ETV Bharat / state

ಸಿದ್ದರಾಮಯ್ಯ ಇತ್ತೀಚೆಗೆ ಏನೇನೋ ಮಾತನಾಡುತ್ತಿದ್ದಾರೆ: ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರ ತಾಲಿಬಾನ್​ ಹೇಳಿಕೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.

author img

By

Published : Sep 29, 2021, 8:36 PM IST

home minister araga jnanendra reaction on siddaramaiah statement
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: 'ಆರ್‌ಎಸ್ಎಸ್‌ ತಾಲಿಬಾನ್ ಮನಸ್ಥಿತಿ‌ 'ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇತ್ತೀಚೆಗೆ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಕಾಸಸೌಧದಲ್ಲಿ ಇಂದು ಸಂಜೆ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ, ನಾನು ಆರ್‌ಎಸ್‌ಎಸ್‌ನಿಂದ ಬಂದವರು. ಆರ್‌ಎಸ್‌ಎಸ್ ನಮಗೆ ರಾಷ್ಟ್ರಪ್ರೇಮ ತುಂಬಿದೆ. ನಾವು ಆರ್‌ಎಸ್‌ಎಸ್‌ನಿಂದ ಬಂದವರೆಂಬ ಹೆಮ್ಮೆ ಇದೆ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೂ, ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ರು. ಆರ್‌ಎಸ್‌ಎಸ್ ಸಂಸ್ಥಾಪಕ ಹೆಡೆಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಸ್ವಾತಂತ್ರ್ಯ ಯಾಕೆ ಕಳೆದುಕೊಂಡೆವು ಎಂದು ಚಿಂತನೆ ಮಾಡಿದವರು. ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯ ಮಾತನಾಡಿ ಮತ್ತಷ್ಟು ಕೆಳಗೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಸಿನಿಮಾ ಪೈರಸಿ ಬಗ್ಗೆ ನಿರ್ಮಾಪಕರಿಂದ ದೂರು:

ಕೋಟಿಗೊಬ್ಬ -3 ಸಿನಿಮಾ ಪೈರಸಿ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೈರಸಿ ಬಗ್ಗೆ ನನಗೆ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಆರ್ಗ್‌ನೈಸಡ್ ಕ್ರೈಂ ಎಂದು ಅನಿಸುತ್ತಿದೆ ಎಂದರು.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅನೇಕ ಜನರಿಗೆ ಸಿನಿಮಾದಿಂದ ಉದ್ಯೋಗ ಸಿಗುತ್ತದೆ. ಆದರೆ ಕೆಲವರು ಪೈರಸಿ ಮಾಡುತ್ತಾರೆ. ಪೈರಸಿ ಮಾಡುವಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

'ಉಮೇಶ್ ರೆಡ್ಡಿ ಶಿಕ್ಷೆ ಸ್ವಾಗತಾರ್ಹ'

ಉಮೇಶ್ ರೆಡ್ಡಿಗೆ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆ ಸ್ವಾಗತಾರ್ಹ ಎಂದು ಗೃಹ ಸಚಿವರು ಹೇಳಿದರು. ಅವನೊಬ್ಬ ವಿಕೃತ, ಅಮಾನವೀಯ ವ್ಯಕ್ತಿ,ಘೋರ ಕೃತ್ಯಗಳನ್ನು ಎಸಗುತ್ತಿದ್ದ ಎಂದರು.

ಮತಾಂತರ ನಿಷೇಧ ಕಾಯ್ದೆ ಬಗ್ಗೆ..

ಮತಾಂತರ ನಿಷೇಧ ಕಾಯ್ದೆ ತರಲು ಉದ್ದೇಶಿಸಲಾಗಿದೆ. ಸಮುದಾಯಗಳ ನಡುವೆ ಮತಾಂತರ ಆಗುತ್ತಿದೆ. ಇದರಿಂದ ಕ್ಷೋಭೆ ತರುವ ಕೆಲಸ ಆಗುತ್ತಿದೆ. ಪ್ರತಿಯೊಬ್ಬರು ಅವರವರ ಧರ್ಮದಲ್ಲೇ ಬದುಕಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.