ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವರ್ಗಾವಣೆ ಸಂಬಂಧ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದರು. "250 ಮಂದಿ ವರ್ಗಾವಣೆ ಮಾಡಿದ್ದೆವು. ಬಹುತೇಕ ಎಲ್ಲರೂ ರಿಪೋರ್ಟ್ ಮಾಡಿಕೊಂಡಿದ್ದಾರೆ. ತಾಂತ್ರಿಕ ಕಾರಣದಿಂದ ಕೆಲವು ಕಡೆ ಆಗಿಲ್ಲ. ಅದನ್ನು ಸರಿಪಡಿಸಿಕೊಂಡು ಮಾಡ್ತೇವೆ. ಎಲ್ಲವನ್ನೂ ಟೀಕೆ ಮಾಡೋದಲ್ಲ. ಸೋಮವಾರದೊಳಗೆ ಎಲ್ಲ ಸರಿಪಡಿಸಿ ವರ್ಗಾವಣೆ ಮಾಡುತ್ತೇವೆ" ಎಂದು ತಿಳಿಸಿದರು.
ಪೊಲೀಸ್ ಸಭೆಯಲ್ಲಿ ಯತೀಂದ್ರ ಭಾಗಿ ವಿಚಾರವಾಗಿ ಮಾತನಾಡುತ್ತಾ,"ಪಾಸಿಟಿವ್ ಸಲಹೆ ಕೊಡೋದಿದ್ದರೆ ಕೊಡಲಿ. ಎಲ್ಲದರಲ್ಲೂ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡೋದು ಸರಿಯಲ್ಲ. ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ" ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಕುಮಾರಸ್ವಾಮಿ ಹತಾಶೆಗೊಳಗಾಗಿ ಮಾತನಾಡುತ್ತಿದ್ದಾರೆ: ಸಚಿವ ಶಿವರಾಜ್ ತಂಗಡಗಿ
ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಅವರು ಹೇಳಿರೋದ್ರಲ್ಲಿ ಸತ್ಯಾಂಶ ಇಲ್ಲ. SCP, TSP ಗೆ ಬಜೆಟ್‌ನಲ್ಲಿ ಹಣ ಇಟ್ಟಿರುವವರು ನಾವು. ಅದರ ಅಡಿಯಲ್ಲಿ ಹಣ ಖರ್ಚು ಮಾಡಬೇಕು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹಣ ಖರ್ಚು ಮಾಡಿದ್ರಾ?. ಯಾರಿಗೆ ಹೋಗ್ತಿದೆ ಈ ಹಣ?, ಬಡವರಿಗೆ ಹೋಗ್ತಿದೆ. ಅಕ್ಕಿ, ವಿದ್ಯುತ್, ಮಹಿಳೆಯರಿಗೆ ಕೊಟ್ರೆ ಸಮಸ್ಯೆ ಏನು?. SC, ST ಜನರೇ ಇದರಲ್ಲಿ ಹೆಚ್ಚಿದ್ದಾರೆ. ಬಡವರು ಹೆಚ್ಚಿದ್ದು, ಎಂಪವರ್ ಮಾಡಲು ಕೊಡ್ತಿದ್ದೇವೆ. ಅದರಲ್ಲಿ ತಪ್ಪೇನು ಇದೆ? ಎಂದು ಪ್ರಶ್ನಿಸಿದರು.
ಅವರು 30 ಸಾವಿರ ಕೋಟಿ ರೂ. ಕೊಡುವ ಕಡೆ 25 ಸಾವಿರ ಕೋಟಿ ಮೀಸಲಿಟ್ಟಿದ್ರು. ಡೀಮ್ಡ್ ಎಕ್ಸ್‌ಪೆಂಡೀಚರ್ ಅಂತ ಇದೇ ಹಣ ಖರ್ಚು ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ ಮೇಲೆ ಬಡವರಿಗೆ ಕೊಡ್ತಿದ್ದೇವೆ. ಆದರೆ, ಅವರು ಇದನ್ನ ಸಹಿಸುತ್ತಿಲ್ಲ. ಅವರ ಅಜೆಂಡಾನೇ ಬೇರೆ ಇದೆ. ನಾವು ಬಡವರ ಪರ ಕೆಲಸ ಮಾಡ್ತಿದ್ದೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಜೆಡಿಎಸ್ ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಅವರಿಂದ ಇಲ್ಲಸಲ್ಲದ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ
ಇನ್ನೊಂದೆಡೆ, ಇಂಗ್ಲೆಂಡ್ನವರು ದೇಶ ಬಿಟ್ಟು ಹೋದ್ರು, ಅದರೆ ಅದೇ ಪದ್ದತಿಯನ್ನು ಕಾಂಗ್ರೆಸ್ ಪಕ್ಷ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬ ಹೆಚ್ಡಿಕೆ ಟೀಕೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಹೆಚ್ ಡಿ ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳೋಕೆ ಈ ರೀತಿ ಮಾತಾಡ್ತಿದ್ದಾರೆ. ಅವರೇನು ವಿರೋಧ ಪಕ್ಷದ ನಾಯಕ ಆಗಬೇಕು ಅಂತಿದ್ದಾರಾ? ಎಂದು ತಿರುಗೇಟು ನೀಡಿದರು. ಬಳಿಕ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಆ ಸರ್ಕಾರದಲ್ಲಿ ಸಚಿವನಾಗಿದ್ದೆ. ಆಗ ಅವರು ಪ್ರೋಗ್ರೆಸ್ಸಿವ್ ಬಗ್ಗೆ ಮಾತನಾಡುತ್ತಿದ್ದವರು. ಈಗ ಯಾಕೆ ಹೀಗಾಗಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ, ಜೆಡಿಎಸ್ಗೆ ಇಲ್ಲ ಎಂದರು.