ETV Bharat / state

ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಬಾರದು: ಹೆಚ್​ಡಿಕೆಗೆ ಟಾಂಗ್​ ಕೊಟ್ಟ ಬೊಮ್ಮಾಯಿ - ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಕುರಿತಂತೆ ದಕ್ಷ ಪೊಲೀಸ್ ಅಧಿಕಾರಿಗಳು ಅತ್ಯಂತ​ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ನೈತಿಕ ಸ್ಥೈರ್ಯ ಕುಗ್ಗಿಸಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಹೆಚ್​ಡಿಕೆಗೆ ಟಾಂಗ್​ ತಿರುಗೇಟಿ ನೀಡಿದ್ದಾರೆ.

home minister press meet in bangalore
ಗೃಹ ಸಚಿವ ಬಸವರಾಜ ಬೊಮ್ಮಾಯಿ
author img

By

Published : Jan 22, 2020, 3:22 PM IST

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಕುರಿತಂತೆ ದಕ್ಷ ಪೊಲೀಸ್ ಅಧಿಕಾರಿಗಳು ಅತ್ಯಂತ​ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ನೈತಿಕ ಸ್ಥೈರ್ಯ ಕುಗ್ಗಿಸಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಹೆಚ್​ಡಿಕೆಗೆ ಟಾಂಗ್​ ತಿರುಗೇಟಿ ನೀಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಆರೋಪಿ ಆದಿತ್ಯ ರಾವ್ ನಿನ್ನೆ (ಜ.21) ರಾತ್ರಿ ಬೆಂಗಳೂರಿಗೆ ಬಂದು ಬೆಳಗ್ಗೆ ಶರಣಾಗಿದ್ದಾನೆ. ಸ್ಪೋಟಕಕ್ಕೆ ಬಳಕೆಯಾದ ವಸ್ತುಗಳ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತನಿಖೆಗೆ ಆದೇಶ ಮಾಡಲಾಗಿದೆ. ತನಿಖೆ ಮುಂದುವರಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ ಎಂದರು.

ಉಗ್ರ ಸಂಘಟನೆಗಳ ಜೊತೆ ಸಂಪರ್ಕ ವಿಚಾರ‌ ಕುರಿತು ತನಿಖೆ ಬಳಿಕ ಸ್ಪಷ್ಟವಾಗುತ್ತದೆ. ಕೇಂದ್ರ ತಂಡ ಈಗಾಗಲೇ ತನಿಖೆ ಕೈಗೊಂಡಿದೆ ಎಂದರು.

Intro:

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ನಿನ್ನೆ ರಾತ್ರಿ ಬೆಂಗಳೂರಿಗೆ ಬಂದು ಇಂದು ಬೆಳಗ್ಗೆ ಸೆರೆಂಡರ್ ಆಗಿದ್ದಾನೆ.ಸ್ಪೋಟಕಕ್ಕೆ ಬಳಕೆಯಾದ ವಸ್ತುಗಳ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತನಿಖೆಗೆ ಆದೇಶ ಮಾಡಲಾಗಿದ್ದು,ತನಿಖೆ ಮುಂದುವರಿಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿಗೆ ತೆರಳುವ ಮುನ್ನ ನಿವಾಸದಲ್ಲಿ ಮಾತನಾಡಿದ ಅವರು,ಇಡೀ ಪ್ರಕರಣದಲ್ಲಿ ಪೊಲೀಸರು ತೀವ್ರಗತಿಯಲ್ಲಿ ಕೆಲಸ ಮಾಡಿದ್ದಾರೆ.ಇದು ನಮ್ಮ ಪೊಲೀಸರ ದಕ್ಷತೆ ಮತ್ತು ಪ್ರಾಮಾಣಿಕತೆ.ಯಾರು ಕೂಡಾ ಪೊಲೀಸರ ಬಗ್ಗೆ ಅವಶ್ಯಕವಾಗಿ ಟೀಕೆ ಮಾಡೋದು ಸರಿಯಲ್ಲ.ಪೊಲೀಸರ ನೈತಿಕತೆ ಕುಗ್ಗುವ ಕೆಲಸ ಯಾರು ಮಾಡಬಾರದು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಪೊಲೀಸರ ಈ ತನಿಖೆಯಿಂದಾನೆ ಆತ ಬಂದು ಶರಣಾಗಿರೋದು. ನಾವು ಯಾವುದೇ ಸಂಘಟನೆ ಅವರು ಅಂತ ಹೇಳಿರಲಿಲ್ಲ.ಯಾರೇ ಅಪರಾಧಿ ಆದ್ರು ಕ್ರಮ ತಗೋತೀವಿ ಅಂತ ಹೇಳಿದ್ದೆವು. ಅದರಂತೆ ನಮ್ಮ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.ಆತ ಬೆಂಗಳೂರಿಗೆ ಬೇರೆ ಬೇರೆ ಮಾರ್ಗದಲ್ಲಿ ಬಂದಿದ್ದಾನೆ.ನಮ್ಮ ಮಾಹಿತಿ‌ ಪ್ರಕಾರ ಅವನು ಬಸ್ ಮೂಲಕ ಬಂದಿಲ್ಲ ಬೇರೆ ಬೇರೆ ಮಾರ್ಗದಲ್ಲಿ ಬೆಂಗಳೂರಿಗೆ ಬಂದಿದ್ದಾನೆ‌ ಎಂದರು.

