ಬೆಂಗಳೂರು: ದೇಹದಲ್ಲಿ ಗ್ಯಾಸ್ಟ್ರಿಕ್ ಉತ್ಪಾದನೆಯಾಗಿ ಮನುಷ್ಯ ಹೇಗೆ ಅನಾರೋಗ್ಯದಿಂದ ಬಳಲುತ್ತಾನೋ ಅದೇ ರೀತಿ ಭೂಮಿಯಲ್ಲೂ ಗಾಳಿ ಸ್ಫೋಟಗೊಂಡು ಮನೆಗಳು ಕುಸಿಯಲಾರಭಿಸುತ್ತವೆ. ಈ ಬಗ್ಗೆ ಎಂಎಸ್ಎಂಇ (ಕಿರು, ಸಣ್ಣ, ಮಧ್ಯಮ ಸಂಸ್ಥೆ) ಹಾಗೂ ಸರ್ಕಾರದ ಜತೆ ಸೇರಿ ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಪ್ರೊಟೆಕ್ಟ್ ಗ್ರೂಪ್ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರಘುನಾಥ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಶೇ.95 ರಷ್ಟು ಮನೆಗಳು ಬಿರುಕು ಬಿಟ್ಟು, ಮಳೆಗಾಲದಲ್ಲಿ ಸೋರುತ್ತವೆ. ಇದಕ್ಕೆ ಕಾರಣ ಮನೆ ಕಟ್ಟುವ ಸಮಯದಲ್ಲಿ ಭೂಮಿ ಅಗೆದು ತಿಂಗಳಾನುಗಟ್ಟಲೇ ಹಾಗೆ ಬಿಡುವುದು. ಇದರಿಂದ ಭೂಮಿ ಒಳಗೆ ಗ್ಯಾಸ್ ತುಂಬಿಕೊಳ್ಳುತ್ತದೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರ, ನೋಯ್ಡಾದಲ್ಲಿ ಭೂಕಂಪನ.. ಮನೆಗಳಿಂದ ಹೊರ ಬಂದ ಜನ
ಮಳೆಗಾಲದಲ್ಲಿ ನೀರು ಹರಿಯುವುದರಿಂದ ಭೂಮಿ ಸಡಿಲವಾಗಿ ಗಾಳಿ ಸ್ಫೋಟಗೊಂಡು ಮನೆಗಳು ಕುಸಿಯಲಾರಂಭಿಸುತ್ತವೆ. ಅಲ್ಲದೇ ರಸ್ತೆಗಳು, ಪ್ಲೈ ಓವರ್ ಕುಸಿಯುವುದು ಕೂಡ ಭೂಮಿಯೊಳಗೆ ಗಾಳಿ ಸ್ಫೋಟಗೊಳ್ಳುವುದರಿಂದಲೇ ಎಂದು ವಿವರಿಸಿದರು.
ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಮೇ ತಿಂಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇನ್ನು ಈ ಬಗ್ಗೆ ಸರ್ಕಾರಕ್ಕೆ ಹಾಗೂ ಎಂಎಸ್ಎಂಇ ಸಂಸ್ಥೆಗಳಿಗೆ ಮನವಿ ಸಲ್ಲಿಸಲಾಗಿದ್ದು, ನಮ್ಮ ಜತೆ ಕೈ ಜೋಡಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.