ETV Bharat / state

ಬಸ್ ಏಜೆಂಟ್ ಆಗಿ ಟಿಕೆಟ್ ಹರಿಯುತ್ತಿದ್ದ ವ್ಯಕ್ತಿ ಇಂದು ಹೀಗೆ ಮಾತಾಡ್ತಾರೆ: ಸೋಮಶೇಖರ್ ವಿರುದ್ಧ ರೇವಣ್ಣ ವಾಗ್ದಾಳಿ - Farmer minister HMRevanna

ಬಸ್ ಏಜೆಂಟ್ ಆಗಿ ಟಿಕೆಟ್ ಹರಿಯುತ್ತಿದ್ದ ವ್ಯಕ್ತಿ ಇಂದು ಹೀಗೆ ಮಾತಾಡ್ತಿದ್ದಾರಲ್ಲ. ಜಾತಿ ಕೆಟ್ರು ಸುಖ ಇರಬೇಕು. ಆದ್ರೆ ಪಕ್ಷದಿಂದ ಪಕ್ಷ ಬಿಟ್ಟು ಮಂತ್ರಿಯಾಗಲು ಹೊರಟಿದ್ದಾರೆ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಮಾಜಿ ಸಚಿವ ಹೆಚ್.ಎಂ.ರೇವಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮಶೇಖರ್ ವಿರುದ್ಧ ರೇವಣ್ಣ ವಾಗ್ದಾಳಿ
author img

By

Published : Sep 30, 2019, 11:44 PM IST

ಬೆಂಗಳೂರು: ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು, ನಾನೇನಾದ್ರೂ ಬೆಳೆದಿದ್ರೆ ಅದಕ್ಕೆ ಸಿದ್ದರಾಮಯ್ಯ ಕಾರಣ ಅಂತಾ ಎಸ್ ಟಿ ಸೋಮಶೇಖರ್ ಹೇಳಿದ್ರು, ಆಗಲಿ ಆದ್ರೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡೋದು ಸರಿಯಲ್ಲ. ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಜನನಾಯಕನನ್ನಾಗಿ ಮಾಡಿತ್ತು ಎಂದರು.

ಸೋಮಶೇಖರ್ ವಿರುದ್ಧ ರೇವಣ್ಣ ವಾಗ್ದಾಳಿ

ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್​ಬಿಎಂ(ಸೋಮಶೇಖರ್, ಭೈರತಿ, ಮುನಿರತ್ನ) ಮೂವರು ಆಡಿದ ಆಟ ಗೊತ್ತಿಲ್ವಾ. ಸೋಮಶೇಖರ್, ಭೈರತಿ, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯರನ್ನು ಹಾಡಿ ಹೊಗಳುತ್ತಿದ್ರಿ, ಈಗ ನಾಲಿಗೆಗೆ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ. ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಮಾತನಾಡ್ತೀರಲ್ಲ. ಸಿದ್ದರಾಮಯ್ಯ ಮನೆಗೆ ಬಂದ್ರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡ್ತೀರಲ್ಲ ಎಂದು ಕಿಡಿಕಾರಿದರು.

Intro:news video

Body:news video only, news sending by wrap

Conclusion:video
ETV Bharat Logo

Copyright © 2025 Ushodaya Enterprises Pvt. Ltd., All Rights Reserved.