ETV Bharat / state

'ಶಾಂತಿ ಕದಡುವ ಯತ್ನ ಮಾಡಬೇಡಿ, ಅದಕ್ಕೆ ನಾವು ಜಗ್ಗಲ್ಲ': ಬೊಮ್ಮಾಯಿ ಎಚ್ಚರಿಕೆ

ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಮಹಾಜನ್ ವರದಿಯೇ ಅಂತಿಮ. ರಾಜ್ಯದ ಒಂದಿಂಚೂ ಭೂಮಿ ಬಿಡಲ್ಲ. ಸೊಲ್ಲಾಪುರ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ. ಆ ಭಾಗಗಳನ್ನ ನಾವು ಸೇರಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Home Minister Basavaraj Bommai
ಬಸವರಾಜ್ ಬೊಮ್ಮಾಯಿ
author img

By

Published : Jan 18, 2021, 1:48 PM IST

ಬೆಂಗಳೂರು: ಶಾಂತಿ ಕದಡುವ ಪ್ರಯತ್ನ ನೀವು ಮಾಡಬೇಡಿ. ಇಂತಹ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ವಿರುದ್ಧವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮಾತನಾಡಿದ್ದಾರೆ. ಒಬ್ಬ ಸಿಎಂ ಜವಾಬ್ದಾರಿ ಮರೆತು ಇಂತಹ ಹೇಳಿಕೆ ಕೊಟ್ಟಿದ್ದಾರೆ. ರಾಜಕೀಯಕ್ಕಾಗಿ ಇಂತಹ ಹೇಳಿಕೆ ಕೊಡುವುದು ಬೇಡ. ಸಾಂಗ್ಲಿ, ಸೊಲ್ಲಾಪುರ ನಮ್ಮ ರಾಜ್ಯಕ್ಕೆ ಸೇರಿಸುತ್ತೇವೆ. ಮಹಾಜನ್ ವರದಿಯಲ್ಲೂ ಕ್ಲೇಮ್ ಮಂಡಿಸಿದ್ದೇವೆ. ಈಗಲೂ ಅದಕ್ಕೆ ನಾವು ಬದ್ಧವಿದ್ದೇವೆ. ಗಡಿ, ನೆಲ, ಜಲ ಭಾಷೆ ವಿಚಾರದಲ್ಲಿ ನಾವು ಒಂದೇ ರೀತಿ ಇರುತ್ತೇವೆ ಎಂದರು.

ಓದಿ: "ರಾಜ್ಯಕ್ಕೆ ಉದ್ಧವ್​ ಠಾಕ್ರೆ ಬಂದ್ರೆ ನೋಡ್ಕೊಳ್ತೇವಿ": ಚಾ.ರಂ. ಶ್ರೀನಿವಾಸಗೌಡ ಎಚ್ಚರಿಕೆ

ಉದ್ಧವ್ ಠಾಕ್ರೆ ಇಲ್ಲ ಸಲ್ಲದ, ಅನಾವಶ್ಯಕ ಹೇಳಿಕೆ ಕೊಟ್ಟಿದ್ದಾರೆ. ಮಹಾಜನ್ ವರದಿ ಅಂತಿಮವಾಗಿದೆ. ಪಾರ್ಲಿಮೆಂಟ್ ಕೂಡ ಒಪ್ಪಿಕೊಂಡಿದೆ. ಶಾಂತವಾಗಿರುವ ಬೆಳಗಾವಿ ಪರಿಸ್ಥಿತಿ ಕದಡಲು ಪ್ರಯತ್ನ ನಡೆದಿದೆ‌. ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಮಹಾಜನ್ ವರದಿಯೇ ಅಂತಿಮ. ರಾಜ್ಯದ ಒಂದಿಂಚೂ ಭೂಮಿ ಬಿಡಲ್ಲ. ಸೊಲ್ಲಾಪುರ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ. ಆ ಭಾಗಗಳನ್ನ ನಾವು ಸೇರಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.