ಗೆ ಕಳಿಸಲಾಗುವುದು ಎಂದು ತಿಳಿಸಿದರು.

ದೆಹಲಿ, ಮಹಾರಾಷ್ಟ್ರ , ರಾಜಸ್ಥಾನ, ಗುಜರಾತ್, ತಮಿಳುಮಾಡು, ಮಧ್ಯ ಪ್ರದೇಶದ ಪ್ರಯಾಣಿಕರಿಗೆ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಇದೆ. ಹೈ ರಿಸ್ಕ್ ರಾಜ್ಯದಿಂದ ಬರುವವರಿಗೆ ಕಡ್ಡಾಯವಾಗಿ ಏಳು ದಿನ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್, ಉಳಿದವರಿಗೆ ಹೋಂ ಕ್ವಾರಂಟೈನ್ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.