ETV Bharat / state

ಅಡಕೆಗೆ ಕ್ಯಾನ್ಸರ್ ತರಿಸುವುದಲ್ಲ, ಗುಣಪಡಿಸುವ ಶಕ್ತಿ ಇದೆ ಎಂಬ ವರದಿ ಕೈಸೇರಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ - karnataka assembly session

ಎಲೆಚುಕ್ಕಿ ರೋಗ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಇದರ ಪರಿಹಾರಕ್ಕಾಗಿ ಸರ್ಕಾರ ಔಷಧಗಳನ್ನು ವಿತರಿಸಿದೆ. ಆದರೆ, ಸಿಂಪಡಣೆ ದೊಡ್ಡ ಸವಾಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Home Minister Araga Jnanendra React On Arecanut
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Feb 14, 2023, 7:11 PM IST

Updated : Feb 15, 2023, 11:59 AM IST

ಬೆಂಗಳೂರು: ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂದು ಹಿಂದಿನ ಸರ್ಕಾರ ತಿಳಿಸಿತ್ತು. ಆದರೆ, ರಾಮಯ್ಯ ಆಸ್ಪತ್ರೆ ನಡೆಸಿದ ಸಮೀಕ್ಷೆಯಲ್ಲಿ ಇದರಲ್ಲಿ ಔಷಧ ಗುಣ ಇದೆ, ಕ್ಯಾನ್ಸರ್ ಕಾರಕ ಅಂಶ ಇಲ್ಲ ಎಂಬ ವರದಿ ಕೈಸೇರಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇಂದು (ಮಂಗಳವಾರ) ವಿಧಾನಪರಿಷತ್​ನಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ನೀಡಿದ್ದ ವರದಿಯಿಂದ ಅಡಕೆ ಬೆಳೆಗಾರರ ಮೇಲೆ ತೂಗುಗತ್ತಿ ತೂಗುತ್ತಿತ್ತು. ಆದರೆ, ಈಗ ಬಂದಿರುವ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸುತ್ತೇವೆ. ರಾಮಯ್ಯ ಆಸ್ಪತ್ರೆಗೆ ವರ್ಷದ ಹಿಂದೆ ವರದಿ ನೀಡಲು ಕೇಳಲಾಗಿತ್ತು. ಈಗ ವರದಿ ಸಿಕ್ಕಿದ್ದು, ಇದರಲ್ಲಿ ಔಷಧ ಗುಣ ಇದೆ. ಗಾಯವನ್ನು ಗುಣಪಡಿಸುವ ವಿಚಾರದಲ್ಲಿ ಉಳಿದೆಲ್ಲ ಉತ್ಪನ್ನಕ್ಕಿಂದ ಅಡಕೆಗೆ ಹೆಚ್ಚು ಶಕ್ತಿ ಇದೆ. ಅಲ್ಲದೇ ಇದರಲ್ಲಿ ಅಗಾಧ ಶಕ್ತಿ ಇದ್ದು, ಕ್ಯಾನ್ಸರ್ ಗುಣಪಡಿಸುವ ಶಕ್ತಿ ಇದೆ ಎಂಬ ಮಾಹಿತಿಯನ್ನು ವರದಿ ನೀಡಿದೆ. ಇದರಿಂದ ನಾವು ಆತಂಕದಿಂದ ಹೊರ ಬಂದಿದ್ದೇವೆ ಎಂದರು.

