ETV Bharat / state

ಹಿಜಾಬ್ ವಿಚಾರವಾಗಿ ಬಂದ್​ಗೆ ಕರೆ ಕೊಟ್ಟವರು ರಾಷ್ಟ್ರ ವಿರೋಧಿಗಳು: ಸಚಿವ ಆರ್.ಅಶೋಕ್

ಹೈಕೋರ್ಟ್ ತೀರ್ಪು ಬಗ್ಗೆ ದೇಶದೆಲ್ಲೆಡೆ ಸ್ವಾಗತ ಕೇಳಿ ಬಂದಿದೆ. ಆದರೂ ಕೆಲ ಕಿಡಿಗೇಡಿಗಳು ಬಂದ್​ಗೆ ಕರೆ ಕೊಟ್ಟಿದ್ದಾರೆ. ಇದು ಸಂವಿಧಾನವನ್ನು ಬುಡಮೇಲು ಮಾಡುವ ಕ್ರಿಯೆ ಎಂದು ಆರ್.ಅಶೋಕ್ ಹೇಳಿದರು.

Minister R.Ashok
Minister R.Ashok
author img

By

Published : Mar 17, 2022, 1:10 PM IST

ಬೆಂಗಳೂರು: ಹಿಜಾಬ್​ ವಿವಾದ ಸಂಬಂಧ ಹೈಕೋರ್ಟ್​ ತೀರ್ಪು ವಿರೋಧಿಸಿ ಕರ್ನಾಟಕ ಬಂದ್​ಗೆ ಕರೆ ಕೊಟ್ಟಿರುವವರು ರಾಷ್ಟ್ರ ವಿರೋಧಿಗಳು. ಇಂತಹವರನ್ನು ಸರ್ಕಾರ ಮಟ್ಟಹಾಕುತ್ತದೆ ಎಂದು ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಬಗ್ಗೆ ದೇಶದೆಲ್ಲೆಡೆ ಸ್ವಾಗತ ಕೇಳಿ ಬಂದಿದೆ. ಆದರೂ ಕೆಲ ಕಿಡಿಗೇಡಿಗಳು ಬಂದ್​ಗೆ ಕರೆ ಕೊಟ್ಟಿದ್ದಾರೆ. ಇದು ಸಂವಿಧಾನದವನ್ನು ಬುಡಮೇಲು ಮಾಡುವ ಕ್ರಿಯೆ. ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡುವವರು ಯಾರೇ ಆಗಿದ್ದರೂ ಕಾನೂನಿನ ವಿರೋಧಿಗಳೇ ಎಂದು ಟೀಕಿಸಿದರು.

ಹಿಜಾಬ್ ವಿಚಾರವಾಗಿ ಬಂದ್​ಗೆ ಕರೆ ಕೊಟ್ಟವರು ರಾಷ್ಟ್ರ ವಿರೋಧಿಗಳು: ಸಚಿವ ಆರ್.ಅಶೋಕ್

ಕೋರ್ಟ್ ತೀರ್ಪು ಬಗ್ಗೆ ಇವರಿಗೆ ಎಷ್ಟು ಗೌರವ ಇದೆ ತಿಳಿಯುತ್ತದೆ. ಇದರ ಹಿಂದೆ ಯಾವ ರಾಜಕೀಯ ಪಕ್ಷ ಇದೆ ಅಂತ ಎಲ್ಲರಿಗೂ ಗೊತ್ತಿದೆ. ಕಾನೂನು ಪ್ರಕಾರ ಮೇಲ್ಮನವಿ ಸಲ್ಲಿಸಿ ಹೋರಾಟ ಮುಂದುವರಿಸಬಹುದು ಎಂದು ತಿಳಿಸಿದರು.

ತೆರಿಗೆ ವಿನಾಯಿತಿ ಬಗ್ಗೆ ಚರ್ಚೆ: ಇದೇ ವೇಳೆ, ಪುನೀತ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಅವರು, ಪುನೀತ್​ ನಮ್ಮ ಮಧ್ಯೆ ಸದ್ಯ ಇಲ್ಲ. ಕೆಲವರು ಸತ್ತಾಗ ಮರೆಯುವುದು ಸರ್ವೇಸಾಮಾನ್ಯ. ಆದರೆ, ಅವರು ಇಲ್ಲ ಎಂದರೂ ಬದುಕಿರುವ ರೀತಿ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ. ಪುನೀತ್​ಗೆ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಆದಷ್ಟು ಬೇಗ ಅದನ್ನ ಕೊಡುವ ಕೆಲಸ ಆಗುತ್ತದೆ ಎಂದರು.

ಪುನೀತ್​ ಅವರ ಕೊನೆಯ ಚಿತ್ರ 'ಜೇಮ್ಸ್' ಬಿಡುಗಡೆಯಾಗಿದೆ. ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರವಾಗಿ ಅಭಿಮಾನಿಗಳು ನನಗೆ ಕರೆ ಮಾಡಿದ್ದರು. ಹೀಗಾಗಿ ಸಿನಿಮಾಗೆ ತೆರಿಗೆ ವಿನಾಯಿತಿ ಅವಕಾಶ ನೀಡಬೇಕೆಂದು ಸಿಎಂ ಬಳಿ ಚರ್ಚೆ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಣೆ.. ಜೇಮ್ಸ್ ಗಿಲ್ಲ ಹೆಲಿಕಾಪ್ಟರ್ ಪುಷ್ಪಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.