ಬೆಂಗಳೂರು: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 8 ಉಗ್ರರನ್ನು ಪತ್ತೆ ಹಚ್ಚಲಾಗಿದೆ. ಈ ಹಿಂದೆ ಕೇರಳದಲ್ಲಿ ಐಸಿಸ್ ನೇಮಕಾತಿ ಪ್ರಕರಣದಲ್ಲಿ ಅಮರ್ ಅಬ್ದುಲ್ ರೆಹಮಾನ್ ಹಾಗೂ ಶಂಕರ್ ವೆಂಕಟೇಶ್ ಪೆರುಮಾಳ್ ಎಂಬವರನ್ನು ಬಂಧಿಸಲಾಗಿತ್ತು. ಬೆಂಗಳೂರಿನಲ್ಲಿ ಇದ್ದುಕೊಂಡು ಉಗ್ರ ಸಂಘಟನೆಗೆ ನೇಮಕಾತಿಯಲ್ಲಿ ತೊಡಗಿದ್ದ ಜೋಯೆಬ್ ಮನ್ನಾ, ಇರ್ಫಾನ್ ನಾಸೀರ್, ಮಹಮ್ಮದ್ ತಕ್ವೀರ್ ಹಾಗು ಅಹಮ್ಮದ್ ಖಾದರ್ ಎಂಬವರನ್ನು ಬಂಧಿಸಲಾಗಿತ್ತು.
ಇದೇ ಜನವರಿಯಲ್ಲಿ ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಬಗ್ಗೆ ದೀಪ್ತಿ ಮಾರ್ಲ ಎಂಬ ಮಹಿಳೆಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಇದೀಗ ಮತ್ತೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲೀಬ್ ಹುಸೇನ್ ಎಂಬಾತನನ್ನು ಜಮ್ಮು ಕಾಶ್ಮೀರ ಮತ್ತು ರಾಜ್ಯ ಪೊಲೀಸರು ಬೆಂಗಳೂರಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು ಬಿಡಲು ಸಿದ್ದನಾಗಿದ್ದ ತಾಲೀಬ್: ಇನ್ನು ಮೊನ್ನೆ ಬೆಂಗಳೂರಿನಲ್ಲಿ ಬಂಧಿತನಾದ ಉಗ್ರ ತಾಲೀಬ್ ಹುಸೇನ್ ನಗರ ಬಿಟ್ಟು ಹೋಗಲು ರೆಡಿಯಾಗಿದ್ದನಂತೆ. ಸ್ಥಳೀಯರ ಬಳಿ, ಊರಿಗೆ ಹೋಗಿ ಅಲ್ಲೇ ಏನಾದರೂ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಇತ್ತೀಚಿಗೆ ಹೇಳಿದ್ದನಂತೆ. ಈತನ ಬಂಧನವಾಗುತ್ತಿದ್ದಂತೆ ರಾಜ್ಯ ಆಂತರಿಕ ಭದ್ರತಾ ಪಡೆ (ಐಎಸ್ಡಿ) ಅಧಿಕಾರಿಗಳು ತಾಲೀಬ್ ಹುಸೇನ್ಗೆ ಬಾಡಿಗೆಗೆ ಮನೆ ನೀಡಿದ್ದ ಅನ್ವರ್ ಮಾವ್ಡ ಎಂಬಾತನನ್ನು ವಿಚಾರಣೆ ಮಾಡಿದ್ದಾರೆ.
ಇದನ್ನೂ ಓದಿ: ಮಂಗಳೂರಿಗೆ ಸಂದರ್ಶನಕ್ಕಾಗಿ ಬಂದಿದ್ದ ಯುವತಿಗೆ ಕಿರುಕುಳ: ಆರೋಪಿ ಬಂಧನ