ಬೆಂಗಳೂರು: ವಿಶ್ವ ಏಡ್ಸ್ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಏಡ್ಸ್ ಕುರಿತಾದ ಜಾಗೃತಿ ಜಾಥಾ ಕೈಗೊಳ್ಳಲಾಯಿತು. ಸಾರ್ವಜನಿಕರಿಗೆ ಏಡ್ಸ್ ಕುರಿತಾಗಿ ಇರುವ ಮೂಢನಂಬಿಕೆಯ ಕುರಿತು ಅರಿವು ಮೂಡಿಸಲಾಯಿತು.
ಈ ಜಾಥಾದಲ್ಲಿ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಭಾಗಿಯಾಗಿದ್ದರು. ಇದೇ ಸಮಯದಲ್ಲಿ ಚರ್ಮ ಮತ್ತು ಲೈಂಗಿಕ ವಿಭಾಗದಿಂದ ಸ್ವಯಂ ಪ್ರೇರಿತ ಹೆಚ್ ಐವಿ ರಕ್ತ ಪರೀಕ್ಷೆ ನೆರವೇರಿಸಲಾಯಿತು.