ETV Bharat / state

ಹೋಮ್​​​ ಕ್ವಾರಂಟೈನ್​​ ಉಲ್ಲಂಘನೆ: ಬೆಂಗಳೂರಲ್ಲಿ ಮೂವರು ವಶಕ್ಕೆ

ಹೋಮ್ ಕ್ವಾರಂಟೈನ್‌ ಸಲಹೆಯನ್ನು ಉಲ್ಲಂಘಿಸಿದ ಮೂವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Home Quarantine
ಹೋಮ್ ಕ್ವಾರಂಟೈನ್
author img

By

Published : Mar 24, 2020, 5:25 PM IST

ಬೆಂಗಳೂರು: ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮತ್ತೊಂದೆಡೆ ಹೋಮ್ ಕ್ವಾರಂಟೈನ್​​ನಲ್ಲಿ ಇರಬೇಕಾದವರು ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

‌ಹೀಗಾಗಿ ಈವರೆಗೆ ಹೋಮ್ ಕ್ವಾರಂಟೈನ್‌ ಸಲಹೆಯನ್ನು ಉಲ್ಲಂಘಿಸಿದ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಹೋಮ್ ಕ್ವಾರಂಟೈನ್‌ ಸಲಹೆಯನ್ನು ಉಲ್ಲಂಘಿಸಿದ ಮಹಿಳೆಯೊಬ್ಬಳು ಹೊರಗೆ ಓಡಾಡುತ್ತಿದ್ದಳು ಎನ್ನಲಾಗಿದೆ.

ಅಲಸೂರು ರಸ್ತೆಯಲ್ಲಿ ಆಸ್ಟ್ರೇಲಿಯಾದಿಂದ ಮರಳಿದ್ದ ಇಬ್ಬರನ್ನು ವಶಕ್ಕೆ ಪಡೆದು ನಿಯೋಜಿತ ಕ್ವಾರಂಟೈನ್​ ಸೌಲಭ್ಯ ಇರುವ ಕೇಂದ್ರಕ್ಕೆ ದಾಖಲಿಸಲಾಗಿದೆ. ನಿಯೋಜಿತ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಪಾಸಿಟಿವ್ ಪ್ರಕರಣಗಳು ಮತ್ತು ಶಂಕಿತರು ಕ್ವಾರಂಟೈನ್​​ ಕೇಂದ್ರಗಳಲ್ಲಿ ಅಥವಾ ಮನೆಗಳಲ್ಲಿ ಕ್ವಾರಂಟೈನ್​​​ ವ್ಯವಸ್ಥೆಯಲ್ಲಿ ಕನಿಷ್ಠ 14 ದಿನಗಳ ಕಾಲ ಇರಬೇಕಾಗುತ್ತದೆ. ನೆಗೆಟಿವ್ ಎಂದು ವರದಿ ಬರುವ ತನಕ ಅಥವಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಸಿಗುವ ತನಕ ಸಂಬಂಧಪಟ್ಟ ವ್ಯಕ್ತಿಗಳನ್ನು ಬಿಡುಗಡೆ ಮಾಡುವುದಿಲ್ಲ.

ಪ್ರತ್ಯೇಕ ವ್ಯವಸ್ಥೆಯಲ್ಲಿ ಇಷ್ಟೊಂದು ಸುದೀರ್ಘ ಕಾಲ ಇರಲು ಮಾನಸಿಕ ಧೈರ್ಯದ ಅಗತ್ಯವಿರುತ್ತದೆ. ಈ ಅಗತ್ಯವನ್ನು ಮನಗಂಡು ಇಲಾಖೆಯು ಅಂತಹ ರೋಗಿಗಳಿಗೆ ಮತ್ತು ಸೋಂಕಿತರಿಗೆ ಮಾನಸಿಕ ಆರೋಗ್ಯದ ಅಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಿದೆ. ಈವರೆಗೆ 6,898 ಜನರನ್ನು ಕೌನ್ಸೆಲಿಂಗ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.