ETV Bharat / state

ವಾಕ್​​ ಮಾಡಬೇಡ ಪಾರ್ಕ್​​​​ನಿಂದ ಹೊರಹೋಗು ಎಂದಿದಕ್ಕೆ ಹೋಮ್​ಗಾರ್ಡ್​ ಮೇಲೆ ಹಲ್ಲೆ - Bangalore Corona case

ಪಾರ್ಕಿನಲ್ಲಿ ವಾಕಿಂಗ್ ಅವಧಿ ಮುಗಿದರೂ ವಾಕ್ ಮಾಡುತ್ತಿದ್ದ ರಾಘವೇಂದ್ರನಿಗೆ ಹೊರಗೆ ಹೋಗುವಂತೆ ಗಾರ್ಡ್ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡು ಹೋಮ್ ಗಾರ್ಡ್ ವಿರುದ್ಧ ಆರೋಪಿ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ಆರೋಪಿ ಹೋಮ್​ಗಾರ್ಡ್ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

Home Guard attacked by man who do walking after times ends
ವಾಕ್​​ ಮಾಡಬೇಡ ಪಾರ್ಕ್​​​​ನಿಂದ ಹೊರಹೋಗು ಎಂದಿದಕ್ಕೆ ಹೋಮ್​ಗಾರ್ಡ್​ ಮೇಲೆ ಹಲ್ಲೆ
author img

By

Published : Jul 2, 2020, 9:43 PM IST

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ನಿಯಮ‌ ಪಾಲನೆ ಮಾಡಿದ ಗೃಹರಕ್ಷಕನಿಗೆ ಥಳಿಸಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ರಾಚೇನಹಳ್ಳಿ ಪಾರ್ಕ್​​​​ನಲ್ಲಿ ಹೋಮ್​ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಲ್ಲೆಗೊಳಗಾದವರು. ಕೃತ್ಯ ಎಸಗಿದ ಆರೋಪದಡಿ ಸ್ಥಳೀಯ ನಿವಾಸಿ ರಾಘವೇಂದ್ರ ಎಂಬಾತ ಪೊಲೀಸರ ವಶದಲ್ಲಿದ್ದಾನೆ.

ವಾಕ್​​ ಮಾಡಬೇಡ ಪಾರ್ಕ್​​​​ನಿಂದ ಹೊರಹೋಗು ಎಂದಿದಕ್ಕೆ ಹೋಮ್​ಗಾರ್ಡ್​ ಮೇಲೆ ಹಲ್ಲೆ

ಕೊರೊನಾ ವೈರಸ್ ಹರಡದಂತೆ ತಡೆಯಲು ನಗರದ ಎಲ್ಲಾ ಪಾರ್ಕ್​​​ಗಳಲ್ಲಿ ಮುಂಜಾನೆ 6ರಿಂದ 9 ಗಂಟೆವರೆಗೆ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿತ್ತು.

ಇದರಂತೆ ರಾಚೇನಹಳ್ಳಿ ಕೆರೆ ಪಾರ್ಕ್​​​ನ ಆಡಳಿತ ಮಂಡಳಿಯು ಸರ್ಕಾರ ಆದೇಶ ಅನುಷ್ಠಾನಗೊಳಿಸುವಂತೆ ಗೃಹರಕ್ಷಕರಾಗಿ ನಿಯೋಜನೆಗೊಂಡಿದ್ದ ಮಂಜುನಾಥ್​​​​ಗೆ ಸೂಚಿಸಿತ್ತು.‌ ಇದರಂತೆ ಮಂಜುನಾಥ್ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು.

‌ಈ ನಡುವೆ ಪಾರ್ಕಿನಲ್ಲಿ ವಾಕಿಂಗ್ ಅವಧಿ ಮುಗಿದರೂ ವಾಕ್ ಮಾಡುತ್ತಿದ್ದ ರಾಘವೇಂದ್ರನಿಗೆ ಹೊರಗೆ ಹೋಗುವಂತೆ ಗಾರ್ಡ್ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡು ಹೋಮ್​ಗಾರ್ಡ್ ವಿರುದ್ಧ ಆರೋಪಿ ಮಾತಿನ ಚಕಮಕಿ ನಡೆಸಿದ್ದಾನೆ.

ಮಾತಿನ ಸಮರ ನಿಧಾನವಾಗಿ ಹೊಡೆಯುವ ಹಂತಕ್ಕೆ ತಲುಪಿ‌ ಕೋಪದಿಂದ ಮಂಜುನಾಥ್ ಮುಖಕ್ಕೆ‌ ರಾಘವೇಂದ್ರ ಕೈಯಿಂದ‌ ಹೊಡೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಹಲ್ಲೆ ಮಾಡಿದ ರಭಸಕ್ಕೆ‌‌ ಮಂಜುನಾಥ್​​​​ನ ಎಡಗಣ್ಣು ಉದಿಕೊಂಡಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.