ETV Bharat / state

ಕೆಲವು ಶಕ್ತಿಗಳು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿವೆ: ಗೃಹ ಸಚಿವರ ಕಳವಳ

ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿತಪ್ಪಿಸುವ ಕಾರ್ಯಾಚರಣೆ ಮಾಡ್ತಿವೆ ಗೃಹ ಸಚಿವ ಬೊಮ್ಮಯಿ ಕಳವಳ ವ್ಯಕ್ತಪಡಿಸಿದರು.

love jihad law, Basavaraj Bommai talk about love jihad law, love jihad law in Karnataka, love jihad law news, ಲವ್​ ಜಿಹಾದ್​ ಕಾನೂನು, ಲವ್​ ಜಿಹಾದ್​ ಕಾನೂನು ಬಗ್ಗೆ ಬಸವರಾಜ್​ ಬೊಮ್ಮಾಯಿ ಮಾತು, ಲವ್​ ಜಿಹಾದ್​ ಕಾನೂನು ಸುದ್ದಿ, ಕರ್ನಾಟಕದಲ್ಲಿ ಲವ್​ ಜಿಹಾದ್​ ಕಾನೂನು,
ಲವ್​ ಜಿಹಾದ್​ ಕಾನೂನು ಬಗ್ಗೆ ಸಚಿವರ ಹೇಳಿಕೆ
author img

By

Published : Nov 4, 2020, 2:42 PM IST

ಬೆಂಗಳೂರು: ರಾಜ್ಯದಲ್ಲಿ ಲವ್​ ಜಿಹಾದ್​ ತಡೆಗೆ ಕಾನೂನು ಜಾರಿ ವಿಚಾರ ಚರ್ಚೆ ಆಗ್ತಿದೆ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಹೇಳಿದರು.

ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಕಾನೂನು ಜಾರಿ ವಿಚಾರ ಸಂಬಂಧ ಚರ್ಚೇ ಆಗ್ತಿದೆ. ಇತ್ತೀಚಿನ ದಿನಗಳಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿತಪ್ಪಿಸುವ ಕಾರ್ಯಾಚರಣೆ ಮಾಡ್ತಿವೆ ಎಂದು ಹೇಳಿದರು.

ಲವ್​ ಜಿಹಾದ್​ ಕಾನೂನು ಬಗ್ಗೆ ಸಚಿವರ ಹೇಳಿಕೆ

ಲವ್ ಜಿಹಾದ್ ಹೆಸರಿನಿಂದ ಪರಿವರ್ತನೆ ಸರಿಯಲ್ಲ ಅಂತಾ ಅಹಮದಾಬಾದ್ ಹೈಕೋರ್ಟ್ ಕೂಡಾ ಹೇಳಿದೆ. ಬಳಿಕ ದೇಶದಲ್ಲಿ ಕೂಡ ವ್ಯಾಪಕ ಚರ್ಚೆ ಆರಂಭವಾಗಿದೆ. ಈಗಿರುವ ಕಾನೂನು ಅಲ್ಲದೇ ವಿಶೇಷ ಕಾನೂನು ಆಗಬೇಕು ಅಂತಾ ಕೆಲವರು ಚಿಂತನೆ ಆರಂಭಿಸಿದ್ದಾರೆ. ಕೆಲವು ರಾಜ್ಯಗಳು ಘೋಷಣೆ ಕೂಡಾ ಮಾಡಿವೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರಚನೆಯಾಗಬೇಕು ಎಂಬ ಚಿಂತನೆ ಕೂಡಾ ಮಾಡಲಾಗಿದೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಕಾನೂನು ತಜ್ಞರ ಜೊತೆ ಕೂಡಾ ಚರ್ಚೆ ಮಾಡುತ್ತೇವೆ. ಎಲ್ಲ ಸಲಹೆ ಸೂಚನೆ ಆಧಾರದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಪ್ರಕ್ರಿಯೆಗೆ ಸರ್ಕಾರ ಮುಂದುವರಿಯಲಿದೆ ಎಂದರು.

ದೇಶದಲ್ಲಿ ಎಂಟು - ಹತ್ತು ವರ್ಷಗಳಿಂದ ಈ ಚರ್ಚೆ ಇದೆ‌. ಪ್ರತೀ ಪ್ರಕರಣ ಆದಾಗಲೂ ಇದು ಚರ್ಚೆಗೆ ಬರುತ್ತದೆ. ಈಗ ಹೈಕೋರ್ಟ್ ವ್ಯಾಖ್ಯಾನದ ಬಳಿಕ ಕಾನೂನು ಪ್ರಕ್ರಿಯೆಯ ಚಿಂತನೆ ಆರಂಭವಾಗಿದೆ. ಬೇರೆ ರಾಜ್ಯಗಳಲ್ಲಿ ಏನೇನು ಮಾಡುತ್ತಾರೆ, ಅಂತಾ ನೋಡಿಕೊಂಡು ನಂತರ ನಾವು ನಮ್ಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.