ಉಗ್ರ ಸಂಘಟನೆ ಜೊತೆ ಸಂಪರ್ಕ ವಿಚಾರ‌ ತನಿಖೆ ಬಳಿಕ ಅದೆಲ್ಲ ಬಹಿರಂಗ ಆಗುತ್ತದೆ.ಕೇಂದ್ರ ತಂಡ ಈಗಾಗಲೇ ಬಂದು ತನಿಖೆ ಮಾಡುತ್ತಿದೆ.ಬಾಂಬ್ ಸಿಕ್ಕ ಬಳಿಕ ಮಾಹಿತಿ ನೀಡಲಾಗಿತ್ತು.ಹೀಗಾಗಿ ಅವರು ತನಿಖೆ ಮಾಡುತ್ತಿದ್ದಾರೆ.ಆರೋಪಿ ಪದವೀಧರ ಆಗಿದ್ದ. ನಿರಾಶ್ರಿತನಾಗಿದ್ದ.ಮಂಗಳೂರಿನಲ್ಲಿ ಏರ್ ಪೋರ್ಟ್ ಸೆಕ್ಯುರಿಟಿ ಕೆಲಸಕ್ಕೆ ಸೇರೋ ಪ್ರಯತ್ನ ಮಾಡಿದ್ದ.ಆತನ ಸಂಪೂರ್ಣ ವಿವರ ತನಿಖೆ ಬಳಿಕ ಬಹಿರಂಗ ಆಗಲಿದೆ ಎಂದರು.

ಆದಿತಿ ರಾವ್ ಎಂಬಾತ ಡಿಜಿ ಆಫೀಸ್ ನಲ್ಲಿ ಸೆರೆಂಡರ್ ಆಗಿದ್ದಾನೆ.ನಮ್ಮ ‌ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ.ಸಿಸಿಟಿವಿ ಆಧಾರ ಮತ್ತು ಸ್ಥಳೀಯರ ಮಾಹಿತಿ, ಆಟೋ ಜಾಲ ಹಿಡಿದು ತನಿಖೆ ಮಾಡ್ತಿದ್ದರು.ಇದಕ್ಕಾಗಿ 3 ತಂಡ ರಚನೆ ಮಾಡಿದ್ದರು.ಬೆಂಗಳೂರು ಏರ್ ಪೋಟ್ ನಲ್ಲಿ ಹುಸಿ ಬಾಂಬ್ ಕರೆ ಕೊಟ್ಟು ಈತ ಶಿಕ್ಷೆಗೆ ಗುರಿಯಾಗಿದ್ದ.ಇದರ ಜಾಲ ಹಿಡಿದು ನಮ್ಮ‌ ಪೊಲೀಸರು ತನಿಖೆ ಮಾಡಿದ್ದರು.ಉಡುಪಿಯ ಆತನ ಮನೆ ಮತ್ತು ಸುತ್ತ ಮುತ್ತಲ ಮನೆಗಳಲ್ಲಿ ಮಾಹಿತಿ ಪಡೆಯಲಾಗಿತ್ತು.ಆಗಲೇ ಆತನೆ ಆರೋಪಿ ಅಂತ ನಮಗೆ ತಿಳಿದು ಬಂದಿತ್ತು.ಆರೋಪಿ ಉಡುಪಿ ಮತ್ತು ಬೇರೆ ಕಡೆ ಓಡಾಡಿ ಕೊನೆಗೆ ಬೆಂಗಳೂರಿನಲ್ಲಿ ಬಂದು ಸರೆಂಡರ್ ಆಗಿದ್ದಾನೆ ಎಂದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.