ಬೆಂಗಳೂರು: ಮಾಜಿ ಸಚಿವ ಹೆಚ್ ಕೆ ಪಾಟೀಲ್ ಮೊನ್ನೆ ಜಿಂದಾಲ್ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಾರಿ ಕುಡಿಯೋ ನೀರಿನ ವಿಚಾರವಾಗಿ ಪತ್ರ ಬರೆದಿದ್ದು, ಕುಡಿಯೋ ನೀರಿನ ಪೂರೈಕೆಯನ್ನ ಸರ್ಕಾರ ಹೇಗೆ ಮಾಡಿದ್ರೇ ಸೂಕ್ತ ಅನ್ನೋದರ ಕುರಿತಂತೆ ಸಲಹೆ ನೀಡಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಜತೆಗೆ ಸಿಎಂ ಕುಮಾರಸ್ವಾಮಿಯವರಿಗೂ ಪತ್ರದ ಪ್ರತಿ ರವಾನಿಸಿರುವ ಅವರು, "ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಜವಾಬ್ದಾರಿ". ಅನ್ನ ಭಾಗ್ಯದ ಅಕ್ಕಿ ರೀತಿ ನೀರನ್ನೂ ಕಡಿಮೆ ದರದಲ್ಲಿ ಸರ್ಕಾರವೇ ಪೂರೈಸಬೇಕು ಅಂತಾ ಆಗ್ರಹಿಸಿದ್ದಾರೆ.
ಅದಕ್ಕಾಗಿಯೇ ಸರ್ಕಾರ ಪ್ರತೀ ಲೀಟರ್ ನೀರಿಗೆ 10 ಪೈಸೆಯಂತೆ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಆದರೆ, ಈ ನೀರಿನ ದರವನ್ನು ಪ್ರತಿ ಲೀಟರ್ಗೆ 25 ಪೈಸೆ ಹೆಚ್ಚಿಸಲು ಮುಂದಾಗಿರುವುದು ಸಮಂಜಸವಲ್ಲ, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಸಿಎಂ ಕುಮಾರಸ್ವಾಮಿ ಮತ್ತು ಕೃಷ್ಣಬೈರೇಗೌಡರಿಗೆ ಪತ್ರ ಬರೆದಿರುವ ಹೆಚ್ ಕೆ ಪಾಟೀಲರು, ಇದನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.