ಬೆಳೆ ಪ್ರಮಾಣ ಕಡಿಮೆ ಆಗಲಿ: ವಿಧಾನಪರಿಷತ್ ಬಿಜೆಪಿ ಸದಸ್ಯ ಕೆ ಪ್ರತಾಪ್ ಸಿಂಹ ನಾಯಕ ನಿಯಮ 330 ರ ಅಡಿ ಪ್ರಸ್ಥಾಪಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಂದರ್ಭ ಈ ಮೇಲಿನ ಮಾಹಿತಿಯನ್ನು ನೀಡಿದ ಗೃಹ ಸಚಿವರು, ಅಡಕೆ ಬೆಳೆಗಾರರ ಪ್ರಮಾಣ ಬೆಲೆ ಹೆಚ್ಚಳದ ಕಾರಣದಿಂದ ಹೆಚ್ಚಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಅಡಿಕೆ ಬೆಳೆ ಇದೀಗ ರಾಜ್ಯದ ಎಲ್ಲ ಭಾಗಕ್ಕೂ ವಿಸ್ತರಿಸಿದೆ. ಎರಡು ಎಕರೆ ಭೂಮಿಯನ್ನು ಹೊಂದಿ ಅದರಲ್ಲೇ ಜೀವನೋಪಾಯ ನಿರ್ವಹಣೆ ಮಾಡುತ್ತಿದ್ದ ಅಡಕೆ ಬೆಳೆಗಾರರು ಇಂದು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅದೇ ಸಾಂಪ್ರದಾಯಿಕ ವಿಧಾನದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ, ರಾಜ್ಯದ ಬಯಲು ಸೀಮೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೂ ಅಡಕೆ ತೋಟಗಳು ವಿಸ್ತರಣೆಗೊಂಡಿದ್ದು ದೊಡ್ಡ ಪ್ರಮಾಣದಲ್ಲಿ ಅಡಕೆ ಬೆಳೆಯುವ ಕಾರ್ಯ ಆಗುತ್ತಿದೆ. ಅಡಕೆ ಬೆಲೆ ಹೆಚ್ಚಳವೇ ಇದಕ್ಕೆ ಕಾರಣವಾಗಿದ್ದು ಯಾವ ಸಮಯದಲ್ಲಿ ಬೇಕಾದರೂ ಇದು ವ್ಯತ್ಯಾಸವಾಗಬಹುದು. ಇಂದು ಬೆಲೆ ಹೆಚ್ಚಳದ ಲಾಭವನ್ನ ರೈತರೇನೂ ಪಡೆಯುತ್ತಿಲ್ಲ. ಕೂಲಿ ಕಾರ್ಮಿಕರ ಬೇಡಿಕೆ ಹೆಚ್ಚಾಗಿದೆ, ಹೊಸ ಹೊಸ ರೋಗಗಳು ಅಡಕೆ ಬೆಳೆಯನ್ನ ಕಾಡುತ್ತಿದೆ.

ಎಲೆಚುಕ್ಕಿ ರೋಗ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಇದರ ಪರಿಹಾರಕ್ಕಾಗಿ ಸರ್ಕಾರ ಸಹ ಔಷಧಗಳನ್ನ ವಿತರಿಸಿದ್ದು ಸಿಂಪಡಣೆ ಸಹ ದೊಡ್ಡ ಸವಾಲಾಗಿ ಕಾಡಿದೆ. ಮೊದಲ ಬಾರಿಗೆ ಸಿಂಪಡಣೆಯನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಇಂದು ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಾಡುತ್ತಿರುವ ಎಲೆಚುಕ್ಕಿ ರೋಗ ಮುಂದಿನ ದಿನಗಳಲ್ಲಿ ಬೇರೆಡೆಗೂ ವ್ಯಾಪಿಸುವ ಆತಂಕ ಇದೆ. ಇದರಿಂದಾಗಿ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿದೆ ಎಂದರು.

