ಬೆಂಗಳೂರು: ಬೆಂಗಳೂರು ನನಗೆ ಮನೆ ಇದ್ದಂತೆ. ನಗರ ಬಿಟ್ಟು ಎಲ್ಲೂ ಹೋಗಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಉಹಾಪೋಹಗಳಿಗೆ ಹಿತೇಶಾ ಚಂದ್ರಾಣಿ ಸ್ಪಷ್ಟನೆ ನೀಡಿದ್ದಾರೆ.
ಮಾ.9 ರಂದು ಜೊಮ್ಯಾಟೊ ಡೆಲಿವರಿ ಬಾಯ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಯುವತಿ ಹಿತೇಶಾ ಚಂದ್ರಾಣಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಹಿತೇಶಾ ತಲೆಮರೆಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ ಯುವತಿ, ಇತ್ತೀಚಿನ ಬೆಳವಣಿಗೆಯಿಂದ ಜೀವ ಬೆದರಿಕೆಯ ಭಯವಾಗುತ್ತಿದೆ. ಹಾಗಾಂತ ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ನನಗೆ ಮನೆ ಇದ್ದಂತೆ. ನನ್ನ ವಿರುದ್ಧ ಕೇಳಿ ಬರುತ್ತಿರುವ ವದಂತಿ ಶುದ್ಧ ಸುಳ್ಳು ಎಂದು ಪೋಸ್ಟ್ ಮಾಡಿದ್ದಾರೆ.
ಜೊಮ್ಯಾಟೊ ಡೆಲಿವರಿ ಬಾಯ್ ಜೊತೆ ನಡೆದ ಗಲಾಟೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ತಪ್ಪಿತಸ್ಥಳು ಎನ್ನುವಂತೆ ಸೆಲೆಬ್ರೆಟಿಗಳು ಹಾಗೂ ವಿವಿಧ ವರ್ಗದ ಜನರು ಬಿಂಬಿಸಿ ಟೀಕಿಸಿದ್ದಾರೆ. ಕನ್ನಡಪರ ಸಂಘಟನೆಗಳು ನನಗೆ ಕರೆ ಮಾಡಿ ನಿಂದಿಸಿವೆ. ನಡೆದಿರುವ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದೆ. ಆದರೆ, ನನ್ನ ಮಾತುಗಳನ್ನು ತಿರುಚಿ ತಪ್ಪು ಭಾವೆನೆ ಬರುವಂತೆ ಪ್ರಚಾರ ಮಾಡಲಾಗಿದೆ. ಈ ಬೆಳವಣಿಗೆ ನನ್ನನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಮೈಸೂರಿನಲ್ಲಿ ಸ್ವಿಗ್ಗಿ ಫುಡ್ ಡಿಲಿವರಿ ಬಾಯ್ ಮೇಲೆ ಮಾರಣಾಂತಿಕ ಹಲ್ಲೆ
ಘಟನೆ ಬಳಿಕ ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ದಾಳಿ ನಡೆಸಿದ್ದಾರೆ. ನನ್ನ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ನಗರದಲ್ಲಿ ಏಕಾಂಗಿಯಾಗಿ ನೆಲೆಸುವ ಮಹಿಳೆ ಸ್ಥಿತಿ ಬಗ್ಗೆ ಆತಂಕ ಮೂಡಿಸಿದೆ. ಘಟನೆಯಿಂದ ಬೇಸತ್ತು ನಾನು ಮೌನವಾಗಿದ್ದೇನೆ. ನಾನು ಮಾತನಾಡಿದರೂ ತಿರುಚಿ ಬೇರೆ ಭಾವನೆ ಬರುವಂತೆ ಮಾಡಲಾಗುತ್ತದೆ ಎಂದು ಹಿತೇಶಾ ಬರೆದುಕೊಂಡಿದ್ದಾರೆ.