ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಭಗ್ನಗೊಳಿಸಿ ಪುಂಡಾಟಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಗಡಿ ಜಿಲ್ಲೆಯಲ್ಲಿ ಕನ್ನಡ ಹಾಗೂ ಮರಾಠಿ ಮಾತನಾಡುವ ಜನತೆ, ಅತ್ಯಂತ ಅನ್ಯೋನ್ಯತೆ, ಪ್ರೀತಿ ಹಾಗೂ ಸಾಮರಸ್ಯದಿಂದ ಇದ್ದಾರೆ. ರಾಯಣ್ಣ ಹಾಗೂ ಶಿವಾಜಿಯವರಂಥಹ ಮಹನೀಯರ ಬಗ್ಗೆ ಎಳ್ಳಷ್ಟೂ ಗೌರವ ಇಲ್ಲದ ದುಷ್ಕರ್ಮಿಗಳ ಉದ್ದೇಶ ಸಮಾಜದಲ್ಲಿನ ನೆಮ್ಮದಿಗೆ ಭಂಗ ತರುವುದಾಗಿದೆ. ಹೀಗಾಗಿ, ಅವರನ್ನು ಬಗ್ಗು ಬಡಿಯಲಾಗುವುದು ಎಂದು ತಿಳಿಸಿದ್ದಾರೆ.
ಬೆಳಗಾವಿ ಹಾಗೂ ಬೆಂಗಳೂರಿನ ಘಟನೆಗಳ ಬಗ್ಗೆ ಸಂಬಂಧಿಸಿದ ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಿದ್ದೇನೆ ಎಂದರು.
ಓದಿ: ಕನ್ನಡಪರ ಹೋರಾಟಗಾರರ ಮೇಲೆ ಪ್ರತಾಪ ತೋರಿಸಬೇಡಿ : ಸರ್ಕಾರದ ಕಿವಿ ಹಿಂಡಿದ ಹೆಚ್ಡಿಕೆ