ಅಡಕೆ ಬೆಳೆಗಾರರ ಸಂಖ್ಯೆ ಇದೇ ರೀತಿ ಹೆಚ್ಚಾಗುತ್ತಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆ. ರೈತರು ಸಹಜವಾಗಿ ಬೆಲೆಯನ್ನು ಗಮನದಲ್ಲಿಟ್ಟು ಅಡಿಕೆ ಬೆಳೆಗಾರರಾಗಲು ಬಯಸುವುದರಲ್ಲಿ ತಪ್ಪಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಸಿಗುವ ಉತ್ತೇಜನ ಕಡಿಮೆ ಆದರೆ ಒಳ್ಳೆಯದು. ಅಡಿಕೆ ಬೆಳೆ ಪ್ರದೇಶಗಳು ಕೊಂಚ ನಿಯಂತ್ರಣಕ್ಕೆ ಬಂದರೆ ಉತ್ತಮ ಎಂಬ ಅಭಿಪ್ರಾಯ ಮೂಲ ಅಡಿಕೆ ಬೆಳೆಗಾರರದ್ದು. ಅಡಕೆಯನ್ನೇ ಅವಲಂಬಿಸಿ ಬದುಕುತ್ತಿರುವವರಿಗೆ ಇಷ್ಟು ದೊಡ್ಡ ಮೊತ್ತದ ಬೆಲೆಯ ಅಗತ್ಯ ಇರಲಿಲ್ಲ. ನಾಲ್ಕು ಸಾವಿರ ಅಡಿಕೆ ಬೆಳೆ ಬಂದಾಗಲೂ ಜನ ತೃಪ್ತಿಯಿಂದ ಇದ್ದರು. ಆದರೆ, ಬೆಲೆ ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗಿದ್ದು, ಜನ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಕಳೆದ ಎರಡು ವರ್ಷದ ಈಚೆ ಬಿಸಿಲಿನ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ಅಡಿಕೆ ಮರಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ ಎಂದು ತಜ್ಞರು ಹಾಗೂ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಬಿಸಿಲು ಹೆಚ್ಚಾಗಿದ್ದು ಸಮಸ್ಯೆ ಸಹ ಕಡಿಮೆಯಾಗುವ ನಿರೀಕ್ಷೆ ಇದೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಉತ್ತರಕನ್ನಡ, ಕೊಡಗು, ಉಡುಪಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಹಾಸನ ಜಿಲ್ಲೆಗಳ 6.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯನ್ನ ಬೆಳೆಯಲಾಗುತ್ತದೆ.

ಅಡಕೆ ಬೆಳೆಗೆ ಏಲಕ್ಕಿ ರೋಗ ಶೀಘ್ರವಾಗಿ ಹರಡುತ್ತಿದ್ದು ಚಿಕ್ಕಮಗಳೂರಿನಲ್ಲಿ 20,000 ಹೆಕ್ಟೇರ್, ಶಿವಮೊಗ್ಗದಲ್ಲಿ 12500 ಹೆಕ್ಟೇರ್, ಉತ್ತರ ಕನ್ನಡ ಜಿಲ್ಲೆಯಲ್ಲಿ 4400 ಹೆಕ್ಟೇರ್, ಹಾಸನ ಜಿಲ್ಲೆಯಲ್ಲಿ 4200 ಹೆಕ್ಟೇರ್, ದಕ್ಷಿಣ ಕನ್ನಡದಲ್ಲಿ 1100 ಹೆಕ್ಟೇರ್, ಉಡುಪಿ ಜಿಲ್ಲೆಯಲ್ಲಿ 160 ಹೆಕ್ಟೇರ್ ಹಾಗೂ ಕೊಡಗು ಜಿಲ್ಲೆಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಕಾಡಿದ್ದು ಒಟ್ಟು ಇದುವರೆಗೂ 42,504 ಹೆಕ್ಟೇರ್ ಪ್ರದೇಶವು ಭಾದೀತವಾಗಿದೆ. ರಾಜ್ಯ ಸರ್ಕಾರ ಈ ರೋಗಭಾದೆಯನ್ನು ತಡೆಯಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದು ರೈತರು ಸಹ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಇದರ ಲಾಭ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕರ್ನಾಟಕವೇ ಮಾಡೆಲ್, ನಮಗೆ ಯುಪಿ, ಗುಜರಾತ್ ಮಾಡೆಲ್ ಬೇಕಿಲ್ಲ, ರಾಜ್ಯಪಾಲರಿಂದ ಸರ್ಕಾರ ಬರೀ ಸುಳ್ಳು ಹೇಳಿಸಿದೆ: ಹರಿಪ್ರಸಾದ್

Last Updated : Feb 15, 2023, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.